
ಬಾಲಿವುಡ್ ಬೋಲ್ಡ್ ನಟಿ ರಾಧಿಕಾ ಆಪ್ಟೆ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಗರಂ ಆಗಿದ್ದಾರೆ. ತಮ್ಮ ಬೋಲ್ಡ್ ಸಿನಿಮಾ 'ಪರ್ಚೇಡ್' ಚಿತ್ರದಲ್ಲಿ ಸಣ್ಣ ವಿಡಿಯೋ ಕ್ಲಿಪ್ ಹಾಗೂ ಫೋಟೋ ವೈರಲ್ ಆಗುತ್ತಿದೆ, ಟ್ಟಿಟರ್‌ನಲ್ಲಿ ನೆಟ್ಟಿಗರು ರಾಧಿಕಾನ ಬ್ಯಾನ್ ಮಾಡಿ ಎಂದು ಒತ್ತಾಯ ಮಾಡುತ್ತಿದ್ದಾರೆ.
2015ರಲ್ಲಿ ಬಿಡುಗಡೆ ಆದ ಬೋಲ್ಡ್ ಸಿನಿಮಾ 'ಪರ್ಚೆಡ್' ದೊಡ್ಡ ಸುದ್ದಿ ಮಾಡಿತ್ತು. ಈ ಚಿತ್ರದಲ್ಲಿ ರಾಧಿಕಾ ಲೆಸ್ಬಿಯನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಒಂದು ಇಂಟಿಮೇಟ್ ದೃಶ್ಯದಲ್ಲಿ ರಾಧಿಕಾ ಟಾಪ್‌ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೂಲಕ ಅಶ್ಲೀಲ ವಿಷಯವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಗರಂ ಆಗಿದ್ದಾರೆ.
ಬಾಲಿವುಡ್‌ನಲ್ಲಿ ಅನೇಕ ಸಿನಿಮಾಗಳು ಸಂಸ್ಕೃತಿ ವಿರುದ್ಧವಾಗಿದೆ ಆದರೆ ರಾಧಿಕಾ ಸಿನಿಮಾದಲ್ಲಿ ಇದೇ ರೀತಿ ಇರುತ್ತದೆ ಎಂದು ನೆಟ್ಟಿಗರು ಹೇಳಿದ್ದಾರೆ. ರಾಧಿಕಾ ಮೇನ್ ಹೈಲೈಟ್ ಆಗಿದ್ದು, ಇನ್ನಿತರೆ ಸ್ಟಾರ್‌ಗಳ ವಿರುದ್ಧವೂ ಗರಂ ಆಗಿದ್ದಾರೆ. ರಾಧಿಕಾ ಹಾಗೂ ರಾಜ್ ಕುಂದ್ರಾ ಅವರ ಬ್ಯುಸಿನೆಸ್ ಜೊತೆಯೂ ಕೈ ಜೋಡಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.