Latest Videos

ನ್ಯಾಷನಲ್ ಕ್ರಶ್ ರಶ್ಮಿಕಾಗೆ ಹೊಸ ಹೆಸರು ಕೊಟ್ಟ ಅಭಿಮಾನಿ; ಏನಿರಬಹುದು ಊಹಿಸಿ..!

By Sathish Kumar KHFirst Published Jun 17, 2024, 7:24 PM IST
Highlights

ದಕ್ಷಿಣ ಭಾರತದ ನಟಿಯರಲ್ಲಿಯೇ ಅತ್ಯಧಿಕ ಸಂಭಾವನೆ ಪಡೆಯುವ ನಟಿಯರಲ್ಲಿ ಟಾಪ್ 1ರ ಸ್ಥಾನಕ್ಕೇರಿರುವ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಅಭಿಮಾನಿಯೊಬ್ಬ ಹೊಸ ಹೆಸರಿಟ್ಟಿದ್ದಾನೆ.

ಬೆಂಗಳೂರು (ಜೂ.17): ದಕ್ಷಿಣ ಭಾರತದ ನಟಿಯರಲ್ಲಿಯೇ ಅತ್ಯಧಿಕ ಸಂಭಾವನೆ ಪಡೆಯುವ ನಟಿಯರಲ್ಲಿ ಟಾಪ್ 1ರ ಸ್ಥಾನಕ್ಕೇರಿರುವ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಅಭಿಮಾನಿಯೊಬ್ಬ ಹೊಸ ಹೆಸರಿಟ್ಟಿದ್ದಾನೆ. ತನ್ನ ಸೌಂದರ್ಯ ಕಾಪಾಡಿಕೊಳ್ಳು ನಿಟ್ಟಿನಲ್ಲಿ ದೈನಿಕ ಕಾರ್ಯದಂತೆ ವರ್ಕೌಟ್ ಮಾಡಿ ಹೊರಬಂದು ಪೋಸ್ ಕೊಟ್ಟ ರಶ್ಮಿಕಾ ಮಂದಣ್ಣ ಅವರನ್ನು ನೋಡಿದ ಅಭಿಮಾನಿ ನೀವು ರಶ್ಮಿಕಾ ಅಲ್ಲ, 'ಕ್ರಶ್ಮಿಕಾ' ಎಂದು ಹೆಸರು ಸೂಚಿಸಿದ್ದಾನೆ.

ನಟಿ ರಶ್ಮಿಕಾ ಪ್ರತಿನಿತ್ಯ ದೇಹ ದಂಡನೆಗಾಗಿ ವರ್ಕೌಟ್ ಮಾಡುವಂತೆ ಇಂದು ಕೂಡ ವರ್ಕೌಟ್ ಮುಗಿಸಿ ಹೊರಗೆ ಬಂದ ನಂತರ ಪಾಪರಾಜಿಗಳು ಹಾಗೂ ಕೆಲವು ವಿಶೇಷ ಫೋಟೋಗ್ರಾಫರ್‌ಗಳು ಅವರ ಫೋಟೋ ಮತ್ತು ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ. ಅದರಲ್ಲಿ ರಶ್ಮಿಕಾ ಮಂದಣ್ಣ ದೈಹಿಕ ಕಸರತ್ತಿಗೆ ಜಿಮ್‌ಗೆ ಹೊಂದಾಣಿಕೆ ಆಗುವ ಫುಲ್‌ ಆರ್ಮ್‌ ಶಾರ್ಟ್ ಟೀಶರ್ಟ್ ಮತ್ತು ಟೈಟ್ಸ್ ಹಾಕಿದ್ದಾರೆ. ವರ್ಕೌಟ್ ಮಾಡಿದ ನಂತರ ಆಕೆಯ ಟೀಶರ್ಟ್ ಬೆವರಿನಿಂದ ಅರ್ಧ ಒದ್ದೆಯಾಗಿದೆ. ಹಾಗೆಯೇ ವರ್ಕೌಟ್ ಕೋಣೆಯಿಂದ ಹೊರಬಂದ ರಶ್ಮಿಕಾ ಫೋಟೋ ಪೋಸ್ ಕೊಟ್ಟಿದ್ದಾಳೆ. ಅದರಲ್ಲಿ ಎರಡು ಸುಂದರ ಫೋಟೋಗಳನ್ನು ರಶ್ಮಿಕಾ ಮಂದಣ್ಣ ತಮ್ಮ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ದೇಹದ ಆರೋಗ್ಯ ಮತ್ತು ಸೌಂದರ್ಯದ ಬಗ್ಗೆ ಮಾತನಾಡುತ್ತಾ 'ನಿಮ್ಮ ಬಗ್ಗೆ ನೀವೇ ಆದ್ಯತೆ ನೀಡಿ' (Prioritise yourself) ಎಂಬ ಅಡಿಬರಹವನ್ನೂ ಬರೆದುಕೊಂಡಿದ್ದಾರೆ. 

ರಶ್ಮಿಕಾ ಮಂದಣ್ಣ ಹತ್ರ ಇರೋ ಐಷಾರಾಮಿ ಕಾರುಗಳು ಒಂದೆರಡಲ್ಲ, ಆಸ್ತಿಯೂ ಕಮ್ಮಿ ಇಲ್ಲ!

ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ರಶ್ಮಿಕಾ ಅವರ ತೆಳುವಾದ ಸ್ಲಿಮ್‌ ಫಿಟ್ ದೇಹ ಸೌಂದರ್ಯವನ್ನು ಮನಸಾರೆ ಹೊಗಳಿದ್ದಾರೆ. ರಶ್ಮಿಕಾ ಅವರ ಫೋಟೋ ಪೋಸ್ಟ್‌ಗೆ ಕೇವಲ 1 ಗಂಟೆಯಲ್ಲಿ 7 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ಹಲವರು ಕಾಮೆಂಟ್ ಮಾಡಿದ್ದು, ಅದರಲ್ಲೊಬ್ಬ ಅಭಿಮಾನಿ ನೀವು ರಶ್ಮಿಕಾ ಅಲ್ಲ, 'ಕ್ರಶ್ಮಿಕಾ' ಎಂದು ಹೇಳಿದ್ದಾರೆ. ನಂತರ ಹಲವರು ಕ್ರಶ್ಮಿಕಾ ಹೆಸರೇ ನಿಮಗೆ ಚೆನ್ನಾಗಿದೆ ಎಂದು ಹೇಳಿದ್ದಾರೆ. ಐದಾರು ಜನರು ಕಾಮೆಂಟ್‌ನಲ್ಲಿ ನೀವು ಕ್ರಶ್ಮಿಕಾ ಎಂದು ಹೆಸರಿಟ್ಟುಕೊಳ್ಳಿ. ಇದೇ ನಿಮಗೆ ಸೂಟೇಬಲ್ ಆಗುತ್ತದೆ ಎಂದು ಹೊಗಳಿದ್ದಾರೆ.

ನ್ಯಾಷನಲ್ ಕ್ರಶ್‌ ಪಟ್ಟ ಕಳೆದುಕೊಳ್ಳುವರೇ ರಶ್ಮಿಕಾ?
ನಟಿ ರಶ್ಮಿಕಾ ಮಂದಣ್ಣ ತನ್ನ ಸೌಂದರ್ಯ ಹಾಗೂ ನಟನೆಯಿಂದ ಸುಮಾರು ಮೂರ್ನಾಲ್ಕು ವರ್ಷಗಳ ಕಾಲ ನ್ಯಾಷನಲ್ ಕ್ರಶ್ ಎಂಬ ಖ್ಯಾತಿಯನ್ನು ಹೊಂದಿದ್ದಳು. ಇನ್ನು ರಣಬೀರ್ ಕಪೂರ್ ಅವರೊಂದಿಗೆ ಅನಿಮಲ್ ಸಿನಿಮಾ ಮಾಡಿದ ನಂತರ ಅದೇ ಚಿತ್ರದಲ್ಲಿದ್ದ ಮತ್ತೊಬ್ಬ ನಟಿ ತೃಪ್ತಿ ದಿಮ್ರಿ ಅವರ ಹಾಟ್ ಪೋಸ್, ಸೆಕ್ಸಿ ಲುಕ್ ಹಾಗೂ ನಟನೆಗೆ ಮನಸೋತ ಅಭಿಮಾನಿಗಳು ರಶ್ಮಿಕಾಗಿಂದ ತೃಪ್ತಿ ದಿಮ್ರಿಯೇ ಅದ್ಭುತ ಸೌಂದರ್ಯ ಹೊಂದಿದ್ದಾಳೆ. ತೃಪ್ತಿಯೂ ನಮ್ಮ ಹೊಸ ಕ್ರಶ್ ಎನ್ನುವ ಮೂಲಕ ನ್ಯಾಷನಲ್ ಕ್ರಶ್ ಪಟ್ಟವನ್ನು ರಶ್ಮಿಕಾ ಮತ್ತು ತೃಪ್ತಿ ದಿಮ್ರಿ ಇಬ್ಬರಿಗೂ ಹಂಚಿಕೆ ಮಾಡಿದ್ದರು.

ಅಭಿಮಾನಿ ಪೋಸ್ಟಿಗೆ ಗೆ ರಶ್ಮಿಕಾ ಮಂದಣ್ಣ ಹಾರ್ಟ್ ಟಚಿಂಗ್ ಕಮೆಂಟ್

ಇನ್ನು ದೇಶದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಟಿಯರು ಬಾಲಿವುಡ್ ನಟಿಯರಾಗಿದ್ದಾರೆ. ಇನ್ನು ನಟಿ ರಶ್ಮಿಕಾ ಮಂದಣ್ಣ ಕೂಡ ಬಾಲಿವುಡ್‌ಗೆ ಕಾಲಿಟ್ಟ ನಂತರ ತಮ್ಮ ಸಂಭಾವನೆಯನ್ನು 10 ಕೋಟಿ ರೂ.ಗೆ ಹೆಚ್ಚಳ ಮಾಡಿಕೊಂಡಿದ್ದರು. ನಟಿ ರಶ್ಮಿಕಾಗೆ ದಕ್ಷಿಣ ಭಾರತ ಚಿತ್ರರಂಗದಿಂದ ಕರೆದುಕೊಂಡು ಬಾಲಿವುಡ್‌ನಲ್ಲಿ ಬಿಗ್ ಚಾನ್ಸ್ ಕೊಟ್ಟಿದ್ದ ಅನಿಮಲ್ ಚಿತ್ರಕ್ಕೆ 4 ಕೋಟಿ ರೂ. ಸಂಭಾವನೆ ಕೊಡಲಾಗಿತ್ತು. ಆದರೆ, ಈಗ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಅವರ ಸಿಕಂದರ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ನಟಿ ರಶ್ಮಿಕಾ ಬರೋಬ್ಬರಿ 13 ಕೋಟಿ ರೂ. ಸಂಭಾವನೆ ಮಡೆಯುತ್ತಿದ್ದಾರೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಾಯಕಿಯಾಗಿ ಹೊರಹೊಮ್ಮಿದ್ದಾರೆ.

click me!