ರಜನಿಕಾಂತ್ ಸಿನಿಮಾದಿಂದ ನನ್ನ ದೂರ ಇಡುವಂತೆ ನಯನತಾರಾ ಬೆದರಿಕೆ ಹಾಕಿದ್ರು; 'ಗೂಳಿ' ನಟಿ ಮಮತಾ ಶಾಕಿಂಗ್ ಹೇಳಿಕೆ

Published : Apr 21, 2023, 11:31 AM IST
ರಜನಿಕಾಂತ್ ಸಿನಿಮಾದಿಂದ ನನ್ನ ದೂರ ಇಡುವಂತೆ ನಯನತಾರಾ ಬೆದರಿಕೆ ಹಾಕಿದ್ರು; 'ಗೂಳಿ' ನಟಿ ಮಮತಾ ಶಾಕಿಂಗ್ ಹೇಳಿಕೆ

ಸಾರಾಂಶ

ರಜನಿಕಾಂತ್ ಸಿನಿಮಾದಿಂದ ನನ್ನ ದೂರ ಇಡುವಂತೆ ನಯನತಾರಾ ಬೆದರಿಕೆ ಹಾಕಿದ್ರು ಎಂದು 'ಗೂಳಿ' ಖ್ಯಾತಿಯ ನಟಿ ಮಮತಾ ಮೋಹನದಾಸ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.  

ಮಲಯಾಳಂ ಸಿನಿಮಾರಂಗದ ಸಿಕ್ಕಾಪಟ್ಟೆ ಬ್ಯುಸಿ ನಟಿಯರಲ್ಲಿ ಮಮತಾ ಮೋಹನದಾಸ್ ಕೂಡ ಒಬ್ಬರು. ಕೆಲವು ಸಮಯ ಸಿನಿಮಾರಂಗದಿಂದ ದೂರ ಆಗಿದ್ದ ಮಮತಾ ಮೋಹನ್ ಇದೀಗ ಮತ್ತೆ ಸಕ್ರೀಯರಾಗಿದ್ದಾರೆ. ಮಲಯಾಳಂ ಮಾತ್ರವಲ್ಲದೇ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ನಟಿಸುತ್ತಿದ್ದಾರೆ. ಸದ್ಯ ಸೂಪರ್ ಸಕ್ಸಸ್ ಸಿನಿಮಾಗಳನ್ನು ನೀಡುತ್ತಿರುವ ನಟಿ ಮಮತಾ ಮೋಹನ್, ತಮಿಳು ಸಿನಿಮಾರಂಗದಲ್ಲಿ ಕೆಲಸ ಮಾಡಿದ ಕೆಟ್ಟ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಮಮತಾ ಹೇಳಿರುವ ಮಾತು ಈಗ ವೈರಲ್ ಆಗಿದೆ. 

ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು. ಕೆಲವು ದೃಶ್ಯಗಳ ಚಿತ್ರೀಕರಣ ಸಹ ಆಗಿತ್ತು. ಆದರೆ ನಯನತಾರಾ ಕಾರಣ ಆ ಸಿನಿಮಾದ ದೃಶ್ಯಗಳನ್ನು ಹೇಳದೆ ಕೇಳದೆ ಕಿತ್ತೆಸೆಯಲಾಗಿದೆ. ಅಲ್ಲದೇ ತನ್ನನ್ನೂ ಆ ಸಿನಿಮಾದಿಂದ ದೂರ ಇಡಲಾಯಿತು ಎಂದು ಇತ್ತೀಚೆಗೆ ಸಂದರ್ಶನದಲ್ಲಿ ಮಮತಾ ಹೇಳಿರುವ ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.  

ಸಂದರ್ಶನದಲ್ಲಿ ಮಮತಾ, 'ರಜನೀಕಾಂತ್​ರ ‘ಕುಸೇಲನ್’ ಸಿನಿಮಾದ ಹಾಡೊಂದರಲ್ಲಿ ನಾನು ಅವರೊಟ್ಟಿಗೆ ನಟಿಸಿದ್ದೆ. ಕೆಲವು ದಿನಗಳ ಶೂಟಿಂಗ್ ಸಹ ಮಾಡಲಾಗಿತ್ತು. ಆದರೆ ಆ ಸಿನಿಮಾದ ನಾಯಕಿ (ನಯನತಾರಾ) ಸಿನಿಮಾದ ನಿರ್ದೇಶಕರ ಮೇಲೆ ಒತ್ತಡ ಹೇರಿ ನನ್ನನ್ನು ಹಾಡಿನಿಂದ ದೂರ ಇಟ್ಟರು. ಸಿನಿಮಾ ರಿಲೀಸ್ ಬಳಿಕ ಇದು ಗೊತ್ತಾಗಿ ತುಂಬಾ ಅಚ್ಚರಿಯಾಯ್ತು' ಎಂದು ಹೇಳಿದ್ದಾರೆ. 

'ಬೇರೆ ಯಾರನ್ನೋ ಕರೆಸಿ ರಜನೀಕಾಂತ್ ಅವರೊಟ್ಟಿಗೆ ಡ್ಯಾನ್ಸ್ ಮಾಡಿಸುವುದಾದರೆ ನಾನು ಏಕೆ ಬೇಕು? ನಾನು ಚಿತ್ರೀಕರಣಕ್ಕೆ ಬರುವುದಿಲ್ಲ ಎಂದು ನಾಯಕಿ (ನಯನತಾರಾ) ಆ ಸಿನಿಮಾದ ನಿರ್ದೇಶಕರಿಗೆ ಹೇಳಿದ್ದರೆಂಬುದು ಆ ಬಳಿಕ ನನಗೆ ಗೊತ್ತಾಯಿತು. ಆಗ ಅದು ನನಗೆ ಬೆದರಿಕೆ ಎನಿಸಿತು. ನಾನು ಅದನ್ನು ಸಾವಧಾನವಾಗಿಯೇ ಸ್ವೀಕರಿಸಿದೆ' ಎಂದು ಮಮತಾ ಹೇಳಿದ್ದಾರೆ. ರಜನಿಕಾಂತ್ ಅವರ ಕುಸೇಲನ್ ಸಿನಿಮಾದ ಹಾಡೊಂದರಲ್ಲಿ ಮಮತಾ ಮೋಹನ್​ದಾಸ್ ಕೆಲವೇ ಸೆಕೆಂಡ್​ ಅಷ್ಟೆ ಕಾಣಿಸುತ್ತಾರೆ, ಅಲ್ಲಿಯೂ ಅವರ ಮುಖ ಸರಿಯಾಗಿ ಕಾಣುವುದಿಲ್ಲ. ಸಂದರ್ಶನದಲ್ಲಿ ಮಮತಾ ಎಲ್ಲಿಯೂ ನಯನತಾರಾ ಹೆಸರನ್ನು ಹೇಳಿಲ್ಲ. 

ದೊಡ್ಡ ನಿರ್ದೇಶಕ ಹಾಗಂದಾಗ ಹೃದಯ ಛಿದ್ರವಾಗಿತ್ತು; ರಾಜಮೌಳಿ ಹೇಳಿದ್ದನ್ನು ಬಹಿರಂಗ ಪಡಿಸಿದ ನಟಿ ಮಮತಾ

ಮಮತಾ ಮೋಹನ್ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಮತಾ ಸದ್ಯ ಗುಣಮುಖರಾಗಿದ್ದಾರೆ. ಕ್ಯಾನ್ಸರ್ ರೋಗದಿಂದ ಮುಕ್ತರಾಗಿರುವ ಮಮತಾ ಮೋಹನ್ ಇದೀಗ ವಿಟಿಲಿಗೋ ರೋಗದಿಂದ ಬಳಲುತ್ತಿದ್ದಾರೆ. ತನ್ನ ಅನಾರೋಗ್ಯದ ಬಗ್ಗೆ ಮಮತಾ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಮಮತಾ ಖ್ಯಾತ ನಿರ್ದೇಶಕ ರಾಜಮೌಳಿ ಅವರ ಬಗ್ಗೆ ಇತ್ತೀಚಿಗಷ್ಟೆ ಮಾತನಾಡಿದ್ದರು. ತೆಲುಗಿನ ಸೂಪರ್ ಹಿಟ್ ಅರುಂಧನಿ ಸಿನಿಮಾ ರಿಜೆಕ್ಟ್ ಮಾಡಿದ್ದಕ್ಕೆ ರಾಜಮೌಳಿ ದೊಡ್ಡ ತಪ್ಪು ಮಾಡಿದೆ ಎಂದು ಹೇಳಿದ್ದರು. ಆ ಮಾತು ನನ್ನ ಹೃದಯ ಛಿದ್ರವಾಗುವಂತೆ ಮಾಡಿತ್ತು ಎಂದು ಮಮತಾ ಬಹಿರಂಗ ಪಡಿಸಿದ್ದರು. 

ಕ್ಯಾನ್ಸರ್‌ ಗೆದ್ದ ನಂತರ ಮತ್ತೊಂದು ರೋಗದಿಂದ ಬಳತ್ತಿರುವ 'ಜನ ಗಣ ಮನ' ನಟಿ ಮಮತಾ ಮೋಹನ್; ಭಾವುಕ ಪೋಸ್ಟ್

ಸಿನಿಮಾ ವಿಚಾರಕ್ಕೆ ಬರುವುದಾದರೆ 2022ರಲ್ಲಿ ಬಂದ ಜನಗಣಮನ ಸಿನಿಮಾ ದೊಡ್ಡ ಖ್ಯಾತಿ ತಂದುಕೊಟ್ಟ ಸಿನಿಮಾವಾಗಿದೆ. ಕೊನೆಯದಾಗಿ 'ಮಹೇಶುಂ ಮಾರುತಿಯುಂ' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಲಯಾಳಂ ಜೊತೆಗೆ ತಮಿಳು ಮತ್ತು ತೆಲುಗು ಸಿನಿಮಾದಲ್ಲೂ ನಟಿಸುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?