Nick Jonas Gift ಪ್ರಿಯಾಂಕಾ ಚೋಪ್ರಾಗೆ ಕಸ್ಟಮೈಸ್ ಕಾರು ಗಿಫ್ಟ್, ಸವಾರಿಗೂ ಸಫಾರಿಗೂ ಒಕೆ!

Published : May 21, 2022, 08:21 PM IST
Nick Jonas Gift ಪ್ರಿಯಾಂಕಾ ಚೋಪ್ರಾಗೆ ಕಸ್ಟಮೈಸ್ ಕಾರು ಗಿಫ್ಟ್, ಸವಾರಿಗೂ ಸಫಾರಿಗೂ ಒಕೆ!

ಸಾರಾಂಶ

ಪ್ರಿಯಾಂಕಾ ಚೋಪ್ರಾಗೆ ಪತಿ ನಿಕ್ ದುಬಾರಿ ಗಿಫ್ಟ್ ಪ್ರಿಯಾಂಕ ಅಭಿರುಚಿಗೆ ತಕ್ಕಂತೆ ಕಾರು ಮಾಡಿಫಿಕೇಶನ್ ಅತ್ಯುತ್ತಮ ಪತಿ ಎಂದ ಪ್ರಿಯಾಂಕಾ ಚೋಪ್ರಾ

ನವದೆಹಲಿ(ಮೇ.21): ಸೆಲೆಬ್ರೆಟಿ ಕಪಲ್ ಪೈಕಿ  ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಪತಿ ನಿಕ್ ಜೋನಸ್ ಭಾರಿ ಸದ್ದು ಮಾಡುತ್ತಿದ್ದಾರೆ. ಇದೀಗ ನಿಕ್ ಜೋನಸ್ ದುಬಾರಿ ಕಸ್ಟಮೈಸಡ್ ಕಾರು ಪತ್ನಿಗೆ ಗಿಫ್ಟ್ ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಜೋನ್ಸ್‌ನಿಂದ ಕಾರು ಗಿಫ್ಟ್ ಪಡೆದ ಪ್ರಿಯಾಂಕಾ ಅತ್ಯುತ್ತಮ ಪತಿ ಎಂದು ಬಣ್ಣಿಸಿದ್ದಾರೆ.

ಪತಿಯ ಗಿಫ್ಟ್ ಕುರಿತು ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾಗ್ರಾಂ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಕಾರನ್ನು ಸಂಪೂರ್ಣವಾಗಿ ಮಾಡಿಫಿಕೇಶನ್ ಮಾಡಲಾಗಿದೆ. ನಾಲ್ಕು ಸೀಟಿನ ಕಾರಾಗಿದ್ದು, ಸಫಾರಿ ಹಾಗೂ ಸವಾರಿಗೂ ಬೇಕಾದ ರೀತಿಯಲ್ಲಿ ಕಾರನ್ನು ಬದಲಾಯಿಸಲಾಗಿದೆ. 

Priyanka Chopra ನ್ಯೂಯಾರ್ಕ್ ರೆಸ್ಟೋರೆಂಟ್ 'ಸೋನಾ'ದಲ್ಲಿ Katrina-Vicky ದಂಪತಿ

ಕಾರಿನ ಡೋರ್ ಸೈಡ್‌ನಲ್ಲಿ ಮಿಸ್ಟರ್ ಜೋನಸ್ ಎಂದು ಬರೆಯಲಾಗಿದೆ. ಲೈಟ್ ಕಲರ್ ಉಬರ್ ಕೂಲ್ ಕಾರಿನ ಜೊತೆ ಪ್ರಿಯಾಂಕಾ ಚೋಪ್ರಾ ಫೋಸ್ ನೀಡಿದ್ದಾರೆ. ಕಾರಿನಲ್ಲಿ ಪ್ರಯಾಣಕ್ಕೆ ಮುಂದಾಗಿರುವ ಫೋಟೋ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ಪಡೆದಿದೆ.

ನಾಯಿಗೆ 36 ಲಕ್ಷದ ಜಾಕೆಟ್‌ ಖರೀದಿಸಿದ ನಟಿ ಪ್ರಿಯಾಂಕಾ
ದುಬಾರಿ ಮೌಲ್ಯದ ವಸ್ತುಗಳ ಖರೀದಿಗೆ ಖ್ಯಾತಿ ಹೊಂದಿರುವ ನಟಿ ಪ್ರಿಯಾಂಕಾ ಚೋಪ್ರಾ, ಈ ದುಬಾರಿ ಪ್ರೀತಿಯನ್ನು ತಮ್ಮ ನಾಯಿಗೂ ವಿಸ್ತರಿಸಿದ್ದಾರೆ. ಪ್ರಿಯಾಂಕಾ ದಿಯಾನಾ ಎಂಬ ಪುಟ್ಟನಾಯಿಮರಿಯನ್ನು ಸಾಕಿದ್ದು ಅದಕ್ಕೆ ಇತ್ತೀಚೆಗೆ ಭರ್ಜರಿ 36 ಲಕ್ಷ ರು.ಮೌಲ್ಯದ ಜಾಕೆಟ್‌ ಖರೀದಿಸಿ ತೊಡಿಸಿ ಸಂಭ್ರಮಿಸಿದ್ದಾರೆ. ಜಾಕೆಟ್‌ ಧರಿಸಿರುವ ದಿಯಾನಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿವೆ.

ಪತಿ ಜೊತೆ Priyanka Chopra Easter ಔಟಿಂಗ್‌; ನಟಿಯ ಬಟ್ಟೆ ಬೆಲೆ ಕೇಳಿದರೆ ತಲೆ ತಿರುಗುತ್ತೆ!

100 ದಿನದ ಚಿಕಿತ್ಸೆ ಬಳಿಕ ಪ್ರಿಯಾಂಕಾ ಪುತ್ರಿ ಆಸ್ಪತ್ರೆಯಿಂದ ಮನೆಗೆ
ಸುಮಾರು 100 ದಿನಗಳ ಚಿಕಿತ್ಸೆಯ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಜೋನಸ್‌ ಅವರ ಪುತ್ರಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಜನವರಿ ತಿಂಗಳಿನಲ್ಲಿ ಪ್ರಿಯಾಂಕಾ ಹಾಗೂ ಅವರ ಪತಿ ನಿಕ್‌ ಜೋನಸ್‌ ಬಾಡಿಗೆ ತಾಯ್ತನದ ವಿಧಾನದ ಮೂಲಕ ಹೆಣ್ಣುಮಗು ಪಡೆದುಕೊಂಡಿದ್ದರು. ಮಗುವಿಗೆ ಮಾಲತಿ ಮೇರಿ ಎಂದು ನಾಮಕರಣ ಮಾಡಿದ್ದರು. ಇನ್‌ಸ್ಟಾಗ್ರಾಂನಲ್ಲಿ ಮಗುವಿನೊಂದಿಗೆ ಫೋಟೋ ಪೋಸ್ಟ್‌ ಮಾಡಿದ ಪ್ರಿಯಾಂಕಾ, ‘ನಾನು ಕಳೆದ ತಿಂಗಳುಗಳಲ್ಲಿ ಅನುಭವಿಸಿದ ಏರಿಳಿತವನ್ನು ವಿವರಿಸಲು ಸಾಧ್ಯವಿಲ್ಲ. ಆದರೆ ಈ ತಾಯಂದಿರ ದಿನದಂದು ಸುಮಾರು 100 ದಿನ ಆಸ್ಪತ್ರೆಯಲ್ಲಿ ಕಳೆದ ಬಳಿಕ ಅಂತಿಮವಾಗಿ ಮಗುವನ್ನು ಮನೆಗೆ ಬರಮಾಡಿಕೊಳ್ಳುತ್ತಿದ್ದೇನೆ.’ ಎಂದು ಬರೆದಿದ್ದಾರೆ.

ಪ್ರಿಯಾಂಕಾ ಚೋಪ್ರಾ ಪುತ್ರಿ ಹೆಸರು ಮಾಲ್ತಿ
ಬಾಲಿವುಡ್‌ ನಟಿ ಪ್ರಿಯಾಂಕ ಚೋಪ್ರಾ ಮತ್ತು ಗಾಯಕ ನಿಕ್‌ ಜೋನಸ್‌ ಜೋಡಿ, ತಮ್ಮ ಪುತ್ರಿಗೆ ಮಾಲ್ತಿ ಮೇರಿ, ಚೋಪ್ರಾ ಜೋನಾಸ್‌ ಎಂದು ಹೆಸರಿಟ್ಟಿದ್ದಾರೆ. ರಾತ್ರಿ 8 ಗಂಟೆಯ ನಂತರ ಮಗು ಹುಟ್ಟಿದ್ದರಿಂದ ಮಾಲ್ತಿ ಮೇರಿ ಎಂದು ಹೆಸರಿಟ್ಟಿದ್ದು, ಮಾಲ್ತಿ ಎಂದರೆ ಬೆಳದಿಂಗಳು ಎಂದು ದಂಪತಿಗಳು ತಿಳಿಸಿದ್ದಾಗಿ ಅಮೇರಿಕಾದ ಟಿಎಂಝಢ್‌ ವೆಬ್‌ಸೈಟ್‌ ವರದಿಮಾಡಿದೆ. ಪ್ರಿಯಾಂಕಾ- ನಿಕ್‌ 2018ರಲ್ಲಿ ಮದುವೆಯಾಗಿದ್ದು, 2022 ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಹೆತ್ತಿದ್ದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?
ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?