ಅಲಿಯಾ ಭಟ್ ಬಳಿಕ Jr.NTR ಸಿನಿಮಾ ರಿಜೆಕ್ಟ್ ಮಾಡಿದ ಮತ್ತೋರ್ವ ಸ್ಟಾರ್ ನಟಿ

Published : May 21, 2022, 06:09 PM IST
ಅಲಿಯಾ ಭಟ್ ಬಳಿಕ Jr.NTR ಸಿನಿಮಾ ರಿಜೆಕ್ಟ್ ಮಾಡಿದ ಮತ್ತೋರ್ವ ಸ್ಟಾರ್ ನಟಿ

ಸಾರಾಂಶ

ಜೂ.ಎನ್ ಟಿ ಆರ್ 30ನೇ ಸಿನಿಮಾಗೆ ನಾಯಕಿ ಯಾರಾಗ್ತಾರೆ ಎನ್ನುವ ಚರ್ಚೆ ಪ್ರಾರಂಭವಾಗಿದೆ. ಈಗಾಗಲೇ ಬಾಲಿವುಡ್ ಸ್ಟಾರ್ ನಟಿಯ ಹೆಸರು ಕೇಳಿಬರುತ್ತಿದೆ. ಈ ಮೊದಲು ಸಿನಿಮಾತಂಡ ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಅವರನ್ನು ಅಪ್ರೋಚ್ ಮಾಡಲಾಗಿತ್ತಂತೆ. ಅಲಿಯಾ ನೋ ಎಂದ ಬಳಿಕ ದೀಪಿಕಾ ಪಡುಕೋಣೆ ಅವರನ್ನು ಸಿನಿಮಾತಂಡ ಕೇಳಿದೆ. ಆದರೆ ದೀಪಿಕಾ ಕೂಡ ರಿಜೆಕ್ಟ್ ಮಾಡಿದ್ದಾರೆ ಎನ್ನಲಾಗಿದೆ. 

ಟಾಲಿವುಡ್ ಸ್ಟಾರ್ ನಟ ಜೂ.ಎನ್ ಟಿ ಆರ್(Jr NTR) ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. 39ನೇ ವರ್ಷದ ಹುಟ್ಟುಹಬ್ಬ(Birthday) ಆಚರಿಸಿಕೊಂಡ ಜೂ ಎನ್ ಟಿ ಆರ್ ಅವರಿಗೆ ಅಭಿಮಾನಿಗಳು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಮಳೆಯ ಹರಿದಿದೆ. ಹುಟ್ಟುಹಬ್ಬದ ವಿಶೇಷವಾಗಿ ಜೂ ಎನ್ ಟಿ ಆರ್ ಎರಡು ಹೊಸ ಸಿನಿಮಾಗಳು ಘೋಷಣೆಯಾಗಿವೆ. ಜೂ ಎನ್ ಟಿ ಆರ್ ನಟನೆಯ 30ನೇ ಸಿನಿಮಾ ಮತ್ತು 31ನೇ ಸಿನಿಮಾ ಅನೌನ್ಸ್ ಆಗಿದೆ. ಅಂದಹಾಗೆ 30ನೇ ಸಿನಿಮಾಗೆ ಕೊರಟಾಲ ಶಿವ(Koratala Siva) ಆಕ್ಷನ್ ಕಟ್ ಹೇಳಿದ್ರೆ 31ನೇ ಸಿನಿಮಾಗೆ ಕೆಜಿಎಫ್-2(KGF 2) ನಿರ್ದೇಶಕ ಪ್ರಶಾಂತ್ ನೀಲ್ ಸಾರಥ್ಯ ವಹಿಸಿದ್ದಾರೆ.

ಅಂದಹಾಗೆ ಜೂ ಎನ್ ಟಿ ಆರ್ ಅವರ 30ನೇ ಸಿನಿಮಾ ಅನೇಕ ದಿನಗಳಿಂದ ಸದ್ದು ಮಾಡುತ್ತಿತ್ತು. ಕೊರಟಾಲ ಶಿವ ಸಾರಥ್ಯದಲ್ಲಿ ಸಿನಿಮಾ ಮೂಡಿಬರಲಿದೆ ಎನ್ನುವುದು ಆಗಲೇ ಅಭಿಮಾನಿಗಳಿಗೆ ತಿಳಿದಿತ್ತು. ಇದೀಗ ಅಧಿಕೃತವಾಗಿದೆ. ಅಂದಹಾಗೆ ಈ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಜೂ.ಎನ್ ಟಿ ಆರ್ 30ನೇ ಸಿನಿಮಾಗೆ ನಾಯಕಿ ಯಾರಾಗ್ತಾರೆ ಎನ್ನುವ ಚರ್ಚೆ ಪ್ರಾರಂಭವಾಗಿದೆ. ಈಗಾಗಲೇ ಬಾಲಿವುಡ್ ಸ್ಟಾರ್ ನಟಿಯ ಹೆಸರು ಕೇಳಿಬರುತ್ತಿದೆ. ಹೌದು, ಜೂ ಎನ್ ಟಿ ಆರ್ ಜೊತೆ ನಾಯಕಿಯಾಗಿ ಅಲಿಯಾ ಭಟ್ ಕಾಣಿಸಿಕೊಳ್ಳಲಿದ್ದಾರೆ, ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. 

Cannes 2022: ದೀಪಿಕಾ ಪಡುಕೋಣೆ ಧರಿಸಿದ್ದು ಬರೋಬ್ಬರಿ 3.8 ಕೋಟಿ ರೂ. ಬೆಲೆಯ ನೆಕ್ಲೇಸ್ !

ಈ ಮೊದಲು ಸಿನಿಮಾತಂಡ ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ಅವರನ್ನು ಅಪ್ರೋಚ್ ಮಾಡಲಾಗಿತ್ತಂತೆ. ಆದರೆ ಆಲಿಯಾ ಜೂ.ಎನ್ ಟಿ ಆರ್ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಆಲಿಯಾ ಮತ್ತು ಜೂ ಎನ್ ಟಿ ಆರ್ ಈ ಮೊದಲು ಬ್ಲಾಕ್ ಬಸ್ಟರ್ ಆರ್ ಆರ್ ಆರ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಹಾಗಾಗಿ ಮತ್ತೆ ಜೂ ಎನ್ ಟಿ ಆರ್ ಜೊತೆ ತೆರೆಹಂಚಿಕೊಳ್ಳಲು ಕೇಳಿದ್ದಾರೆ. ಆದರೆ ಬಾಲಿವುಡ್ ಬೆಡಗಿ ಇದಕ್ಕೆ ನೋ ಎಂದಿದ್ದಾರಂತೆ. ಆಲಿಯಾ ಬಳಿಕ ಸಿನಿಮಾ ತಂಡ ಮತ್ತೋರ್ವ ಸ್ಟಾರ್ ನಟಿಯ ಬಳಿ ಹೋಗಿದೆ. ಅದು ಮತ್ಯಾರು ಅಲ್ಲ ದೀಪಿಕಾ ಪಡುಕೋಣೆ.

Jr.NTR Birthday; ಪ್ರಶಾಂತ್ ನೀಲ್, ಜೂ. ಎನ್‌ಟಿಆರ್ ಸಿನಿಮಾದ ಫಸ್ಟ್ ಲುಕ್ ರಿಲೀಸ್, ಫ್ಯಾನ್ಸ್ ಫುಲ್ ಖುಷ್

ಹೌದು, ಕೊರಟಾಲ ಶಿವ ಆಂಡ್ ಟೀಂ ದೀಪಿಕಾ ಪಡುಕೋಣೆಗೆ ಅಪ್ರೋಚ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ದೀಪಿಕಾ, ಜೂ.ಎನ್ ಟಿ ಆರ್ ಜೊತೆ ನಟಿಸಲು ನೋ ಎಂದಿದ್ದಾರಂತೆ. ದೀಪಿಕಾ ರಿಜೆಕ್ಟ್ ಮಾಡಲು ಅಸಲಿ ಕಾರಣವೇನು ಎನ್ನುವುದು ಇನ್ನು ರಿವೀಲ್ ಆಗಿಲ್ಲ. ಕೊರಟಾಲ ಶಿವ ಈ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಮಾಡಲು ಪ್ಲಾನ್ ಮಾಡಿದ್ದಾರೆ. ಆಚಾರ್ಯ ಸಿನಿಮಾದ ಸೋಲಿನ ಬಳಿಕ ನಿರ್ದೇಶಕರು ಹೊಸ ಸಿನಿಮಾದಲ್ಲಿ ಕೆಲವು ಬದಲಾವಣೆ ಮಾಡಿಕೊಂಡಿದ್ದಾರಂತೆ. ಸದ್ಯ ಎಲ್ಲಾ ರೀತಿಯ ತಯಾರಿ ನಡೆಸುತ್ತಿರುವ ಜೂ.ಎನ್ ಟಿ ಆರ್ 30ನೇ ಸಿನಿಮಾತಂಡ ಸದ್ಯದಲ್ಲೇ ಚಿತ್ರೀಕರಣಕ್ಕೆ ಹೊರಡಲಿದೆ. ಆದರೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳುತ್ತಾರೆ ಎಂದು ಕಾದುನೋಡಬೇಕು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?