ಬಿಟ್ಟಿ ಸಲಹೆ ಕೊಡುವವರೇ ಜಾಸ್ತಿ: ಮೊದಲ ಬಾರಿ ನೆಟ್ಟಿಗರಿಗೆ ಟಾಂಗ್ ಕೊಟ್ಟ ನಟ ದುಲ್ಕರ್ ಸಲ್ಮಾನ್

Published : Dec 29, 2022, 03:26 PM IST
ಬಿಟ್ಟಿ ಸಲಹೆ ಕೊಡುವವರೇ ಜಾಸ್ತಿ: ಮೊದಲ ಬಾರಿ ನೆಟ್ಟಿಗರಿಗೆ ಟಾಂಗ್ ಕೊಟ್ಟ ನಟ ದುಲ್ಕರ್ ಸಲ್ಮಾನ್

ಸಾರಾಂಶ

ಬಿಟ್ಟಿ ಸಲಹೆ ಕೊಡುವವರಿಗೆ ವಂದನೆ ತಿಳಿಸಿದ ದುಲ್ಕರ್ ಸಲ್ಮಾನ್. ಪ್ರಪಂಚಕ್ಕೆ ನಾವು ಬದಲಾಗುವುದಿಲ್ಲ ಎಂದ ನಟ....

ಮಾಲಿವುಡ್ ಚಾಕಲೇಟ್ ನಟ ದುಲ್ಕರ್ ಸಲ್ಮಾನ್ 2022ರಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಒಂದೇ ವರ್ಷದಲ್ಲಿ ನಾಲ್ಕು ಸಿನಿಮಾ ರಂಗದಲ್ಲಿ ಕೆಲಸ ಮಾಡಿದ್ದಾರೆ. ತಮಿಳಿನಲ್ಲಿ ಹೇ ಸಿನಾಮಿಕಾ, ತೆಲುಗು ಭಾಷೆಯಲ್ಲಿ ಸೀತಾ ರಾಮಮ್, ತಮಿಳಿನಲ್ಲಿ ಸಲ್ಯೂಟ್‌ ಹಾಗೂ ಹಿಂದಿಯಲ್ಲಿ Chup: The Revenge Of The Artist ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 2019ರಲ್ಲಿ ದಿ ಜೋಯಾ ಫ್ಯಾಕ್ಟರಿಯಲ್ಲಿ ನಟಿಸಿ ಸುಮಾರು ಮೂರು ವರ್ಷಗಳ ನಂತರ ಹಿಂದಿ ಸಿನಿಮಾಗೆ ಕಮ್ ಬ್ಯಾಕ್ ಮಾಡಿದ್ದಾರೆ. 

ಸಾಮಾನ್ಯವಾಗಿ ದುಲ್ಕರ್ ಸಲ್ಮಾನ್ ಏನೇ ಮಾಡಿದ್ದರೂ ವೈರಲ್ ಆಗುತ್ತದೆ. ಮೊದಲ ಸಲ ಪಬ್ಲಿಕ್ ಕಾಮೆಂಟ್‌ಗಳ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. 'ನಾನು ಏನೇ ಮಾಡಿದ್ದರು ಜನರು ಕಾಮೆಂಟ್ ಮಾಡುತ್ತಾರೆ. ನಾನು ಯಾವ ರೀತಿ ಸಿನಿಮಾ ಮಾಡಬೇಕು ಯಾರ ಜೊತೆ ಮಾಡಬೇಕು ಹೇಗಿರಬೇಕು ಎಂದು ಬಿಟ್ಟಿ ಸಲಹೆ ನೀಡಲು ಮುಂದಿರುತ್ತಾರೆ. ಉದಾಹರಣೆ ಕೊಡಬೇಕು ಅಂದ್ರೆ ಈ ವರ್ಷ ನಾಲ್ಕು ಭಾಷೆ ಸಿನಿಮಾಗಳಲ್ಲಿ ನಟಿಸಿರುವೆ...ಅವರ ಪ್ರಕಾರ ಒಂದೇ ಸಲ ನಾಲ್ಕು ದೋಣಿಗಳ ಮೇಲೆ ಕಾಲು ಇಡಬಾರದಂತೆ ಮುಳುಗಿ ಬಿಡುತ್ತೀನಿ ಅಂತ. ಎಲ್ಲಿ ಯಾವಾಗ ಏನು ಮಾಡಬೇಕು ಎಂದು ನನಗೆ ಗೊತ್ತಿದೆ' ಎಂದು ದುಲ್ಕರ್ ಮಾತನಾಡಿದ್ದಾರೆ. 

ಬೇರೆ ಬೇರೆ ಭಾಷೆಗಳಲ್ಲಿ ನಟಿಸುತ್ತಿರುವುದಕ್ಕೆ ಕಾರಣವೇನು ಎಂದು ದುಲ್ಕರ್ ರಿವೀಲ್ ಮಾಡಿದ್ದಾರೆ. 'ಪ್ರೀತಿ ಮತ್ತು ಪ್ಯಾಷನ್‌ನಿಂದ ನಾನು ಸಿನಿಮಾಗಳಲ್ಲಿ ನಟಿಸುತ್ತಿರುವೆ. ನಾನು ಯಾವ ಜೆನರೇಷನ್‌ನಲ್ಲಿ ಇದ್ದೀನಿ ಅಂದ್ರೆ ಪ್ರತಿಯೊಬ್ಬರೂ ಅನುಭವ ಬಯಸುತ್ತಾರೆ. ಎಷ್ಟು ಲಕ್ಷ್ಯೂರಿ ಇದೆ ಅಂದ್ರೆ ಬ್ಯಾಗ್ ಪ್ಯಾಕ್ ಮಾಡಿಕೊಂಡು ನಾವು ಪ್ರಯಾಣ ಮಾಡಿಕೊಂಡು ನಾವು ಇಷ್ಟ ಪಟ್ಟ ರೀತಿಯಲ್ಲಿ ಜೀವನ ಮಾಡಬಹುದು, ಡಾಕ್ಯೂಮೆಂಟ್ ಮಾಡಬಹುದು ಏನ್ ಏನೋ ಮಾಡಬಹುದು. ಇದನ್ನು ನಾನು ಸಿನಿಮಾ ಮೂಲಕ ಮಾಡಲು ಇಷ್ಟ ಪಡುತ್ತೀನಿ ಇದು ಬೇರೆ ಭಾಷೆಗಳಲ್ಲಿ ಸಿನಿಮಾ ಆಯ್ಕೆ ಮಾಡಿಕೊಳ್ಳುವ ಮೂಲಕ ಸಾಧ್ಯ. ಇದರಿಂದ ಬೇರೆ ರೀತಿ ಕಲ್ಚರಲ್‌ ಎಕ್ಸಪೀರಿಯನ್ಸ್‌ ಕೂಡ ಸಿಗುತ್ತದೆ' ಎಂದು ದುಲ್ಕರ್ ಹೇಳಿದ್ದಾರೆ.

ಪತ್ನಿಗೆ ದುಲ್ಕರ್ ಸ್ವೀಟ್ ವಿಶ್; ಬಿಳಿ ಕೂದಲು, ಮಗಳ ಸ್ಕೂಲ್‌, ಹೊಸ ಮನೆ....ವೈರಲ್ ಪೋಸ್ಟ್‌

'ಕೆಲಸದ ವಿಚಾರದಲ್ಲಿ ನಾನು ಶ್ರಮ ಹಾಕುತ್ತಿರುವೆ ಎಲ್ಲೇ ಹೋದರು ಓರಿಜಿನಲ್ ಸಿನಿಮಾ ಮಾಡಬೇಕು ಅನ್ನೋ ಅಸೆ ತುಂಬಾ ಇದೆ ಸರಿನೋ ತಪ್ಪೋ ಗೊತ್ತಿಲ್ಲ ಆದರೆ ಪ್ರಪಂಚಕ್ಕೆ ಜನರಿಗಾಗಿ ನಾನು ಬದಲಾಗುವುದಿಲ್ಲ. ಏನೇ ಇರಲಿ ಬಿಟ್ಟಿ ಸಲಹೆ ಕೊಡುತ್ತಿರುವವರಿಗೆ ನನ್ನ ವಂದನೆಗಳು. ನಾನು ಪ್ರತಿಯೊಂದನ್ನು ಗಮನಿಸುತ್ತೀನಿ ಆದರೆ ಮಾತನಾಡುವುದಿಲ್ಲ. ನನ್ನ ಪ್ರಶ್ನೆ ಮಾಡಿದ್ದರೆ ಮಾತ್ರ ಮಾತನಾಡುವುದು. ಇದು ನನ್ನ ವ್ಯಕ್ತಿತ್ವ ಇದರ ಬಗ್ಗೆ ನನಗೆ ಖುಷಿ ಇದೆ. ನನ್ನ ಉದೇಶ ಇಷ್ಟೆ...ಸೈಲೆಂಟ್ ಆಗಿರಬೇಕು ಹಾಗೆ ಕಡಿಮೆ ಪದಗಳನ್ನು ಬಳಸಬೇಕು' ಎಂದಿದ್ದಾರೆ ದುಲ್ಕರ್.

ಸಿನಿಮಾ ಬಿಡ್ತಾರಾ?

ದುಲ್ಕರ್ ಸಲ್ಮಾನ್ ಸಂದರ್ಶನವೊಂದರಲ್ಲಿ ತಮ್ಮ ಚಲನಚಿತ್ರಗಳ ಬಗ್ಗೆ 'ಅಸಹ್ಯ' ವಿಮರ್ಶೆಗಳನ್ನು ಸ್ವೀಕರಿಸಿದ್ದೇನೆ ಎಂದು ಬಹಿರಂಗಪಡಿಸಿದರು, ನಾನು ಆಗಾಗ್ಗೆ ನನ್ನ ಬಗ್ಗೆ ಸಾಕಷ್ಟು ನಕಾರಾತ್ಮಕ ಲೇಖನಗಳನ್ನು ಓದುತ್ತೇನೆ ಎಂದು ದುಲ್ಕರ್ ಸಲ್ಮಾನ್ ಒಪ್ಪಿಕೊಂಡರು.ಕೆಲವರು ನಾನು ನಟನೆಯನ್ನು ತ್ಯಜಿಸಬೇಕು. ನಾನು ಇಲ್ಲಿ ಇರಬಾರದು ಎಂದು ಹೇಳಿದ್ದಾರೆ.ಇದು ನನ್ನ ಕಾಲ್‌  ಅಲ್ಲ. ಇದು ನಿಜವಾಗಿಯೂ ಹಾರ್ಶ್‌.ನಾನು ನನ್ನ ವೃತ್ತಿಜೀವನದಲ್ಲಿ ಹಲವಾರು ಚಲನಚಿತ್ರಗಳನ್ನು ಮಾಡಿದ್ದೇನೆ, ಆದರೆ ಇದು ನಿಜವಾಗಿಯೂ ಪಾತ್ರ ಮತ್ತು ಅ  ನಾನು ನಿರೂಪಿಸುವ ಪಾತ್ರವು ತುಂಬಾ ವಿಶಿಷ್ಟ, ನೀವು ಯಾರೊಬ್ಬರ ಮನಸ್ಸಿನಲ್ಲಿ ಇಣುಕಿ ನೋಡುತ್ತಿರುವಂತೆ ತೋರುತ್ತಿದೆ. ನನಗೆ, ಇದು ಸಂಪೂರ್ಣವಾಗಿ ಹೊಸ ಅನುಭವವಾಗಿದೆ.ಹಿಂದೆಂದಿಗಿಂತಲೂ ಈಗ ಈ ಪ್ರದೇಶದ ಚಿತ್ರಗಳನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಿರುವುದರಿಂದ ದಕ್ಷಿಣದ ಪ್ರದರ್ಶಕರು ಮತ್ತು ನಿರ್ದೇಶಕರು ಈಗ ವ್ಯಾಪಕವಾದ ಮೆಚ್ಚುಗೆಯನ್ನು ಪಡೆಯುತ್ತಿದ್ದಾರೆ.‌' ಎಂದು ನಟ ಬಹಿರಂಗಪಡಿಸಿದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?