
ಬೆಂಗಳೂರು (ಏ. 08): ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಜೀರೋ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ. ರಾಕಿಭಾಯ್ ಕೆಜಿಎಫ್ ಮುಂದೆ ಜೀರೋ ಮಕಾಡೆ ಮಲಗಿತು.
ಹುಡುಗಿಯರ ನಿದ್ದೆಗೆಡಿಸಿದೆ ಪ್ರಿನ್ಸ್ ಮಹೇಶ್ ಬಾಬು ಈ ಲುಕ್!
ಇದೀಗ ಶಾರೂಕ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಚರ್ಚೆ ನಡೆಯುತ್ತಿದೆ. ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, ನನ್ನ ಮುಂದಿನ ಸಿನಿಮಾದಲ್ಲಿ ಸೆಕ್ಸಿಯಾಗಿ ಕಾಣಿಸಿಕೊಳ್ಳಲಿದ್ದೇನೆ. ನಾನು ಹೇಗೆ ಕಾಣಿಸಿಕೊಳ್ಳಬೇಕು ಎಂದು ನೀವು ಬಯಸುತ್ತೀರೋ ಹಾಗೆಯೇ ನಾನು ಕಾಣಿಸಿಕೊಳ್ಳುತ್ತೇನೆ ಎಂದು ಶಾರೂಕ್ ಹೇಳಿದ್ದಾರೆ.
ಬಿರ್ಲಾ ಮಗಳಾದ್ರೂ ಫಿಟ್‌ನೆಸ್‌ನಲ್ಲಿ ಕಮ್ಮಿ ಇಲ್ಲ!
ಬಾಲಿವುಡ್ ನಲ್ಲಿ ಕೆಲಸದ ವಾತಾವರಣ ಹೇಗೆ ಬದಲಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ, ಮಹಿಳೆಯರ ಪಾತ್ರ, ಅವರ ಆ್ಯಟಿಟ್ಯೂಡ್ ಸಕಾರಾತ್ಮಕವಾಗಿ ಬದಲಾಗಿದೆ. 90 ರ ದಶಕದಲ್ಲಿ ಮಹಿಳೆಯರು ಮದುವೆಯಾದರೆ ಅವರಿಗೆ ಅವಕಾಶಗಳು ಕಡಿಮೆಯಾಗುತ್ತಿತ್ತು. ಆದರೆ ಇದೀಗ ಕಾಲ ಬದಲಾಗಿದೆ. ಈಗ ಮದುವೆಯಾದವರೂ ಇಂಡಸ್ಟ್ರಿಯಲ್ಲಿ ಮುಂದುವರೆದಿದ್ದಾರೆ ಎಂದಿದ್ದಾರೆ.
ನಟಿ ಮೇಘನಾಗೆ ಮಧ್ಯರಾತ್ರಿಯಲ್ಲಿ ಸಿಕ್ರು ರಿಯಲ್ ಹೀರೋ!
ಶಾರೂಕ್ ಸಾರೇ ಜಹಾಂಸೆ ಅಚ್ಚಾ ಸಿನಿಮಾದಲ್ಲಿ ನಟಿಸುತ್ತಾರೆ ಎಂ ಮಾತು ಕೇಳಿ ಬಂದಿತ್ತು. ಜೊತೆಗೆ ಡಾನ್-3 ಯಲ್ಲಿ ನಟಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಯಾವುದಕ್ಕೂ ಇದಮಿತ್ತಂ ಎಂಬ ಉತ್ತರ ಸಿಕ್ಕಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.