ಬಾಲಿವುಡ್‌ನಲ್ಲಿ ಸೇನೆಯದ್ದೇ ಹವಾ; ಬರಲಿದೆ ಇನ್ನಷ್ಟು ಸಿನಿಮಾ

Published : Apr 08, 2019, 01:40 PM IST
ಬಾಲಿವುಡ್‌ನಲ್ಲಿ ಸೇನೆಯದ್ದೇ ಹವಾ; ಬರಲಿದೆ ಇನ್ನಷ್ಟು ಸಿನಿಮಾ

ಸಾರಾಂಶ

ಉರಿ, ಕೇಸರಿ ಯಶಸ್ಸಿನ ನಂತರ ಬಾಲಿವುಡ್‌ನಲ್ಲಿ ಸೇನಾಧಾರಿತ ಸಿನಿಮಾಗಳದ್ದೇ ಹವಾ! | ಬರಲಿದೆ ಇನ್ನೂ ಹತ್ತು ಸಿನಿಮಾಗಳು | 

ಬೆಂಗಳೂರು (ಏ. 08): ಬಾಲಿವುಡ್ ನಲ್ಲಿ ಸೇನೆಗೆ ಸಂಬಂಧಿಸಿದ ಚಿತ್ರಗಳ ಕಾರುಬಾರು ಜೋರಾಗಿದೆ. ಉರಿ, ಕೇಸರಿ ಸಿನಿಮಾ ಸಕ್ಸಸ್ ನಂತರ ಆರ್ಮಿಗೆ ಸಂಬಂಧಿಸಿದ ಇನ್ನೂ 10 ಸಿನಿಮಾಗಳು ತೆರೆಗೆ ಬರಲು ಸಿದ್ಧವಾಗಿವೆ. 

ಲಿಲ್ಲಿಗೆ ಈ ಹಾಡು ಡೆಡಿಕೇಟ್ ಮಾಡಿದ ವಿಜಯ್ ದೇವರಕೊಂಡ!

ಖ್ಯಾತ ನಿರ್ದೇಶಕರಾದ ಸಂಜಯ್ ಲೀಲಾ ಬನ್ಸಾಲಿ, ಭೂಷಣ್ ಕುಮಾರ್, ಅಭಿಷೇಕ್ ಕಪೂರ್ ಈ ಸಿನಿಮಾಗಳನ್ನು ಮಾಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. 

ಅಜಯ್ ದೇವಗನ್ ಭೂಜ್ 

ಅಜಯ್ ದೇವಗನ್ ಭೂಜ್ ಎನ್ನುವ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 1971 ರಲ್ಲಿ ನಡೆದ ಇಂಡೋ-ಪಾಕ್ ಯುದ್ಧದಲ್ಲಿ ವಿಂಗ್ ಕಮಾಂಡರ್ ವಿಜಯ್ ಕಾರ್ಣಿಕ್ ಅವರ ಶೌರ್ಯ, ಸಾಹಸಾಧಾರಿತ ಸಿನಿಮಾ ಇದಾಗಿದೆ. 

ಈ ವಿಚಾರದಲ್ಲಿ ಕಿಚ್ಚ- ಶಿವಣ್ಣ ವಿಲನ್ ಆಗ್ತಾರಾ ?

ಕಾರ್ಗಿಲ್ ಗರ್ಲ್ ಆದ ಜಾನ್ಹವಿ ಕಪೂರ್ 

ಶ್ರೀದೇವಿ ಪುತ್ರಿ ಜಾನ್ಹವಿ ಕಪೂರ್ ಕಾರ್ಗಿಲ್ ಹುಡುಗಿಯಾಗಿದ್ದಾರೆ. ಮೊದಲ ಮಹಿಳಾ ಪೈಲಟ್ ಗುಂಜನ್ ಸಕ್ಸೇನಾ ಜೀವನಾಧಾರಿತ ಚಿತ್ರ ಇದಾಗಿದ್ದು ಈ ಚಿತ್ರದಲ್ಲಿ ಜಾನ್ಹವಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.  ಅದೇ ರೀತಿ ಮೇಘನಾ ಗುಲ್ಜಾರ್ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಬಯೋಪಿಕ್ ನಲ್ಲಿ ನಟಿಸುತ್ತಿದ್ದಾರೆ. 

ಇನ್ನೂ ಬರಬಹುದಾದ ಸಿನಿಮಾಗಳು 

ದಿ. ವಿಕ್ರಂ ಬಾತ್ರಾ: ಸಿದ್ಧಾರ್ಥ್ ಮಲೋತ್ರಾ ಮಾಡುತ್ತಿದ್ದಾರೆ. 

ಅರುಣ್ ಕೇತರ್ ಪಾಲ್: ನಿರ್ಮಾಪಕ ದಿನೇಶ್ ವಿಜನ್ ತಂಡ ತಯಾರಿ ನಡೆಸುತ್ತಿದೆ. 

ಬಿಷ್ಣು ಶ್ರೇಷ್ಠ: ಇವರ ಬಯೋಪಿಕ್ ಮಾಡಲು ಹಿಮೇಶ್ ರೇಶಮಿಯಾ ರೈಟ್ಸ್ ತೆಗೆದುಕೊಂಡಿದ್ದಾರೆ. 

ಜಸ್ವಂತ್ ಸಿಂಗ್ ರಾವತ್: ಸುಶಾಂತ್ ಸಿಂಗ್ ರಜಪೂತ್ ಈ ಸಿನಿಮಾ ಮಾಡುತ್ತಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?