
ವಾರಾಂತ್ಯ ಬಂದರೆ ಸಾಕು ಮನೆಮಂದಿಯೆಲ್ಲಾ ಕುಳಿತು ನೋಡಲು ಸಿನಿಮಾ ಪ್ರೇಮಿಗಳು ಹೊಸ ಹೊಸ ಕಂಟೆಂಟ್‌ಗಾಗಿ ಡಿಜಿಟಲ್ ವೇದಿಕೆಗಳನ್ನು ಹುಡುಕಾಡುತ್ತಾರೆ. ಇಂತಹ ಜನರಿಗೆ ಮನರಂಜನೆ ನೀಡುಲು ಈ ವಾರ ಓಟಿಟಿ ಸಂಸ್ಥೆಗಳು ಭಾರೀ ಪ್ಲ್ಯಾನ್ ಮಾಡಿಕೊಂಡಿದೆ. ಪ್ರಮುಖವಾಗಿ ಸೆಪ್ಟೆಂಬರ್ 18ರಂದು ಒಂದೇ ದಿನ ಬೇರೆ ಬೇರೆ ಭಾಷೆಗಳಲ್ಲಿ, ವಿಭಿನ್ನ ಕಥೆಗಳನ್ನು ಹೊಂದಿರುವ ಸಿನಿಮಾಗಳು, ವೆಬ್ ಸೀರಿಸ್‌ಗಳು ಸ್ಟ್ರೀಮಿಂಗ್ ಆಗುತ್ತಿವೆ. ಎಮೋಷನ್ಸ್, ಆಕ್ಷನ್, ಕಾಮಿಡಿ, ಹರರ್ ಜಾನರ್ ಹೊಂದಿರುವ ಸಿನಿಮಾಗಳು ಒಂದೇ ಬಾರಿಗೆ ಸಿನಿಮಾ ಪ್ರೇಮಿಗಳ ಮುಂದೆ ಬಂದಿದೆ.
ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ಅವರ ಡೆಬ್ಯೂ ಸಿನಿಮಾ. ವಿವೇಕಾ ನಿರ್ದೇಶನದ ಈ ಕ್ರೈಂ ಡ್ರಾಮಾ ಸಿನಿಮಾ ಮೈಸೂರಿನಲ್ಲಿ 2000 ದಶಕದ ಹಿನ್ನೆಲೆಯನ್ನು ಹೊಂದಿದೆ. ಸೆಪ್ಟೆಂಬರ್ 14ರಂದು ಜಿಯೋ ಹಾಟ್‌ಸ್ಟಾರ್ನಲ್ಲಿ ಕನ್ನಡ ಸೇರಿದಂತೆ ಪ್ರಮುಖ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಟಾಲಿವುಡ್ ನಟ ರವಿತೇಜ, ಶಿವ ನಿರ್ವಾಣ ಕಾಂಬಿನೇಷನ್‌ನಲ್ಲಿ ಬಂದ ಸಿನಿಮಾ 'ಇರುಮುಡಿ' ಬಾಕ್ಸಾಫೀಸ್ ಬಳಿ ಹಣ ಮಳೆಯನ್ನೇ ಸುರಿಸಿತ್ತು. ಯೂಥ್, ಫ್ಯಾಮಿಲಿ ಎಂಬ ಅಭಿಮಾನಿಗಳು ಎಂಬ ವ್ಯತ್ಯಾಸವಿಲ್ಲದೆ, ಎಲ್ಲಾ ವರ್ಗದ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದೆ. ಥಿಯೇಟರ್‌ನಲ್ಲಿ ಸಿನಿಮಾ ಅಭಿಮಾನಿಗಳ ಕಣ್ಣೀನಲ್ಲಿ ನೀರು ತರಿಸಿದ್ದ ಈ ಸಿನಿಮಾ 18ರಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ತಂದೆ-ಮಗಳ ನಡುವೆ ಬಲವಾದ ಅನುಬಂಧ, ಅಯ್ಯಪ್ಪಸ್ವಾಮಿ ಮಾಲೆಧರಿಸುವ ಹಿನ್ನೆಲೆಯೊಂದಿಗೆ ತೆರೆಗೆ ಬಂದ ಈ ಸಿನಿಮಾ ಓಟಿಟಿಯಲ್ಲಿ ಏನೆಲ್ಲಾ ದಾಖಲೆ ಸೃಷ್ಟಿಸುತ್ತದೆ ಅಂತ ಕಾದು ನೋಡಬೇಕಿದೆ.
ನಟ ವೈವಾ ಹರ್ಷ ನಟಿಸಿರುವ ಹಾಸ್ಯ ಪ್ರಧಾನ ಸಿನಿಮಾ 'ಲೀಸ್ಟ್ ಎಲಿಜಿಬಲ್ ಬ್ಯಾಚುಲರ್', ಅವಿವಾಹಿತ ಜೀವನದ ಮೋಜಿನ ಕ್ಷಣಗಳು ಮತ್ತು ಮದುವೆಯಾಗುವಂತೆ ಹಿರಿಯರು ಮಾಡುವ ಒತ್ತಡ ಸನ್ನಿವೇಶಗಳು ಹಾಗೂ ಮದುವೆ ಸಂಬಂಧದ ಮಾತುಕತೆಗಳ ಸಂದರ್ಭದಲ್ಲಿ ಉಂಟಾಗುವ ಗೊಂದಲಗಳ ಕುರಿತಂತೆ ಅತ್ಯಂತ ಹಾಸ್ಯಮಯವಾಗಿ ಸಿನಿಮಾದಲ್ಲಿ ತೋರಿಸಲಾಗಿದೆ. ಚಿತ್ರದ ಕಥಾಹಂದರ ಗಂಭೀರವಾಗಿದ್ರು, ಹಗುರ ಹಾಸದ್ಯದ ಮೂಲಕ ಮನರಂಜನಾತ್ಮಕವಾಗಿ ನೋಡಲು ಇದು ಅತ್ಯುತ್ತಮ ಆಯ್ಕೆಯಾಗಿದೆ. ಈಟಿವಿ ವಿನ್ ನಲ್ಲಿ ಸಿನಿಮಾ ನೋಡಲು ಲಭ್ಯವಿದೆ.
ಮಲಯಾಳಂ ಸ್ಟಾರ್ ನಟ ಮೋಹನ್‌ಲಾಲ್ ಮಗಳು ವಿಸ್ಮಯಾ ಮೋಹನ್‌ಲಾಲ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ‘ತುಡಕ್ಕಮ್’. ಆಂಥೋನಿ ಜೋಸೆಫ್ ನಿರ್ದೇಶನದ ಈ ಸಿನಿಮಾ ಸರ್ವೈವಲ್ ಆಯಕ್ಷನ್ ಥ್ರಿಲ್ಲರ್ ಕಥೆಯನ್ನು ಹೊಂದಿದ್ದು, ತಂದೆಯೊಂದಿಗೆ ಸಾಮಾನ್ಯ ಜೀವನ ನಡೆಸುತ್ತಿದ್ದ ಯುವತಿಗೆ ಊಹೆಗೂ ಮೀರಿದ ಅಪಾಯ ಎದುರಾಗುತ್ತದೆ. ಈ ವೇಳೆ ತನ್ನವರನ್ನು ರಕ್ಷಿಸಿಕೊಳ್ಳಲು ಮಾರ್ಷಲ್ ಆರ್ಟ್ಸ್ ನೊಂದಿಗೆ ಹೇಗೆ ಹೋರಾಟ ಮಾಡುತ್ತಾಳೆ ಎಂಬುವುದೇ ಇಲ್ಲಿನ ಹೈಲೈಟ್, ಈ ಸಿನಿಮಾ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರಿಮ್ಮಿಂಗ್ ಆಗುತ್ತಿದೆ.
ವಿಮರ್ಶಕರ ಮೆಚ್ಚುಗೆಗೆ ಪಾತ್ರವಾದ 'ಲಸ್ಟ್ ಸ್ಟೋರೀಸ್' (Lust Stories) ಆಂಥಾಲಜಿ ಸರಣಿಯು ಈಗ ತನ್ನ 3ನೇ ಭಾಗ ಈ ಸಿನಿಮಾ. ವಿಕ್ರಮಾದಿತ್ಯ ಮೊಟ್ವಾನೆ, ಕಿರಣ್ ರಾವ್, ಶಕುನ್ ಬಾತ್ರಾ ಮತ್ತು ವಿಶಾಲ್ ಭಾರದ್ವಾಜ್ ಅವರಂತಹ ಖ್ಯಾತ ನಿರ್ದೇಶಕರು ನಿರ್ದೇಶಿಸಿದ ನಾಲ್ಕು ವಿಭಿನ್ನ ಕಥೆಗಳನ್ನು ಈ ಸಿನಿಮಾ ಒಳಗೊಂಡಿದೆ. ರಾಧಿಕಾ ಆಪ್ಟೆ, ಕೊಂಕಣಾ ಸೇನ್ ಶರ್ಮಾ, ಅದಿತಿ ರಾವ್ ಹೈದರಿ, ಸಿದ್ಧಾರ್ಥ್ ಮತ್ತು ವಿಜಯ್ ವರ್ಮಾ ಅವರಂತಹ ಪ್ರತಿಭಾವಂತ ನಟ-ನಟಿಯರು ಅಭಿನಯಿಸಿರುವ ಈ ಸಿನಿಮಾ, ಮಾನವ ಸಂಬಂಧಗಳಲ್ಲಿನ ಆಂತರಿಕ ಸಂಘರ್ಷಗಳನ್ನು ಅನಾವರಣಗೊಳಿಸುತ್ತದೆ, ನೆಟ್‌ಫ್ಲಿಕ್ಸ್‌ನಲ್ಲಿ ನೋಡಲು ಲಭ್ಯವಿದೆ.
ಲೀ ಕ್ರೊನಿನ್ ಸೃಷ್ಟಿಸಿರುವ ಈ ಭಯಾನಕ ಕಥಾಹಂದರದ ಚಿತ್ರವು ಸೆಪ್ಟೆಂಬರ್ 17 ರಂದು ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಈಜಿಪ್ಟ್‌ನಲ್ಲಿ ನಾಪತ್ತೆಯಾಗಿದ್ದ ಬಾಲಕಿಯೊಬ್ಬಳು ಎಂಟು ವರ್ಷಗಳ ನಂತರ ಪತ್ತೆಯಾದ ಬಳಿಕ, ಆಕೆಯ ಕುಟುಂಬದಲ್ಲಿ ಉಂಟಾಗುವ ಆತಂಕಕಾರಿ ಸನ್ನಿವೇಶದ ಕಥೆಯ ಮೂಲಕ ಇದು ಪ್ರೇಕ್ಷಕರಲ್ಲಿ ಭಯ ಹುಟ್ಟಿಸುವ ಭರವಸೆ ನೀಡುತ್ತದೆ. ಈ ವಾರಾಂತ್ಯದಲ್ಲಿ ಎಮೋಷನಲ್, ಕಾಮಿಡಿ, ಥ್ರಿಲ್, ಹಾರರ್ ನೊಂದಿಗೆ ಕುಡಿದ ಬಿಗ್ ಕಂಟೆಂಟ್ ಸಿನಿಮಾಗಳು ಓಟಿಟಿಯಲ್ಲಿ ಲಭ್ಯವಿದ್ದು, ಸಿನಿಮಾ ಪ್ರೇಕ್ಷಕರಿಗೆ ನಿಜವಾಗಿಯೂ ಇದು ಹಬ್ಬದ ವಾತಾವರಣ ಎಂದು ಹೇಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.