ಆಂಧ್ರ ಪ್ರದೇಶದಲ್ಲಿ(Andhra Pradesh) ಕಡಿಮೆ ಬೆಲೆಯಲ್ಲಿ ಸಿನಿಮಾ ಟಿಕೆಟ್ ಮಾರಾಟ ಮಾಡುವ ಬಗ್ಗೆ ಈಗ ಸಿನಿಮಾ ಖ್ಯಾತಿ ನಾನಿ ಪ್ರತಿಕ್ರಿಯಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಸಂಪೂರ್ಣ ಬಾಕ್ಸ್ ಆಫೀಸ್(Box Office) ಕಲೆಕ್ಷನ್ ಮೇಲೆ ಹೊಡೆತ ಬಿದ್ದಿದ್ದೆ. ಸದ್ಯ ಈ ವಿಚಾರ ಆಂಧ್ರ ಪ್ರದೇಶ ಹೈಕೋರ್ಟ್‌ನಲ್ಲಿ(High court) ಪೆಂಡಿಗ್‌ನಲ್ಲಿದ್ದು ಮುಂದಿನ ದಿನಗಳಲ್ಲಿ ಈ ವಿಚಾರವಾಗಿ ಪ್ರಮುಖ ನಿರ್ಧಾರ ಬಹಿರಂಗವಾಗಲಿದೆ. ಆದರೆ ಈ ಟಿಕೆಟ್(Ticket) ಬೆಲೆ ಇಳಿಸುವ ವಿಚಾರ ಸದ್ಯ ತೆಲುಗು ಸಿನಿಮಾ ಇಂಡಸ್ಟ್ರಿ ಹಾಗೂ ಸರ್ಕಾರದ ನಡುವಿನ ಹಗ್ಗಜಗ್ಗಾಟವಾಗಿದ್ದು ಈ ವಿಚಾರ ಚರ್ಚೆಯಾಗುತ್ತಲೇ ಇದೆ. ಕೊರೋನಾ ನಂತರ ಈ ಬಾರಿ ಟಾಲಿವುಡ್‌ನಲ್ಲಿಯೂ(Tollywood) ಬಿಗ್‌ಬಜೆಟ್ ಸಿನಿಮಾಗಳು ರಿಲೀಸ್ ಆಗಿದ್ದು, ಪ್ಯಾನ್ ಇಂಡಿಯಾ(Pan India) ಸಿನಿಮಾಗಳು ಸದ್ದು ಮಾಡುತ್ತಿವೆ.
ಆಂಧ್ರಪ್ರದೇಶದಲ್ಲಿ ಕಡಿಮೆ ಬೆಲೆ ಸಿನಿಮಾ ಟಿಕೆಟ್ ಸಮಸ್ಯೆ ಬಗ್ಗೆ ಹೈದಾರಾಬಾದ್‌ನಲ್ಲಿ ನಡೆದ ಶ್ಯಾಮ್ ಸಿಂಗ್ ರಾಜ್ ಸಿನಿಮಾದ ಕ್ವಶ್ಚನ್ & ಆನ್ಸರ್ ಸೆಷನ್‌ನಲ್ಲಿ ನಟ ನಾನಿ ಮಾತನಾಡಿದ್ದಾರೆ. ಈಗ ಏನು ನಡೆಯುತ್ತಿದೆಯೂ ಅದು ಸರಿ ಇಲ್ಲ. ನಮಗೆಲ್ಲರಿಗೂ ಅದು ಗೊತ್ತಿದೆ. ಅದನ್ನು ಹೇಗೆ ಹೇಳುವುದು ತಿಳಿಯುತ್ತಿಲ್ಲ. ಸಿನಿಮಾ, ರಾಜಕಾರಣಿಗಳನ್ನು ಸೈಡ್‌ಗಿಡಿ, ನೀವು ಪ್ರೇಕ್ಷಕರನ್ನು ಅವಮಾನಿಸುತ್ತಿದ್ದೀರಿ. ಇವತ್ತು ನಾನೆಲ್ಲೋ ಟಿಕೆಟ್ ಬೆಲೆ 10, 151 20 ಇರುವುದನ್ನು ನೋಡಿದೆ ಎಂದಿದ್ದಾರೆ.
ಮುಗುಳು ನಗುವಲ್ಲೇ ನಾನಿಯ ಮನವ ಗೆದ್ದ ಸಾಯಿ ಪಲ್ಲವಿ
ಹತ್ತು ಜನರಿಗೆ ಉದ್ಯೋಗ ಒದಗಿಸುವ ದೊಡ್ಡ ಥಿಯೇಟರ್ ನಡೆಸುವ ವ್ಯಕ್ತಿಯ ಕೌಂಟರ್‌ಗಿಂತ ಕಿರಾಣಿ ಅಂಗಡಿಯ ಕೌಂಟರ್ ದೊಡ್ಡದಾಗಿ ಕಂಡುಬಂದರೆ ಅದು ತರ್ಕಬದ್ಧವಲ್ಲ. ಪ್ರೇಕ್ಷಕರನ್ನು ಅವಮಾನಿಸಬಾರದು ಎಂದು ನಾನಿ ಒತ್ತಿ ಹೇಳಿದ್ದಾರೆ. ಊಹಿಸಿ, ನಾನು ಶಾಲೆಯಲ್ಲಿದ್ದಾಗ ಹಾಗೂ ನಾನು ದೊಡ್ಡ ಹಣವನ್ನು ಖರ್ಚು ಮಾಡಲು ಅಸಮರ್ಥನೆಂದು ಹೇಳಿ ಪಿಕ್ನಿಕ್ ಯೋಜನೆಗೆ ಎಲ್ಲಾ ಇತರ ವಿದ್ಯಾರ್ಥಿಗಳಂತೆ 100 ರೂ. ಹೇಳದೆ ನನಗೆ ಕೇವಲ 10 ರೂಪಾಯಿಗಳನ್ನು ಪಾವತಿಸಲು ಕೇಳಿದರೆ ಇದು ನನಗೆ ಮಾಡಿದ ಅವಮಾನವಲ್ಲದೆ ಬೇರೇನೂ ಅಲ್ಲ, ಎಂದು ಅವರು ಹೇಳಿದ್ದಾರೆ.
Natural Star Nani at today’s press meet. pic.twitter.com/53IR1cW4RK
— Vamsi Kaka (@vamsikaka)undefined
ಶ್ಯಾಮ್ ಸಿಂಗ್ ರಾಯ್ ಸಿನಿಮಾ ಕುರಿತು:
ನ್ಯಾಚುರಲ್ ಸ್ಟಾರ್ ನಾನಿ (Nani) ಅವರು ಕೊನೆಯದಾಗಿ ನಟಿಸಿದ ಚಿತ್ರ ಟಕ್ ಜಗದೀಶ್ (Tuck Jagadish). ಈ ಚಿತ್ರ ಡೈರೆಕ್ಟ್ ಆಗಿ ಒಟಿಟಿ ಪ್ಲಾಟ್ ಫಾರ್ಮ್ ಅಮೇಜಾನ್ ಪ್ರೈಂ (Amazon Prime) ನಲ್ಲಿ ಬಿಡುಗಡೆಯಾಗಿ ಸಿನಿಮಂದಿಯಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಿತ್ತು. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರದಲ್ಲಿ 'ಪೆಳ್ಳಿ ಚೂಪುಲು' ಸಿನಿಮಾ ಖ್ಯಾತಿಯ ರಿತು ವರ್ಮಾ ನಾನಿಗೆ ನಾಯಕಿಯಾಗಿ ಅಭಿನಯಿಸಿದ್ದರು. ಇದೀಗ ನಾನಿ ಹೊಸ ಚಿತ್ರದಲ್ಲಿ ನಟಿಸುತ್ತಿದ್ದು, ಈ ಸಿನಿಮಾಕ್ಕೋಸ್ಕರ ಅವರ ಕಂಪ್ಲೀಟ್ ಲುಕ್ ಬದಲಾಯಿಸಿಕೊಂಡಿದ್ದಾರೆ.
ಹೌದು! 'ಶ್ಯಾಮ್ ಸಿಂಗಾ ರಾಯ್' (Shyam Singha Roy) ಚಿತ್ರದಲ್ಲಿ ನಾನಿ ನಟಿಸುತ್ತಿದ್ದು, ಚಿತ್ರದ ಟೀಸರ್ (Teaser) ಒಟ್ಟು ನಾಲ್ಕು ಭಾಷೆಗಳಲ್ಲಿ ಇಂದು ಬಿಡುಗಡೆಯಾಗಿದೆ. ಬಿಡುಗಡೆಯಾದ ಟೀಸರ್‌ನಲ್ಲಿ 'ಕೇಳೋ ಧೈರ್ಯ ಇಲ್ಲ, ಎದುರು ನಿಲ್ಲೋ ಶಕ್ತಿ ಇಲ್ಲ ಅಂತಾ ರಕ್ಷಿಸಬೇಕಾಗಿರೋ ದೇವರೇ ರಾಕ್ಷಸನಾಗಿ ಬದಲಾಗುತ್ತಿದರೆ, ಕಾಗದ ಹೊಟ್ಟೆ ಸೀಳಿ ಹುಟ್ಟಿ ಬರಹ ಅಲ್ಲ, ಹಣೆ ಬರಹನೇ ಬರೆಯೋದು ಗೊತ್ತು ಅಂತಾ ಅಕ್ಷರ ಹಿಡಿದಿರೋ ಆಯುಧದ ಹೆಸರೇ 'ಶ್ಯಾಮ್ ಸಿಂಗಾ ರಾಯ್' ಎಂಬ ಪವರ್‌ಫುಲ್ ಡೈಲಾಗ್‌ಗಳ ಜೊತೆಗೆ ಕೋಲ್ಕತ್ತಾದಲ್ಲಿನ ದೇವದಾಸಿ ಪದ್ದತಿ ಮತ್ತು ಈ ಪದ್ದತಿಯನ್ನು ತೊಡೆದುಹಾಕಲು ಜನರು ಹೇಗೆ ಹೋರಾಡುತ್ತಾರೆ ಎನ್ನುವ ಬಗ್ಗೆ ತೋರಿಸಲಾಗಿದೆ. ಬಂಗಾಳಿ ನೆಲದಲ್ಲಿ ನಡೆಯುವ ಈ ಕತೆಗೆ ನಾನಿ 'ಸ್ತ್ರೀ ಯಾರಿಗೂ ಗುಲಾಮಳಲ್ಲ ಕಡೆಗೆ ಆ ದೇವ್ರಿಗೂ ಕೂಡಾ' ಎಂದು ಬಂಗಾಳಿ ಭಾಷೆಯಲ್ಲಿ ಡೈಲಾಗ್ ಹೇಳಿದ್ದಾರೆ.