ಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ'ದಿಂದ ವಿಜಯ್ ಸೇತುಪತಿ ಔಟ್ ಆಗಿದ್ದೇಕೆ? ಕಾರಣ ಬಿಚ್ಚಿಟ್ಟ ನಾಗಚೈತನ್ಯ

By Shruiti G Krishna  |  First Published Aug 7, 2022, 4:04 PM IST

ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗಚೈತನ್ಯ ಮಾಡಬೇಕಿದ್ದ ಪಾತ್ರವನ್ನು ಸೌತ್ ಸ್ಟಾರ್ ವಿಜಯ್ ಸೇತುಪತಿ ಮಾಡಬೇಕಿತ್ತು. ಆದರೆ ವಿಜಯ್ ಸೇತುಪತಿ ಹಿಂದೇಟು ಹಾಕಿದ ಕಾರಣ ನಾಗಚೈತನ್ಯ ಆಯ್ಕೆಯಾದರು. ಈ ಬಗ್ಗೆ ನಾಗಚೈತನ್ಯ ಅವರಿಗೆ ಪ್ರಶ್ನೆ ಎದುರಾಗಿದೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಾಗಚೈತನ್ಯ ಪ್ರತಿಕ್ರಿಯೆ ನೀಡಿದ್ದಾರೆ. 


ಬಾಲಿವುಡ್ ಸ್ಟಾರ್ ನಟ, ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಕರೆಸಿಕೊಳ್ಳುವ ಆಮೀರ್ ಖಾನ್ ಸದ್ಯ ಲಾಲ್ ಸಿಂಗ್ ಚಡ್ಡಾ ರಿಲೀಸ್ ನ ಬ್ಯುಸಿಯಲ್ಲಿದ್ದಾರೆ. ಲಾಲ್ ಸಿಂಗ್ ಚಡ್ಡಾ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಇದೇ ತಿಂಗಳು 11ರಂದು ಸಿನಿಮಾ ದೇಶದಾದ್ಯಂತ ತೆರೆಗೆ ಬರುತ್ತಿದೆ. ಅನೇಕ ವರ್ಷಗಳ ಬಳಿಕ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಮೂಲಕ ಅಭಿಮಾನಿಗಳ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಈ ಸಿನಿಮಾದಲ್ಲಿ ಆಮೀರ್ ಖಾನ್ ಜೊತೆ ಸೌತ್ ಖ್ಯಾತ ನಟ ನಾಗಚೈತನ್ಯ ಕೂಡ ನಟಿಸಿದ್ದಾರೆ. ಈ ಸಿನಿಮಾ ಮೂಲಕ ನಾಗಚೈತನ್ಯ ಮೊದಲ ಬಾರಿಗೆ ಬಾಲಿವುಡ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಸಿನಿಮಾದ ಪ್ರಮೋಷನ್ ಕಾರ್ಯ ಜೋರಾಗಿ ನಡೆಯುತ್ತಿದೆ. ಸಿನಿಮಾತಂಡ ಬೇರೆ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದೆ. ನಾಗ ಚೈತನ್ಯ ಕೂಡ ಮೊದಲ ಹಿಂದಿ ಸಿನಿಮಾದ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದಾರೆ. 

ಅಂದಹಾಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗಚೈತನ್ಯ ಮಾಡಬೇಕಿದ್ದ ಪಾತ್ರವನ್ನು ಸೌತ್ ಸ್ಟಾರ್ ವಿಜಯ್ ಸೇತುಪತಿ ಮಾಡಬೇಕಿತ್ತು. ಆದರೆ ವಿಜಯ್ ಸೇತುಪತಿ ಹಿಂದೇಟು ಹಾಕಿದ ಕಾರಣ ನಾಗಚೈತನ್ಯ ಆಯ್ಕೆಯಾದರು. ಈ ಬಗ್ಗೆ ನಾಗಚೈತನ್ಯ ಅವರಿಗೆ ಪ್ರಶ್ನೆ ಎದುರಾಗಿದೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಾಗಚೈತನ್ಯ ಪ್ರತಿಕ್ರಿಯೆ ನೀಡಿದ್ದಾರೆ. 'ನಿಜಕ್ಕೂ ನನಗೆ ವಿಜಯ್ ಸರ್ ಅವರೊಂದಿಗೆ ಏನಾಯಿತು ಎಂಬುದರ ಕುರಿತು ಮಾಹಿತಿ ಇಲ್ಲ.  ಆದರೆ ಡೇಟ್ಸ್ ಸಮಸ್ಯೆ ಆಗಿತ್ತು ಅದಕ್ಕಿಂತ ಹೆಚ್ಚೇನೂ ಇಲ್ಲ ಎಂದು ಅವರು ನನಗೆ ಹೇಳಿದರು. ಆದರೆ ಅವರು ವಿಜಯ್ ಸರ್ ಪಾತ್ರವನ್ನು ನಿರ್ವಹಿಸಬೇಕಾದಾಗ ಉತ್ತರ ಭಾರತಕ್ಕೆ ಪ್ರಯಾಣಿಸುವ ತಮಿಳು ಮಾತನಾಡುವ ಹುಡುಗನಂತೆ ವಿನ್ಯಾಸಗೊಳಿಸಲು ಹೊರಟಿದ್ದರು. ಆದರೆ ನನಗೆ ತೆಲುಗು ಮಾತನಾಡುವ ಹುಡುಗನ ಪಾತ್ರ ಸೃಷ್ಟಿಸಲಾಗಿದೆ.  ನಾನು ಸಿನಿಮಾದಲ್ಲಿಯೂ ಎಪಿ ತೆಲಂಗಾಣದಿಂದ ಬಂದ ಹುಡುಗನಾಗಿದ್ದೀನಿ' ಎಂದು ಹೇಳಿದರು. 

ಆಮೀರ್ ಖಾನ್‌ಗೆ ಸೌತ್‌ನ ಈ ಖ್ಯಾತ ನಿರ್ದೇಶಕರ ಜೊತೆ ಕೆಲಸ ಮಾಡುವ ಆಸೆಯಂತೆ

Tap to resize

Latest Videos

ವಿಜಯ್ ಸೇತುಪತಿ ಜೊತೆ ಹೋಲಿಕೆ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ನಾಗಚೈತನ್ಯ,  'ಹೌದು ಹೋಲಿಕೆಯ ವಿಚಾರ ಸರಿಯಲ್ಲ. ನನ್ನ ಪ್ರಕಾರ ಪ್ರತಿಯೊಬ್ಬ ನಟನೂ ತುಂಬಾ ವಿಭಿನ್ನ. ಅವರವರ ವಿಧಾನವೇ ಬೇರೆ, ಅವರ ವ್ಯಕ್ತಿತ್ವವೇ ಬೇರೆ. ಅವರ ಸೃಜನಶೀಲ ಅಭಿವ್ಯಕ್ತಿ ವಿಭಿನ್ನವಾಗಿದೆ. ಹೌದು, ನಾನು ವಿಜಯ್ ಸರ್ ಅವರನ್ನು ತುಂಬಾ ನೋಡುತ್ತೇನೆ, ನಾನು ಅವರ ಕೆಲಸದ ದೊಡ್ಡ ಅಭಿಮಾನಿ. ಅವರು ಅದ್ಭುತ ನಟ, ನಾನು ನೋಡಿದ ಕೊನೆಯ ಚಿತ್ರ ವಿಕ್ರಮ್‌ನಲ್ಲಿಯೂ ಅವರ ಪಾತ್ರವನ್ನು ನಿಜವಾಗಿಯೂ ಆನಂದಿಸಿದೆ. ಅವರು ಏನಾಗಿದ್ದಾರೋ ಅದು ಅವರು, ನಾನು ಏನಾಗಿದ್ದೇನೆ ಎಂದು ನಾನು ನೋಡಿದ್ದೇನೆ' ಎಂದು ನಾಗ ಚೈತನ್ಯ ಹೇಳಿದರು. 

ಲಾಲ್‌ ಸಿಂಗ್‌ ಚಡ್ಡಾ ಬಹಿಷ್ಕರಿಸಿ: ಆಮೀರ್ ಚಿತ್ರದ ವಿರುದ್ಧ ಕಂಗನಾ ಕಿಡಿ

   ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಇದೇ ಆಗಸ್ಟ್ 11 ರಂದು ರಿಲೀಸ್ ಆಗುತ್ತಿದೆ. ಲಾಲ್ ಸಿಂಗ್ ಚಡ್ಡಾ ಹಾಲಿವುಡ್ ನ ಫಾರೆಸ್ಟ್ ಗಂಪ್ ಸಿನಿಮಾದ ರಿಮೇಕ್ ಆಗಿದೆ. ಆಮೀರ್ ಖಾನ್ ಗೆ ನಾಯಕಿಯಾಗಿ ಕರೀನಾ ಕಪೂರ್ ನಟಿಸಿದ್ದಾರೆ. 3 ಈಡಿಯಟ್ಸ್ ಬಳಿಕ  ಕರೀನಾ ಕಪೂರ್ ಮತ್ತೆ ಆಮೀರ್ ಖಾನ್ ಜೊತೆ ನಟಿಸಿದ್ದಾರೆ.  

click me!