ಸಾಯಿ ಪಲ್ಲವಿ ಕನ್ನಡ 'ಗಾರ್ಗಿ' ಚಿತ್ರಕ್ಕೆ ಸಾಥ್ ನೀಡಿದ ಸೂರ್ಯ- ಜೋತಿಕಾ ದಂಪತಿ!

Published : Jun 25, 2022, 10:01 AM IST
ಸಾಯಿ ಪಲ್ಲವಿ ಕನ್ನಡ 'ಗಾರ್ಗಿ' ಚಿತ್ರಕ್ಕೆ ಸಾಥ್ ನೀಡಿದ ಸೂರ್ಯ- ಜೋತಿಕಾ ದಂಪತಿ!

ಸಾರಾಂಶ

ಮಲರ್ ನಟಿಗೆ ಸಿಕ್ಕಿದೆ ದೊಡ್ಡ ಬಲ. ಪೋಸ್ಟರ್ ಪಕ್ಕ ಸೂರ್ಯ- ಜೋತಿಕಾ ನೋಡಿ ಸೂಪರ್ ಹಿಟ್ ಎಂದ ನೆಟ್ಟಿಗರು...

ವಿರಾಟ ಪರ್ವಂ ಬ್ಲಾಕ್ ಬಸ್ಟರ್ ಹಿಟ್ ನಂತರ ನಟಿ ಸಾಯಿ ಪಲ್ಲವಿ ಗಾರ್ಗಿ ಸಿನಿಮಾ ಸಖತ್ ಪ್ರಾಮಿಸಿಂಗ್ ಆಗಿದೆ. ಕಾಲಿವುಡ್ ಪವರ್ ಕಪಲ್, ಸ್ಟಾರ್ ಕಪಲ್ ಸೂರ್ಯ ಮತ್ತು ಜೋತಿಕಾ 2ಡಿ ಪಿಕ್ಚರ್ಸ್‌ ನಿರ್ಮಾಣ ಸಂಸ್ಥೆ ಮೂಲಕ ತಮಿಳಿನಲ್ಲಿ ಗಾರ್ಗಿ ಸಿನಿಮಾ ರಿಲೀಸ್ ಮಾಡಲು ಮುಂದೆ ಬಂದಿದ್ದಾರೆ. 

ಸೂರ್ಯ ಮತ್ತು ಸಾಯಿ ಪಲ್ಲವಿ ಇಬ್ಬರೂ ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋ ಹಂಚಿಕೊಂಡು ಕೈ ಜೋಡಿಸಿರುವುದರ ಬಗ್ಗೆ ಬರೆದುಕೊಂಡಿದ್ದಾರೆ. 'ಜೋ ಮತ್ತು ನಾನು ಗಾರ್ಗಿ ಸಿನಿಮಾ ತಂಡದ ಜೊತೆ ಕೈ ಜೋಡಿಸಿದ್ದೀವಿ. ಕೆಲವೊಂದು ಪಾತ್ರಗಳು ನಮ್ಮ ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ. ಹೊಸ ಯೋಚನೆಗಳು ಹೊಸ ಬರವಣಿಗೆಗಳನ್ನು ಆಚರಿಸಬೇಕು. ನಿಮಗೆಲ್ಲಾ ಇಷ್ಟ ಆಗುತ್ತದೆ ಅಂದುಕೊಂಡಿದ್ದೀವಿ'ಎಂದು ಬರೆದುಕೊಂಡು ಸಾಯಿ ಪಲ್ಲವಿ ಟೀಂ ಜೊತೆ ಫೋಟೋ ಅಪ್ಲೋಡ್ ಮಾಡಿದ್ದಾರೆ.

ಸಾಯಿ ಪಲ್ಲವಿಯಿಂದ ಮಾಧ್ಯಮದವರು ಕಲಿಯುವುದು ಸಾಕಷ್ಟಿದೆ; ನಟ ಕಿಶೋರ್

'ಸೂರ್ಯ ಸರ್ ಮತ್ತು ಜೋತಿಕಾ ಮೇಡಂ ನಿಮ್ಮ ಪ್ರೀತಿಗೆ ನಾನು ಆಭಾರಿ. ಇದು ನಮಗೆ ಎಷ್ಟು ಮುಖ್ಯ ಎಂದು ನೀವು ಕಲ್ಪನೆ ಕೂಡ ಮಾಡಿರಲಿಲ್ಲ. ಸಖತ್ ಫಿಲ್ಮಂ ಫ್ಯಾಕ್ಟರ್ ಮತ್ತು 2ಡಿ ಪಿಕ್ಚರ್ಸ್‌ ಅರ್ಪಿಸುವ ಗಾರ್ಗಿ ಸಿನಿಮಾ' ಎಂದು ಪಲ್ಲವಿ ಬರೆದುಕೊಂಡಿದ್ದಾರೆ. 

ಗೌಥಮ್ ರಾಮಚಂದ್ರನ್ ಬರೆದು ನಿರ್ದೇಶನ ಮಾಡಿರುವ ಗಾರ್ಗಿ ಸಿನಿಮಾವನ್ನು ರವಿಚಂದ್ರನ್ ರಾಮಚಂದ್ರನ್, ಐಶ್ವರ್ಯ ಲಕ್ಷ್ಮಿ, ಥಾಮಸ್ ಜಾರ್ಜ್ ಮತ್ತು ಗೌತಮ್ ನಿರ್ಮಾಣ ಮಾಡುತ್ತಿದ್ದಾರೆ. ನಟಿ ಐಶ್ವರ್ಯ ಲಕ್ಷ್ಮಿ ಈ ಸಿನಿಮಾ ಮೂಲಕ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಗೋವಿಂದ್ ವಸಂತ್ ಸಂಗೀತ ನಿರ್ದೇಶನ ಮಾಡಿದ್ದಾರೆ. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು, ದಿನಾಂಕವನ್ನು ಶೀಘ್ರದಲ್ಲಿ ಅನೌನ್ಸ್ ಮಾಡಲಿದ್ದಾರೆ. 

 

ಕನ್ನಡದಲ್ಲಿ ಡಬ್ಬಿಂಗ್:

ಕನ್ನಡದಲ್ಲಿ ಗಾರ್ಗಿ ಸಿನಿಮಾ ರಿಲೀಸ್ ಆಗುತ್ತಿದ್ದು ಸ್ವತಃ ಸಾಯಿ ಪಲ್ಲವಿ ಅವರೇ ಡಬ್ಬಿಂಗ್ ಮಾಡಿದ್ದಾರೆ. 'ತಮಿಳು ಮಾತನಾಡುವ ಹುಡುಗಿಯೊಬ್ಬಳು ಕನ್ನಡ ಮಾತನಾಡಿದಂತೆ ಇದು ಇರುವುದಿಲ್ಲ ಅಪ್ಪಟ ಕನ್ನಡದ ಹುಡುಗಿಯಂತೆ ಡಬ್ ಮಾಡಿರುವೆ. ಕನ್ನಡ ಮಾತನಾಡುವುದಕ್ಕೆ ಖುಷಿಯಾಗಿದೆ. ಆದರೆ ನನಗೆ ಲ, ಣ, ನ ಅಕ್ಷರಗಳನ್ನು ಬಳಸುವಾಗ ಚಾಲೆಂಜ್‌ ಅನಿಸುತ್ತದೆ. ಖುಷಿ ವಿಚಾರ ಏನೆಂದರೆ ನನ್ನ ಜೊತೆ ಒಳ್ಳೆಯ ತಂಡವಿದೆ. ಅವರಿಂದಾಗಿ ತಮಿಳು ಮಾತನಾಡುವ ಹುಡುಗಿ ಕನ್ನಡ ಮಾತನಾಡಿದಂತೆ ಇರುವುದಿಲ್ಲ. ಅಪ್ಪಟ ಕನ್ನಡತಿ ಸಿನಿಮಾ ಡಬ್ ಮಾಡಿದಂತೆ ಇರುತ್ತದೆ. ನಾನು ಪರಿಪೂರ್ಣವಾಗಿ ಕನ್ನಡದಲ್ಲಿ ಡಬ್ ಮಾಡಿದ್ದೀನಿ ಅನಿಸುತ್ತದೆ ಸಿನಿ ರಸಿಕರಿಗೆ. ಇಡೀ ಕ್ರೆಡಿಟ್ ಆ ತಂಡಕ್ಕೆ ಸಲ್ಲಿಸಬೇಕು' ಎಂದು ಪಲ್ಲವಿ ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಹೇಳಿದ್ದಾರೆ

ಪಲ್ಲವಿ ಹಿಂದಿನ ಸಿನಿಮಾ:

ರಾಣಾ ದಗ್ಗುಬಾಟಿಗೆ ಜೋಡಿಯಾಗಿ ಸಾಯಿ ಪಲ್ಲವಿ ವಿರಾಟ ಪರ್ವಂ ಸಿನಿಮಾದಲ್ಲಿ ಅಭಿನಯಿಸಿದ್ದರು. ಬ್ಲಾಕ್ ಬಸ್ಟರ್ ಹಿಟ್ ಕಂಡ ಈ ಸಿನಿಮಾ1990ರಲ್ಲಿ ನಡೆದ ನೈಜ ಘಟನೆಯನ್ನು ವಿವರಿಸುತ್ತದೆ. ಕಾಮ್ರೇಡ್ ರಾವಣ್ಣ ಪಾತ್ರದಲ್ಲಿ ರಾಣಾ ಕಾಣಿಸಿಕೊಂಡಿದ್ದು ಅವರ ಪೆನ್ ನೇಮ್ ಅರಣ್ಯಾ ಎಂದು ಕರೆಸಿಕೊಂಡಿದ್ದಾರೆ, ಸಾಯಿ ಪಲ್ಲವಿ ವೆನ್ನಲ್ ಪಾತ್ರದಲ್ಲಿ ಮಿಂಚಿದ್ದಾರೆ. ಈ ಸಿನಿಮಾದಲ್ಲಿ ಕನ್ನಡ ನಟಿ ಪ್ರಿಯಾಮಣಿ, ನಂದಿತಾ ದಾಸ್, ನವೀನ್ ಚಂದ್ರ, ಝರೀನ್, ಈಶ್ವರಿ ರಾವ್ ಮತ್ತು ಸಾಯಿ ಚಂದ್ ಅಭಿನಯಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೀದಿಗೆ ಬಂದ ಸಂಸಾರದ ಕಥೆ; ಪತ್ನಿಯೂ ಇಲ್ಲ, ಗರ್ಲ್‌ಫ್ರೆಂಡ್ ಇಲ್ಲ;‌ ಪ್ರೆಸ್‌ಮೀಟ್‌ನಲ್ಲಿ ಕೂಗಾಡಿದ Ravi Mohan
Shagufta Rafique: ಒಮ್ಮೆ ಕಾಲ್ ಗರ್ಲ್, ಬಳಿಕ ಬಾರ್‌ ಡಾನ್ಸರ್; ಈಗ ಸೂಪರ್‌ ಹಿಟ್ ಸಿನಿಮಾ ಫೇಮಸ್‌ ರೈಟರ್‌!