ಬ್ಲೌಸ್ ಇಲ್ಲದ ಸೀರೆಗಳ ತೊಟ್ಟು ವಿಡಿಯೋ ಶೂಟ್ ಮಾಡಿಸಿಕೊಂಡಿದ್ದಾರೆ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್. ಇದನ್ನು ನೋಡಿದ ನೆಟ್ಟಿಗರು ಏನಂದ್ರು?
ಒಂದು ಕಾಲದಲ್ಲಿ ಬಾಲಿವುಡ್ ಆಳಿದ್ದ ಸುಂದರಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್ (Janhvi Kapoor) ಸದಾ ಸುದ್ದಿಯಲ್ಲಿ ಇರುತ್ತಾರೆ. ಹೆಚ್ಚಾಗಿ ಬಿಕಿನಿ ತೊಟ್ಟು ಇಲ್ಲವೇ ಚಿಕ್ಕ ಉಡುಗೆ ಹಾಕಿಕೊಂಡು ಇವರು ಟ್ರೋಲ್ ಆಗುತ್ತಿರುವುದೇ ಹೆಚ್ಚು. ಶ್ರೀದೇವಿಯಂಥ ನಟಿಯ ಮಗಳು ಈ ರೀತಿಯ ಡ್ರೆಸ್ ಧರಿಸುವುದು ಸರಿಯಲ್ಲ ಎಂದು ನೆಟ್ಟಿಗರು ಪಾಠ ಮಾಡುತ್ತಲೇ ಇರುತ್ತಾರೆ. ಆದರೆ ಇದ್ಯಾವುದಕ್ಕೂ ಕೇರೇ ಅನ್ನದ ನಟಿ, ಸದಾ ಡೇಟಿಂಗ್, ಪಾರ್ಟಿ, ಟೂರ್ ಎನ್ನುತ್ತಲೇ ಇರುತ್ತಾರೆ. ಇದೀಗ ಜಾಹ್ನವಿ ಕಪೂರ್, ಬ್ಲೌಸ್ ಇಲ್ಲದ ಹಲವು ಸೀರೆಗಳನ್ನು ತೊಟ್ಟು ವಿಡಿಯೋ ಶೂಟ್ ಮಾಡಿಸಿಕೊಂಡಿದ್ದಾರೆ. ಐದಾರು ರೀತಿಯ ಸೀರೆಗಳಲ್ಲಿ ನಟಿ ಮಿಂಚಿದ್ದಾರೆ. ಕುತೂಹಲ ವಿಷಯವೆಂದರೆ ಯಾವುದೇ ಸೀರೆಗಳಿಗೂ ರವಿಕೆ ತೊಟ್ಟಿಲ್ಲ. ಇನ್ನೂ ವಿಚಿತ್ರ ಎಂದರೆ, ಹೀಗೆ ರವಿಕೆರಹಿತ ಸೀರೆ ನೋಡಿ ಸೀರೆಯ ಜಾಹೀರಾತು ಎಂದುಕೊಂಡರೆ ಅದು ತಪ್ಪು. ಏಕೆಂದರೆ ಇದು ಕೂದಲಿನ ಜಾಹೀರಾತು ಎಂದು ಬರೆಯಲಾಗಿದೆ.
ಉದ್ದನೇ ಕೂದಲನ್ನು ಹಾಕಿಕೊಂಡು ಸೀರೆಗೆ ಪೋಸ್ ನೀಡಲಾಗಿದೆ. ಇದಕ್ಕೆ ಸಾಕ್ಷಿಯಾಗಿ ಈಕೆಯ ಕೂದಲಿನ ಸೌಂದರ್ಯವನ್ನೂ ಇದರಲ್ಲಿ ನೋಡಬಹುದು. ಕೂದಲು ಹಾರಾಡುವಂತೆ ಬ್ಯಾಕ್ಗ್ರೌಂಡ್ ಮಾಡಲಾಗಿದ್ದು, ಇದರಲ್ಲಿಯೂ ಜಾಹ್ನವಿ ಸುಂದರಿಯಾಗಿಯೇ ಕಾಣಿಸುತ್ತಿದ್ದಾರೆ. ಈ ವಿಡಿಯೋಗೆ ಸಹಸ್ರಾರು ಲೈಕ್ಸ್ ಬಂದಿವೆ. ಮಿಡಿ, ಮಿನಿ, ಎದೆ ಪ್ರದರ್ಶನ ಎಲ್ಲವುಗಳಿಗಿಂತಲೂ ಅತ್ಯಂತ ಸರಳ ಸುಂದರವಾಗಿ ಕಾಣಿಸುತ್ತೀರಿ ಎಂದಿದ್ದಾರೆ ಹಲವರು. ರವಿಕೆ ಧರಿಸದಿದ್ದರೂ ಯಾವುದೇ ರೀತಿಯ ಅಸಹ್ಯಕ್ಕೆ ಎಡೆ ಮಾಡಿಕೊಡದೇ ಸುಂದರವಾಗಿ ಕಾಣಿಸುತ್ತಿದ್ದೀರಿ ಎಂದರೆ, ಇನ್ನು ಕೆಲವರು ಮಗಳಿಗೆ ತಿದ್ದಿ ಬುದ್ಧಿ ಹೇಳುವ ಅಮ್ಮ ಶ್ರೀದೇವಿ ಇಲ್ಲದ ಕಾರಣ, ಈಕೆ ಅಡ್ಡದಾರಿ ಹಿಡಿಯುವಂತೆ ಕಾಣಿಸುತ್ತಿದೆ ಎಂದೂ ಕಮೆಂಟ್ ಮಾಡುತ್ತಿದ್ದಾರೆ.
ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಮದ್ವೆ ಗುಟ್ಟಾಗಿ ನಡೆದೋಯ್ತಾ? ವೈರಲ್ ವಿಡಿಯೋ ನೋಡಿ ಭಾರಿ ಚರ್ಚೆ
ಅಷ್ಟಕ್ಕೂ ಸದ್ಯ ಜಾಹ್ನವಿ ಸುದ್ದಿಯಲ್ಲಿ ಇರುವುದು ಮದುವೆಯ ವಿಷಯದಿಂದಾಗಿ. ಕೆಲ ದಿನಗಳ ಹಿಂದೆ ಕದ್ದುಮುಚ್ಚಿ ನಟಿ ಜಾಹ್ನವಿ ಕಪೂರ್ ಮತ್ತು ಅವರ ಬಾಯ್ಫ್ರೆಂಡ್ ಶಿಖರ್ ಪಹಾರಿಯಾ ಅವರ ಮದ್ವೆಯಾಗೋಯ್ತು ಎಂದು ಭಾರಿ ಸುದ್ದಿಯಾಗಿತ್ತು. ಏಕೆಂದರೆ, ಕೆಲ ದಿನಗಳ ಹಿಂದೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ ಈ ಜೋಡಿ ಭೇಟಿ ನೀಡಿದ್ದ ಜೋಡಿ ಅಲ್ಲಿ ಒಟ್ಟಿಗೆ ಕುಳಿತು ದಂಪತಿಯಂತೆ ವಿಶೇಷ ಪೂಜೆ ಸಲ್ಲಿಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಇಬ್ಬರು ಒಟ್ಟಿಗೆ ಪೂಜೆ ಸಲ್ಲಿಸಿದ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಮದುವೆ ಆಗೋಯ್ತಾ ಅಥವಾ ಶೀಘ್ರವೇ ಮದ್ವೆ ಆಗಲಿದ್ದಾರೆ ಎನ್ನುವ ಚರ್ಚೆ ಬಿ-ಟೌನ್ನಲ್ಲಿ ಶುರುವಾಗಿತ್ತು. ಈ ಬಗ್ಗೆ ನಟಿಯಾಗಲೀ ಶಿಖರ್ ಆಗಲೀ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.
ಅಂದಹಾಗೆ, ಶಿಖರ್ ಪಹಾರಿಯಾ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಮೊಮ್ಮಗ. ಸುಶೀಲ್ ಕುಮಾರ್ ಶಿಂಧೆ (Sushil Kumar Shindhe) ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಶಿಖರ್ ಸ್ಮೃತಿ ಶಿಂಧೆ ಅವರ ಪುತ್ರ. ಶಿಖರ್ ಪಹರಿಯಾ ಜೊತೆ ಜಾಹ್ನವಿ ಡೇಟಿಂಗ್ ಮಾಡ್ತಿರೋ ವಿಷಯ ತುಂಬಾ ಹಳೆಯದು. ಇದಾಗಲೇ ಹಲವು ಕಡೆಗಳಲ್ಲಿ ಇವರು ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಫೋಟೋ ಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಸರಿಯಾಗಿ ನೆಲೆ ಕಂಡುಕೊಳ್ಳಲು ಅವರು ಪ್ರಯತ್ನಿಸುತ್ತಿರುವ ನಡುವೆಯೇ ಹೀಗೆಲ್ಲಾ ಸುದ್ದಿಯಾಗುತ್ತಲೇ ಇರುವ ಜಾಹ್ನವಿ ಈಗ ಬಾಯ್ ಫ್ರೆಂಡ್ (Boy Friend) ಜೊತೆ ಟ್ರಿಪ್ಗೆ ಹೋಗಿರುವ ಫೋಟೋಗಳು ವೈರಲ್ ಆಗಿದ್ದವು.
ಬಾಯ್ಫ್ರೆಂಡ್ ಜೊತೆ ಮತ್ತೆ ಜಾಹ್ನವಿ ಟೆಂಪಲ್ ರನ್: ಏನಮ್ಮಾ ನಿನ್ ಕಥೆ ಅಂತಿದ್ದಾರೆ ಫ್ಯಾನ್ಸ್!