'ತಲೈವಿ' ಲುಕ್‌ ರಿವೀಲ್; ಕಂಗನಾ ವಿರುದ್ಧ ನೆಟ್ಟಿಗರು ಆಕ್ರೋಶ!

By Web Desk  |  First Published Nov 24, 2019, 10:55 AM IST

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌ನ ಮೊದಲ ಲುಕ್‌ ರಿವೀಲ್ ಮಾಡಲಾಗಿದ್ದು ಪ್ರೇಕ್ಷಕರ ನಿರೀಕ್ಷೆ ಹಾಳು ಮಾಡಿದಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.


ಬಾಲಿವುಡ್‌ ಬ್ಯೂಟಿ ಕಂಗನಾ ರಣಾವತ್ ತಮಿಳುನಾಡಿನ 'ಅಮ್ಮ'ನಾಗಿ ಕಾಣಿಸಿಕೊಳ್ಳುತ್ತಾರೆ ಎಂಬ ವಿಚಾರ ಹರಿದಾಡುತ್ತಿದ್ದಂತೆ ಜನರ ಮನಸ್ಸಲ್ಲಿ ಏನೋ ಗೊಂದಲ್ಲ ಉಂಟಾಗಿತ್ತು, ನಿರ್ದೇಶಕರ ಧೈರ್ಯ ಎಂದೆನಿಸುತ್ತದೆ ಮೊದಲ ಲುಕ್ ಹಾಗೂ ಎರಡನೇ ಲುಕ್ ಅನ್ನು ಬದಲಾಯಿಸಿ ತೋರಿಸಿದ್ದಾರೆ.

'ತಲೈವಿ'ಯಾಗಲು 'ಕ್ವಿನ್' ರೆಡಿ; ತಮಿಳು ಕಲಿಯಲು ಶುರು ಮಾಡಿದ್ದಾರೆ ಕಂಗನಾ!

Tap to resize

Latest Videos

undefined

'ತಲೈವಿ' ಚಿತ್ರದ ಫಸ್ಟ್‌ ಲುಕ್‌ ಅನ್ನು ಎರಡು ಭಾಗವಾಗಿ ತೋರಿಸಲಾಗಿದೆ. ಮೊದಲನೇ ಭಾಗದಲ್ಲಿ ಜಯಲಲಿತಾಗೆ ಚಿತ್ರರಂಗದ ಜೊತೆ ಇರುವ ಒಡನಾಟವನ್ನು ರೆಟ್ರೋ ಶೈಲಿಯಲ್ಲಿ ತೋರಿಸಲಾಗಿದೆ ಮತ್ತು ಎರಡನೇ ಭಾಗದಲ್ಲಿ ಆಕೆಯ ರಾಜಕೀಯಕ್ಕೆ ಕಾಲಿಟ್ಟು ಹಸಿರು ಸೀರೆಯಲ್ಲಿ ಕಂಗೊಳಿಸಿದ ರೀತಿ ತೋರಿಸಲಾಗಿದೆ. ಲುಕ್‌ ಬದಲಾವಣೆ ಗಮನಿಸಿದ ನೆಟ್ಟಿಗರು ಇದನ್ನು ಕಂಗನಾಗಿಂತ ಕಮಲ್ ಹಾಸನ್ ಸೂಪರ್ ಆಗಿ ಅಭಿನಯಿಸುತ್ತಿದ್ದರು ಅನಿಸುತ್ತದೆ ಎಂದು ಕಾಮೆಂಟ್ ಮಾಡತೊಡಗಿದ್ದಾರೆ.

 

'ಮಣಿಕರ್ಣಿಕಾ' ಚಿತ್ರದಲ್ಲಿ ಕಂಗನಾ ಅಭಿನಯಕ್ಕೆ ಫಿದಾ ಆದ ಅಭಿಮಾನಿಗಳು ಆಕೆ 'ತಲೈವಿ' ಚಿತ್ರದಲ್ಲೂ ಕಮಾಲ್ ಮಾಡುತ್ತಾರೆಂದು ಹೆಚ್ಚಿನ ಭರವಸೆ ಹೊಂದಿದ್ದರು ಆದರೆ ಆಕೆಗೆ ಮಾಡಿರುವ ಮೇಕಪ್‌ ಲುಕ್‌ ನಿರಾಸೆ ಮೂಡಿಸಿದೆ ಎಂದು ನೆಟ್ಟಿಗರು ಆಕೆಯ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಟ್ರೋಲ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕಂಗನಾಗೆ ಅಷ್ಟೊಂದು ಮೇಕಪ್‌ ಮಾಡುವ ಬದಲು ಗ್ರಾಫಿಕ್ಸ್ ಮಾಡಿದ್ದರೆ ಇನ್ನೂ ಸೂಪರ್ ಆಗಿತ್ತು ಎಂದು ಕಾಲೆಳೆಯುತ್ತಿದ್ದಾರೆ.

click me!