Heeraben Modi Death; ಪ್ರಧಾನಿ ಮೋದಿ ತಾಯಿ ನಿಧನಕ್ಕೆ ಅಕ್ಷಯ್, ಕಂಗನಾ, ಪ್ರಕಾಶ್ ರಾಜ್ ಹಾಗೂ ಇತರರ ಸಂತಾಪ

Published : Dec 30, 2022, 11:20 AM ISTUpdated : Dec 30, 2022, 11:29 AM IST
Heeraben Modi Death; ಪ್ರಧಾನಿ ಮೋದಿ ತಾಯಿ ನಿಧನಕ್ಕೆ ಅಕ್ಷಯ್, ಕಂಗನಾ, ಪ್ರಕಾಶ್ ರಾಜ್  ಹಾಗೂ ಇತರರ ಸಂತಾಪ

ಸಾರಾಂಶ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಇಂದು (ಡಿಸೆಂಬರ್ 30) ಬೆಳಗಿನ ಜಾವ 3.30ಕ್ಕೆ ನಿಧನರಾಗಿದ್ದಾರೆ. ಪ್ರಧಾನಿ ಮೋದಿ ಅವರ ತಾಯಿ ನಿಧನಕ್ಕೆ ಸಿನಿ ಮಂದಿ ಸಂತಾಪ ಸೂಚಿಸಿ ಸೂಚಿಸುತ್ತಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಇಂದು (ಡಿಸೆಂಬರ್ 30) ಬೆಳಗಿನ ಜಾವ 3.30ಕ್ಕೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ  ಹೀರಾಬೆನ್ ಮೋದಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹೀರಾಬೆನ್ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಪ್ರಧಾನಿ ಮೋದಿ ಅವರ ತಾಯಿ ನಿಧನಕ್ಕೆ ದೇಶದ ಜನತೆ ಹಾಗೂ ಅನೇಕ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಸಿನಿ ಮಂದಿ ಕೂಡ ಸಂತಾಪ ಸೂಚಿಸಿ ಮೋದಿಗೆ ಧೈರ್ಯ ಹೇಳುತ್ತಿದ್ದಾರೆ.  

ನಟಿ ಕಂಗನಾ ರಣಾವತ್, ಅಕ್ಷಯ್ ಕುಮಾರ್,  ಪ್ರಕಾಶ್ ರಾಜ್, ಅಜಯ್ ದೇವಗನ್, ಅನುಪಮ್ ಖೇರ್ ಸೇರಿದಂತೆ ಅನೇಕ ಸಿನಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮೂಲಕ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ನಟಿ ಕಂಗನಾ ರಣಾವತ್ ಪ್ರಧಾನಿ ಮೋದಿ ಮತ್ತು ಹೀರಾಬೆನ್ ಇಬ್ಬರ ಸುಂದರ ಫೋಟೋ ಶೇರ್ ಮಾಡಿ ಸಾಂತಾಪ ಸೂಚಚಿಸಿದ್ದಾರೆ. ಇಂಥ ಕಠಿಣ ಸಮಯದಲ್ಲಿ ನರೇಂದ್ರ ಮೋದಿ ಅವರಿಗೆ ದೇವರು ತಾಳ್ಮೆ ಮತ್ತು ಶಾಂತಿ ನೀಡಿಲು. ಓಂ ಶಾಂತಿ' ಎಂದು ಹೇಳಿದ್ದಾರೆ.  

ನಟ ಅಕ್ಷಯ್ ಕುಮಾರ್ ಟ್ವೀಟ್ ಮಾಡಿ, 'ತಾಯಿಯನ್ನು ಕಳೆದುಕೊಂಡ ದುಃಖಕ್ಕಿಂತ ದೊಡ್ಡದು ಯಾವುದು ಇಲ್ಲ. ಈ ದುಃಖವನ್ನು ಭರಿಸುವ ಶಕ್ತಿ ದೇವರು ನಿಮಗೆ ನೀಡಲಿ ನರೇಂದ್ರ ಮೋದಿ. ಓಂ ಶಾಂತಿ'  ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್ ನಟ ಅಜಯ್ ದೇವಗನ್ ಟ್ವೀಟ್ ಮಾಡಿ, 'ಹೀರಾಬೆನ್ ಅವರ ನಿಧನಕ್ಕೆ ನನ್ನ ಸಂತಾಪಗಳು. ಹೀರಾಬೆನ್ ಮೋದಿ ಅವರು ಸರಳ, ತತ್ವದ ಮಹಿಳೆ. ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ಉತ್ತಮ ಮಗನನ್ನಾಗಿ ಬೆಳೆಸಿದರು. ಓಂ ಶಾಂತಿ. ಪ್ರಧಾನಿ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ' ಎಂದು ಹೇಳಿದರು. 

ಪ್ರಧಾನಿ ಮೋದಿ ತಾಯಿ ಹೀರಾಬೆನ್‌ ನಿಧನ: ಗಣ್ಯರ ಸಂತಾಪ

ಇನ್ನು ನಟ ಅನುಪಮ್ ಖೇರ್ ಟ್ವೀಟ್ ಮಾಡಿ, 'ನರೇಂದ್ರ ಮೋದಿ ಅವರೇ ನಿಮ್ಮ ಮಾತಾಶ್ರೀ ಹೀರಾಬಾ ಜೀ ಅವರ ನಿಧನದ ಬಗ್ಗೆ ಕೇಳಿ, ನಾನು ದುಃಖಿತನಾಗಿದ್ದೇನೆ. ಆ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. 


ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿ, 'ತಾಯಿಯನ್ನು ಕಳೆದುಕೊಂಡಿರುವುದು ತುಂಬಾ ನೋವಿನ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಹೇಳಿದ್ದಾರೆ.

ನಟ ಸೋನು ಸೂದ್ ಟ್ವೀಟ್ ಮಾಡಿ,  ತಾಯಂದಿರು ಎಲ್ಲಿಯೂ ಹೋಗುವುದಿಲ್ಲ ಎಂದು ಹೇಳಿದ್ದಾರೆ. 'ಮೋದಿ ಅವರೇ ತಾಯಿ ಎಲ್ಲಿಯೂ ಹೋಗುವುದಿಲ್ಲ, ತನ್ನ ಮಗ ಇತರರಿಗೆ ಒಳ್ಳೆಯದನ್ನು ಮಾಡಬೇಕೆಂದು ಅನೇಕ ಬಾರಿ ದೇವರ ಪಾದದ ಬಳಿ ಕುಳಿತುಕೊಳ್ಳುತ್ತಾಳೆ. ನಿಮ್ಮ ತಾಯಿ ಯಾವಾಗಲೂ ನಿಮ್ಮೊಂದಿಗೆ ಇರುತ್ತಾರೆ. ಓಂ ಶಾಂತಿ' ಎಂದು ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?