ಮದುವೆಯಾದ ತಿಂಗಳಲ್ಲೇ ಗುಡ್‌ ನ್ಯೂಸ್‌ ರಿವೀಲ್ ಮಾಡಿದ ನಿಹಾರಿಕಾ ಕೊನಿಡೆಲಾ!

Suvarna News   | Asianet News
Published : Jan 11, 2021, 03:41 PM IST
ಮದುವೆಯಾದ ತಿಂಗಳಲ್ಲೇ ಗುಡ್‌ ನ್ಯೂಸ್‌ ರಿವೀಲ್ ಮಾಡಿದ ನಿಹಾರಿಕಾ ಕೊನಿಡೆಲಾ!

ಸಾರಾಂಶ

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ನಟಿ ನಿಹಾರಿಕಾ ಹೊಸ ವೆಬ್‌ ಸೀರಿಸ್‌ವೊಂದಕ್ಕೆ ಸಹಿ ಮಾಡಿದ್ದಾರೆ. ಪತಿ ಚೈನತ್ಯ ಜೊತೆ ಪ್ರಾಜೆಕ್ಟ್‌ ಲಾಂಚ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು..

ತೆಲಗು ಮೆಗಾ ಸ್ಟಾರ್ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಡಿಸೆಂಬರ್ 9, 2020ರಲ್ಲಿ ಉದ್ಯಮಿ ಚೈತನ್ಯ ಜೊತೆ ವೈವಾಹಿಕ ಬದುಕಿಗೆ  ಕಾಲಿಟ್ಟರು. ಪತಿ ಜೊತೆ ಮಾಲ್ಡೀವ್ಸ್‌, ಫ್ಯಾಮಿಲಿ ಜೊತೆ ಟೆಂಪಲ್‌ರನ್‌ನಲ್ಲಿ ಬ್ಯುಸಿಯಾಗಿರುವ ನಿಹಾರಿಕಾ, ಸೈಲೆಂಟ್‌ ಆಗಿ ಪ್ರಾಜೆಕ್ಟ್‌ವೊಂದಕ್ಕೆ ಸಹಿ ಮಾಡಿದ್ದಾರೆ.  ಇದಕ್ಕೆ ಪತಿ ಕೂಡ ಸಾಥ್ ಕೊಟ್ಟಿದ್ದಾರೆ.

ಬಾಗಿಲಿಗೆ ಆನೆ ತೋರಣ; ನಿಹಾರಿಕಾ ಮದುವೆ ವಿಶೇಷತೆಗಳೇನು ಗೊತ್ತಾ? 

ಹೌದು! ನಿಹಾರಿಕಾ ವೆಬ್‌ ಸೀರಿಸ್‌ನಲ್ಲಿ ನಟಿಸುತ್ತಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸರಳವಾಗಿ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಿಹಾರಿಕಾ ಮದುವೆ ನಂತರ ಮಾಡುತ್ತಿರುವ ಮೊದಲ ಪ್ರಾಜೆಕ್ಟ್ ಇದಾದ ಕಾರಣ ಚೈತನ್ಯ ಫುಲ್ ಸಪೋರ್ಟ್ ನೀಡಿದ್ದಾರೆ. 'ಓಕೆ ಕೆಲಸ ಆರಂಭಿಸೋಣ. ತುಂಬಾ ಸಂತೋಷವಾಗುತ್ತಿದೆ ಈ ಪ್ರಾಜೆಕ್ಟ್‌ಗೆ ಸಹಿ ಮಾಡಲು,' ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದು ಕೊಂಡಿದ್ದಾರೆ.

ವೆಬ್‌ ಸೀರಿಸ್‌ ಚಿತ್ರೀಕರಣ ಆರಂಭವಾಗಿದ್ದು, ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. 'ಇತ್ತೀಚಿನ ದಿನಗಳಲ್ಲಿ ಡಿಜಿಟಲ್‌ ವರ್ಲ್ಡ್‌ ಹೇಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದೊಂದು ಹೊಸ ಕಾನ್ಸೆಪ್ಟ್. ಲೀಡ್‌ ರೋಲ್ ಯಾರಿಗೆ ಎಂದು ನಿರ್ಧರಿಸುವಾಗ ನನಗೆ ಮೊದಲು ಜ್ಞಾಪಕ ಬಂದಿದ್ದು ನಿಹಾರಿಕಾ. ಕಥೆ ಹಿಡಿದು ಹೋದೆ, ಆಕೆ ಕಥೆ ಕೇಳಿದ ತಕ್ಷಣವೇ ಒಪ್ಪಿಕೊಂಡರು,' ಎಂದು ನಿರ್ದೇಶಕಿ ಕಮ್ ನಿರ್ಮಾಪಕಿಯಾಗಿರುವ ಭಾನು ಸೀರಿಸ್‌  ಹೇಳಿದ್ದಾರೆ.

ನಿಹಾರಿಕಾ- ಚೈತನ್ಯ ಮದುವೆ ಫೋಟೋ; ಹೇಗಿತ್ತು 'ಮೆಗಾ' ಸಂಭ್ರಮ? 

ನಿಹಾರಿಕಾ ಇಷ್ಟು ಬೇಗ ಪರ್ಸನಲ್‌ ಲೈಫ್‌ನಿಂದ ಪ್ರೊಫೆಷನ್ ಬಗ್ಗೆ ಗಮನ ಹರಿಸಿರುವುದಕ್ಕೆ ಹಾಗೂ ಮತ್ತೆ ನಟಿಯಾಗಿ ಕಮ್‌ಬ್ಯಾಕ್ ಮಾಡಿರುವುದಕ್ಕೆ ಅಭಿಮಾನಿಗಳು ಕಮೆಂಟ್‌ ಮೂಲಕ ಸಂತಸ ವ್ಯಕ್ತ ಪಡಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಪೆದ್ದಿ' ವಿವಾದ: ಜಾನ್ವಿ ಕಪೂರ್‌ ಪರ ನಿಂತು, ಚಿತ್ರರಂಗ ಮುಟ್ಟಿ ನೋಡಿಕೊಳ್ಳುವಂತೆ ಪೋಸ್ಟ್ ಮಾಡಿದ ನವ ನಟಿ!
ರೈಲಿನಿಂದ ಕಾಲು ಹೊರಗಿಟ್ಟರೆ ಪಕ್ಕದ ಟ್ರೈನ್ ತಾಗುತ್ತಾ? 'ಪೆದ್ದಿ' ಸಿನಿಮಾದಲ್ಲಿ ತೋರಿಸಿದ್ದು ನಿಜವೇ?