Thalapathy Vijay Jana Nayagan: ಜನನಾಯಗನ್ ಚಿತ್ರಕ್ಕಿನ್ನೂ ಸೆನ್ಸಾರ್ ಸರ್ಟಿಫಿಕೇಟ್‌ ಸಿಕ್ಕಿಲ್ಲ; ದಳಪತಿ ವಿಜಯ್ ಸಿನಿಮಾ ಬಿಡುಗಡೆ ಯಾವಾಗ?

Published : Jul 04, 2026, 12:15 PM IST
Thalapathy Vijay

ಸಾರಾಂಶ

ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣ ಮಾಡಿರುವ 'ಜನನಾಯಗನ್' ಸಿನಿಮಾವನ್ನು ಎಚ್.‌ ವಿನೋದ್‌ ನಿರ್ದೇಶಿಸಿದ್ದಾರೆ.  ಅನಿರುದ್ಧ್‌ ರವಿಚಂದರ್‌ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ದಳಪತಿ ವಿಜಯ್ ನಾಯಕತ್ವದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಮಲಯಾಳಂ ಮೂಲದ ನಟಿ ಮಮಿತಾ ಬೈಜು ನಾಯಕಿಯರಾಗಿ ನಟಿಸಿದ್ದಾರೆ.

ಜನನಾಯಗನ್‌ಗೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿಲ್ಲ! ಹಾಗಿದ್ರೆ ಅಗಿದ್ದೇನು?

'ತಮಿಳುನಾಡು ಸಿಎಂ ʻದಳಪತಿʼ ಖ್ಯಾತಿಯ ವಿಜಯ್‌ (Thalapathy Vijay) ಅವರ 'ಜನನಾಯಗನ್' (Jana Nayagan) ಸಿನಿಮಾಕ್ಕೆ ಸೆನ್ಸಾರ್‌ ಆಗಿದೆ, ಎ ಪ್ರಮಾಣ ಪತ್ರ ಸಿಕ್ಕಿದೆ' ಎಂಬ ವದಂತಿ ಜೋರಾಗಿ ಹಬ್ಬಿತ್ತು. ಆದರೆ, ಈ ಸುದ್ದಿ ಶುದ್ಧ ಸುಳ್ಳು ಎಂಬ ಸತ್ಯ ಇದೀಗ ರಿವೀಲ್ ಆಗಿದೆ. ಸಿನಿಮಾಗೆ ಸೆನ್ಸಾರ್‌ ಪ್ರಕ್ರಿಯೆ ಮುಗಿದಿದೆ, ಹೀಗಾಗಿ ಜುಲೈನಲ್ಲೇ ತೆರೆಗೆ ಬರುವುದು ಖಚಿತ ಎಂಬ ಮಾತುಗಳು ಕೇಳಿಬಂದಿತ್ತು. ಆದರೆ ಅಸಲೀ ಸತ್ಯ ಬೇರೆಯೇ ಇದೆ. ಈಗ ಕೇಳಿಬರುತ್ತಿರುವ ಆಪ್ತ ಮೂಲಗಳ ಮಾಹಿತಿ ಪ್ರಕಾರ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (CBFC) ವಿಜಯ್ ಚಿತ್ರ 'ಜನನಾಯಗನ್‌ಗೆ ಇನ್ನೂ ಸೆನ್ಸಾರ್‌ ಪ್ರಮಾಣ ಪತ್ರ ಸಿಕ್ಕಿಲ್ಲ. ಸೆನ್ಸಾರ್ ಆದಮೇಲಷ್ಟೇ ಬಿಡುಗಡೆ ದಿನಾಂಕ ಘೋಷಣೆ ಆಗಲಿದೆ ಎಂಬ ಅಸಲೀ ಸತ್ಯ ಚಿತ್ರತಂಡ ಹೇಳಿದೆ.

ಹಾಗಿದ್ದರೆ ಜನನಾಯಗನ್‌ ಸಿನಿಮಾ ಕಥೆ ಏನು?

ಹೌದು, ಜನನಾಯಗನ್ ಸಿನಿಮಾಗೆ ಇನ್ನೂ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿಲ್ಲ, ಸೆನ್ಸಾರ್ ಮಂಡಳಿಯ ಅನುಮೋದನೆಗಾಗಿ ಕಾಯಲಾಗುತ್ತಿದೆ. ಮುಂದಿನ ವಾರದೊಳಗೆ ಎಲ್ಲಾ ಪ್ರಕ್ರಿಯೆಗಳು ಮುಗಿಯುವ ನಿರೀಕ್ಷೆಯಿದೆ. ಈ ಬಗ್ಗೆ ವಿಶ್ವಾಸಾರ್ಹ ಮೂಲವೊಂದು ಹೇಳುವಂತೆ, "ನಾವು ಇನ್ನೂ ಸೆನ್ಸಾರ್‌ ಪ್ರಮಾಣ ಪತ್ರಕ್ಕಾಗಿ ಕಾಯುತ್ತಿದ್ದೇವೆ. ಅದು ಮುಂದಿನ ವಾರದೊಳಗೆ ಮುಗಿಯುವ ನಿರೀಕ್ಷೆಯಿದೆ. ಸದ್ಯಕ್ಕೆ ಚಿತ್ರಕ್ಕೆ 'ಎ' ಪ್ರಮಾಣಪತ್ರ ಸಿಕ್ಕಿದೆ ಎಂಬ ಸುದ್ದಿಗಳೆಲ್ಲವೂ ಬರಿಯ ವದಂತಿಗಳಷ್ಟೇ. ಆದರೆ, ನಮಗೆ ಶೀಘ್ರದಲ್ಲೇ ಪ್ರಮಾಣಪತ್ರ ಸಿಗುವ ಭರವಸೆ ಇದೆ, ಆ ನಂತರ ನಾವು ಬಿಡುಗಡೆ ದಿನಾಂಕವನ್ನು ಪ್ರಕಟಿಸಲಿದ್ದೇವೆ' ಎಂದು ಜನನಾಯಗನ್ ಚಿತ್ರತಂಡದ ಮೂಲಗಳು ತಿಳಿಸಿವೆ.

ʻಸತ್ಯ ಹೇಳೋಕೆ ನಂಗೂ ಧೈರ್ಯ ಇಲ್ಲʼ ಎಂದ ನಿರ್ದೇಶಕ ಹೆಚ್. ವಿನೋದ್

ಈ ಮೊದಲು ದಳಪತಿ ವಿಜಯ್ ಸಿನಿಮಾ 'ಜನನಾಯಗನ್' ಜುಲೈ 16ಕ್ಕೆ ಬಿಡುಗಡೆ ಎನ್ನಲಾಗಿತ್ತು. ಈ ಚಿತ್ರಕ್ಕೆ ಕೆಲವು ಕಟ್‌ಗಳನ್ನು ಸೂಚಿಸಿ, 'ಎ' ಪ್ರಮಾಣಪತ್ರವನ್ನು ಸಿಬಿಎಫ್‌ಸಿ ನೀಡಿದೆ ಎಂದು ಸುದ್ದಿ ಆಗಿತ್ತು. ನಿರ್ಮಾಪಕರು ಈ ಚಿತ್ರವನ್ನು ಜುಲೈ 16 ರಂದು ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದಾರೆ, ಒಮ್ಮೆ ಈ ದಿನಾಂಕ ಬದಲಾದರೆ, ಜುಲೈ 24 ರಂದು ರಿಲೀಸ್‌ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಜೊತೆಗೆ, ಜುಲೈ 31 ರಂದು ರಿಲೀಸ್‌ ಮಾಡುವ ಪ್ಲಾನ್ ಕೂಡ ಇದೆ. ಆದರೆ, ಅದೇ ದಿನ ವಿಜಯ್‌ ಅವರ ಮಗ ಜೇಸನ್ ಸಂಜಯ್ ಅವರ ಚೊಚ್ಚಲ ನಿರ್ದೇಶನದ 'ಸಿಗ್ಮಾ' ಚಿತ್ರವು ರಿಲೀಸ್‌ ಆಗುತ್ತಿರುವುದರಿಂದ ಅಂತಿಮ ನಿರ್ಧಾರ ಆಗಿಲ್ಲ ಎಂದೆಲ್ಲಾ ಸುದ್ದಿ ಹಬ್ಬಿಸಲಾಗಿತ್ತು. ಆದರೆ ಈಗ ಈ ಎಲ್ಲಾ ಸುದ್ದಿಗಳಿಗೆ ಯಾವುದೇ ಅಧಿಕೃತ ಆಧಾರವಿಲ್ಲ ಎಂಬುದು ತಿಳಿದುಬಂದಿದೆ.

ಪೈರಸಿ ಕಾಪಿ ಹೊರಗೆ, ಭರ್ಜರಿ ವೀಕ್ಷಣೆ

'ಜನ ನಾಯಗನ್' ಚಿತ್ರವು ಸೆನ್ಸಾರ್ ಪ್ರಮಾಣಪತ್ರ ಪಡೆಯುವ ಮೊದಲೇ‌ ಲೀಕ್‌ ಆಗಿದೆ. ಏಪ್ರಿಲ್ 9 ರಂದು ಆನ್‌ಲೈನ್‌ನಲ್ಲಿ 'ಜನ ನಾಯಗನ್' ಲೀಕ್‌ ಆಗಿದ್ದು, 1.20 ಕೋಟಿ ಮಂದಿ ಈ ಸಿನಿಮಾವನ್ನು ಕಾನೂನುಬಾಹಿರವಾಗಿ ವೀಕ್ಷಿಸಿದ್ದಾರೆ ಎಂದು ಚೆನ್ನೈ ಪೊಲೀಸರು ಮದ್ರಾಸ್ ಹೈಕೋರ್ಟ್‌ಗೆ ತಿಳಿಸಿದ್ದಾರೆ. 'ಜನ ನಾಯಗನ್' ಸಿನಿಮಾವನ್ನು ಲೀಕ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 21 ಆರೋಪಿಗಳನ್ನು ಈಗಾಗಲೇ ಆರೆಸ್ಟ್‌ ಮಾಡಲಾಗಿದೆ. ತನಿಖೆ ಪ್ರಗತಿಯಲ್ಲಿದೆ.

ಅಂದಹಾಗೆ. ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣ ಮಾಡಿರುವ 'ಜನನಾಯಗನ್' ಸಿನಿಮಾವನ್ನು ಎಚ್.‌ ವಿನೋದ್‌ ನಿರ್ದೇಶಿಸಿದ್ದಾರೆ. ತೆಲುಗಿನ ಭಗವಂತ್ ಕೇಸರಿ ಚಿತ್ರವನ್ನುಸ್ಪೂರ್ತಿಯಾಗಿ ಇಟ್ಟುಕೊಂಡು, ಜನ ನಾಯಗನ್‌ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆಯಂತೆ. ಅನಿರುದ್ಧ್‌ ರವಿಚಂದರ್‌ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ದಳಪತಿ ವಿಜಯ್ ನಾಯಕತ್ವದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಮಲಯಾಳಂ ಮೂಲದ ನಟಿ ಮಮಿತಾ ಬೈಜು ನಾಯಕಿಯರಾಗಿ ನಟಿಸಿದ್ದಾರೆ. ಪೂಜಾ ಹೆಗ್ಡೆ 'ಕಾಯಲ್' ಎಂಬ ಪಾತ್ರವನ್ನು, ಹಾಗೂ ಮಮಿತಾ ಬೈಜು 'ವಿಜಯಲಕ್ಷ್ಮಿ' ಪಾತ್ರವನ್ನು ನಿರ್ವಹಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Toxic: ಯಶ್‌ಗಿಂತ ಯಾರು ದೊಡ್ಡವರು, ಯಾರು ಚಿಕ್ಕವರು? ಇಲ್ಲಿದೆ 5 ಹೀರೋಯಿನ್‌ಗಳ ಅಸಲಿ ವಯಸ್ಸು!
Hrithik Roshan Sussanne Khan Divirce Secret: ಆ 400 ಕೋಟಿ ಸೀಕ್ರೆಟ್ ಈಗ ಬಯಲಾಯ್ತು; ಹೃತಿಕ್-ಸುಸೇನ್ ಡಿವೋರ್ಸ್ ಕೇಸ್‌ನಲ್ಲಿ ನಿಜವಾಗಿ ನಡೆದಿದ್ದೇನು?