
ಇತ್ತೀಚೆಗಷ್ಟೇ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಹೆಸರು ಡ್ರಗ್ಸ್ ಕೇಸ್‌ನಲ್ಲಿ ಕೇಳಿ ಬಂದಿತ್ತು. ಆದರೆ ಸ್ವಲ್ಪ ಸಮಯದಲ್ಲಿ ಸುದ್ದಿ ತಣ್ಣಗಾಗಿತ್ತು. ಇದೀಗ ಇತ್ತೀಚಿನ ಬೆಳವಣಿಗೆಯಲ್ಲಿ ಕರಣ್ ಜೋಹರ್‌ಗೆ ಎನ್‌ಸಿಬಿ ನೋಟಿಸ್ ಕಳುಹಿಸಿದೆ.
2019ರಂದು ಜುಲೈನಲ್ಲಿ ಕರಣ್ ಮನೆಯಲ್ಲಿ ನಡೆದ ಪಾರ್ಟಿಯ ವಿಚಾರವಾಗಿ ಡ್ರಗ್ಸ್ ಮಾಫಿಯಾ ಬಗ್ಗೆ ಮಹತ್ವದ ವಿಚಾರ ಕಲೆ ಹಾಕುತ್ತಿರುವ ಎನ್‌ಸಿಬಿ ನಿರ್ದೇಶಕನಿಗೆ ನೋಟಿಸ್ ಕಳುಹಿಸಿದೆ. ಇಷ್ಟೇ ಅಲ್ಲದೆ ಘಟನೆಗೆ ಸಂಬಂಧಿಸಿ ಎಲೆಕ್ಟ್ರಾನಿಕ್ ಡಿವೈಸ್‌ಗಳ ಸಾಕ್ಷಿ ಮಾಹಿತಿ ಒದಗಿಸಲೂ ಸೂಚನೆ ನಿಡಲಾಗಿದೆ.
ಕಾಫಿ ವಿತ್ ಕರಣ್ ಅಲ್ಲ, ಕಾಫಿ ವಿತ್ ಎನ್‌ಸಿಬಿ: ಕರಣ್ ವಿರುದ್ಧ ಶಾಸಕ ದೂರು
ಸೋಷಿಯಲ್ ಮೀಡಿಯಾದಲ್ಲಿ ಕರಣ್ ಪಾರ್ಟಿ ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲೇ ನೋಟಿಸ್ ಕಳುಹಿಸಲಾಗಿದೆ. ನೋಟಿಸ್ ಪ್ರಕಾರ ಕರಣ್ ಜೋಹರ್ ವಿಚಾರನೆಗೆ ವೈಯಕ್ತಿಕವಾಗಿ ಭೇಟಿಯಾಗುವ ಅಗತ್ಯವಿಲ್ಲ, ಆದರೆ ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕಾಗುತ್ತದೆ.
ಇತ್ತೀಚೆಗಷ್ಟೇ ನಿರೂಪಕಿ ಭಾರ್ತಿ ಸಿಂಗ್ ದಂಪತಿ ಮನೆಯಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಲಾಗಿತ್ತು. ಅದ್ಯ ಇಬ್ಬರೂ ಮತ್ತೆ ತಮ್ಮ ಟಿವಿ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.