ನೆಟ್‌ಫ್ಲಿಕ್ಸ್‌ನಲ್ಲಿ ಕಾಯ್ಕಿಣಿ ಮಧ್ಯಂತರ ಕಥೆ ಆಧಾರಿತ ಸಿನಿಮಾ

By Suvarna NewsFirst Published Sep 16, 2021, 5:58 PM IST
Highlights
  • ನೆಟ್‌ಫ್ಲಿಕ್ಸ್‌ನಲ್ಲಿ ಕಾಯ್ಕಿಣಿ ಕಥೆ ಆಧಾರಿತ ಸಿನಿಮಾ
  • ಸಿನಿಮಾವಾಗಿ ಮೂಡಿ ಬರ್ತಿದೆ ಮಧ್ಯಂತರ
  • ಅನ್‌ಕಹೀ ಕಹಾನಿಯಾ ಹೆಸರಿನಲ್ಲಿ ಮೂಡಿ ಬರುತ್ತಿವೆ ಪ್ರೇಮಕಥೆಗಳು

ಕವಿ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುಸ್ತಕ ಮಧ್ಯಂತರದ ಕಥೆ ಆಧಾರಿತ ಸಿನಿಮಾ ಒಂದು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿದೆ. ಅನ್ ಕಹೀ ಕಹಾನಿಯಾ ಎಂಬ ಹೆಸರಿನಲ್ಲಿ ಮೂರು ಪ್ರೇಮ ಕಥೆಗಳು ಪ್ರಸ್ತುತಪಡಿಸಲಾಗಿದ್ದು ಇದರಲ್ಲಿ ಒಂದು ಕಥೆ ಮಧ್ಯಂತರ ಕಥೆಯಾಧಾರಿತವಾಗಿದೆ.

ನೆಟ್‌ಫ್ಲಿಕ್ಸ್‌ನಲ್ಲಿ ಹೊಸ ಸಂಕಲನ ಅನ್‌ಕಹಿ ಕಹಾನಿಯಾ ಅನ್ನು ಸೆಪ್ಟೆಂಬರ್ 17 ರಂದು ಬಿಡುಗಡೆಯಾಗಲಿದೆ. ಕೇಳದ ಮತ್ತು ಹೇಳಲಾಗದ ಮೂರು ಪ್ರೇಮದ ಕಥೆಗಳು ಎಂದು ಬರೆದಿರುವ ಈ ಸಂಕಲನವನ್ನು ಚಲನಚಿತ್ರ ನಿರ್ಮಾಪಕರಾದ ಅಶ್ವಿನಿ ಅಯ್ಯರ್ ತಿವಾರಿ, ಅಭಿಷೇಕ್ ಚೌಬೆ ಮತ್ತು ಸಾಕೇತ್ ಚೌಧರಿ ನಿರ್ದೇಶಿಸಿದ್ದಾರೆ. ನಿರ್ಮಾಪಕ ರೋನಿ ಸ್ಕ್ರೂವಾಲಾ ಅವರ ಬ್ಯಾನರ್ ಆರ್‌ಎಸ್‌ವಿಪಿ ಮೂವೀಸ್ ಸಂಕಲನವನ್ನು ನಿರ್ಮಿಸಿದೆ.

ಅನ್‌ಕಹಿ ಕಹನಿಯಾ ಚಿತ್ರದಲ್ಲಿ ಅಭಿಷೇಕ್ ಬ್ಯಾನರ್ಜಿ, ಜೋಯಾ ಹುಸೇನ್, ಕುನಾಲ್ ಕಪೂರ್, ನಿಖಿಲ್ ದ್ವಿವೇದಿ, ಪಲೋಮಿ, ರಿಂಕು ರಾಜಗುರು ಮತ್ತು ಡೆಲ್ಜಾದ್ ಹಿವಾಲೆ ಮುಂತಾದವರು ನಟಿಸಿದ್ದಾರೆ. ಸ್ಟ್ರೀಮರ್ ಹೇಳಿಕೆಯ ಪ್ರಕಾರ, ಅಯ್ಯರ್ ತಿವಾರಿ ಅವರ ಕಿರುಚಿತ್ರವು ವಾಸ್ತವ ಮತ್ತು ಕಲ್ಪನೆಯ ನಡುವಿನ ಗೆರೆಗಳನ್ನು ಮಸುಕುಗೊಳಿಸುತ್ತದೆ.

ಪೋರ್ನ್ ವಿಡಿಯೋ ಕೇಸ್: ಪತಿ ರಾಜ್ ವಿರುದ್ಧ ಶಿಲ್ಪಾ ಶೆಟ್ಟಿ ಸಾಕ್ಷಿ

ಜಯಂತ್ ಕಾಯ್ಕಿಣಿಯವರ ಮಧ್ಯಂತರ ಕನ್ನಡ ಕಥೆಯನ್ನು ಆಧರಿಸಿ, ಚೌಬೆಯವರ ವಿಭಾಗವು ಸೈರಾಟ್ ಸ್ಟಾರ್ ರಾಜಗುರು ಮತ್ತು ಹಿವಾಲೆಯನ್ನು ಒಳಗೊಂಡಿದೆ. ನಿರ್ದೇಶಕರು ಸೊಂಚಿರಿಯಾ, ಉಡ್ತಾ ಪಂಜಾಬ್ ಮತ್ತು ದೇದ್ ಇಷ್ಕಿಯಾ ನಂತಹ ಫೇಮಸ್ ಸಿನಿಮಾಗಳಿಗೆ ಹೆಸರುವಾಸಿಯಾಗಿದ್ದಾರೆ.

ಚೌಧರಿ ಅವರ ಕಿರುಚಿತ್ರದಲ್ಲಿ ಕಪೂರ್, ಹುಸೇನ್, ದ್ವಿವೇದಿ ಮತ್ತು ಪಲೋಮಿ ಕಾಣಿಸಿಕೊಂಡಿದ್ದಾರೆ. ಲವ್ ಸ್ಟೋರಿಗಳು ಯಾವಾಗಲೂ ನನ್ನ ನೆಚ್ಚಿನ ಪ್ರಕಾರಗಳಲ್ಲಿ ಒಂದಾಗಿವೆ. ಅನ್‌ಕಹಿ ಕಹಾನಿಯಾ ಅವರ ಕಥೆಯ ಥೀಮ್‌ನ ಭಾಗವಾಗಲು ಸಂತೋಷವಾಗಿದೆ ಎಂದು ಚೌಧರಿ ಹೇಳಿದ್ದಾರೆ.

ನೆಟ್ಫ್ಲಿಕ್ಸ್ ಇಂಡಿಯಾದ ಫಿಲ್ಮ್ಸ್ ಮತ್ತು ಲೈಸೆನ್ಸಿಂಗ್ ನಿರ್ದೇಶಕರಾದ ಪ್ರತೀಕ್ಷಾ ರಾವ್, ಅನ್‌ಕಹಿ ಕಹಾನಿಯಯಾ ಘೋಷಿಸಲು ಸಂತಸವಾಗುತ್ತಿದೆ ಎಂದು ಹೇಳಿದ್ದಾರೆ. ಈ ಅನಿರೀಕ್ಷಿತ ಪ್ರೇಮ ಕಥೆಗಳನ್ನು ಪ್ರತಿಭಾವಂತ ಚಲನಚಿತ್ರ ನಿರ್ಮಾಪಕರು, ಪಾತ್ರವರ್ಗ ಮತ್ತು ಸಿಬ್ಬಂದಿ ಜೀವಂತಗೊಳಿಸಿದ್ದಾರೆ ಎಂದಿದ್ದಾರೆ.

click me!