National Film Awards; ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿ ಕುಟುಂಬದ ಜೊತೆ ಸಂಭ್ರಮಿಸಿದ ಸೂರ್ಯ

By Shruiti G KrishnaFirst Published Oct 1, 2022, 5:08 PM IST
Highlights

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ (ಸೆಪ್ಟಂಬರ್ 30) ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಿತು. ಈ ಬಾರಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ತಮಿಳು ನಟ ಸೂರ್ಯ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ ಹಂಚಿಕೊಂಡಿದ್ದಾರೆ. 

68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ (ಸೆಪ್ಟಂಬರ್ 30) ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಿತು. ಈ ಬಾರಿ ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಯನ್ನು ತಮಿಳು ನಟ ಸೂರ್ಯ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ ಹಂಚಿಕೊಂಡಿದ್ದಾರೆ. ಇಬ್ಬರಿಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ಸೂರರೈ ಪೊಟ್ರು ಸಿನಿಮಾದ ಉತ್ತಮ ಅಭಿನಯಕ್ಕೆ ನಟ ಸೂರ್ಯ ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದರು. ಇನ್ನು ನಜ ಅಜಯ್ ದೇವಗನ್ ತಾನ್ಹಾಜಿ ಸಿನಿಮಾದ ಉತ್ತಮ ಅಭಿನಯಕ್ಕೆ ಪ್ರಶಸ್ತಿ ಗೆದ್ದು ಬೀಗಿದರು. ಅತ್ತ್ಯುತ್ತಮ ನಟಿ ಪ್ರಶಸ್ತಿ ಸೂರರೈ ಪೊಟ್ರು ಸಿನಿಮಾದ ನಟಿ ಅಪರ್ಣಾ ಬಲಾಮುರಳಿ ಪಾಲಾಗಿದೆ. 

ಸೂರ್ಯ ನಟನೆಯ ಸೂರರೈ ಪೊಟ್ರು ಚಿತ್ರ ಅನೇಕ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದು ಬೀಗಿದೆ.  ಸೂರರೈ ಪೊಟ್ರು ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ಹಿನ್ನೆಲೆ ಸಂಗೀತ ಮತ್ತು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ನಟ ಸೂರ್ಯ ರಾಷ್ಟ್ರ ಮತ್ತು ನಟಿ, ನಿರ್ಮಾಪಕಿ ಜ್ಯೂತಿಕ ಇಬ್ಬರು ತಮ್ಮ ಮಕ್ಕಳು ಹಾಗು ತಮ್ಮ ಕುಟುಂಬದ ಜೊತೆ ರಾಷ್ಟ್ರಪ್ರಶಸ್ತಿ ಹಿಡಿದು ಸಂಭ್ರಮಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟ ಸೂರ್ಯ ಫೋಟೋ ಶೇರ್ ಮಾಡಿ ಎಲ್ಲಾ ವಿನ್ನರ್ಸ್‌ಗೂ ಅಭಿನಂದನೆ ಸಲ್ಲಿಸಿದರು. ಹಾಗೂ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿರುವ ಸೂರ್ಯ ಈ ಪ್ರಶಸ್ತಿ ನಿಮಗೆ ಎಂದು ಹೇಳಿದರು. 

ಹೆಚ್ಚಿದ ತೂಕ, ಬಾಡಿ ಶೇಮಿಂಗ್; ಟ್ರೋಲಿಗರಿಗೆ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಅಪರ್ಣ ತಿರುಗೇಟು

ಸೂರ್ಯ ಮತ್ತು ಜ್ಯೂತಿಕಾ ದಂಪತಿಗೆ ಅಭಿಮಾನಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

 ಪ್ರಶಸ್ತಿ ಸ್ವೀಕರಿಸಿದವರ ಲಿಸ್ಟ್ 

* ಅತ್ತ್ಯುತ್ತಮ ನಿರ್ದೇಶಕ- ಸಚ್ಚಿದಾನಂದ ಕೆಆರ್ (ಅಯ್ಯಪ್ಪನುಮ್ ಕೋಶಿಯನ್, ಮಲಯಾಳಂ)

* ಅತ್ಯುತ್ತಮ ಸಂಗೀತ ನಿರ್ದೇಶಕ-  ತಮನ್ (ಅಲಾ ವೈಕುಂಠಪುರಲೋ ಸಿನಿಮಾ ಹಾಡಿಗೆ, ತೆಲುಗು) 

ಅತ್ಯುತ್ತಮ ಬ್ಯಾಗ್ರೌಂಡ್ ಸ್ಕೋರ್ -  ಜಿವಿ ಪ್ರಕಾಶ್ ಕುಮಾರ್ (ಸೂರರೈ ಪಟ್ರು, ತಮಿಳು)

ಅತ್ಯುತ್ತಮ ಮೇಕಪ್ ಆರ್ಟಿಸ್ಟ್- ಟಿ ವಿ ರಾಮಬಾಬು (ನಾಟ್ಯಂ, ತೆಲುಗು ಸಿನಿಮಾ)

ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್ - ನಚಿಕೇತ್ ಬಾರ್ವೆ ಮತ್ತು ಮಹೇಶ್ ಶೆರ್ಲಾ (ತನ್ಹಾಜಿ ಸಿನಿಮಾ ಹಿಂದಿ)

ಅತ್ತ್ಯುತ್ತಮ ಆಡಿಯೋಗ್ರಫಿ-  ಜೋಬಿನ್ ಜಯನ್, ಲೋಕೇಶನ್ ಸೌಂಡ್ ರೆಕಾರ್ಡಿಸ್ಟ್ (ಡೊಳ್ಳು ಕನ್ನಡ ಸಿನಿಮಾ)

ಅತ್ಯುತ್ತಮ ಸ್ಕ್ರೀನ್ ಪ್ಲೇ -ಸೂರರೈ ಪೊಟ್ರು (ಸ್ಕ್ರೀನ್ ಪ್ಲೇ ರೈಟರ್- ಶಾಲಿನಿ ಉಷಾ ನಾಯರ್, ಸುಧಾ ಕಂಗಾರಾ)

ಅತ್ತ್ಯುತ್ತಮ ಗಾಯಕಿ- ನಂಚಮ್ಮ (ಮಲಯಾಳಂ, ಅಯ್ಯಪ್ಪನುಮ್ ಕೋಶಿಯುಮ್)

ಅತ್ತ್ಯುತ್ತಮ ಗಾಯಕ - ರಾಹುಲ್ ದೇಶಪಾಂಡೆ ( ಮರಾಠಿ, ಮಿ. ವಸಂತರಾವ್)

ಅತ್ತ್ಯುತ್ತಮ ಬಾಲ ಕಲಾವಿದ- ಅನೀಶ್ ಮಂಗೇಶ್ (ಮರಾಠಿ, ತಕ್ ತಕ್)

click me!