Sana Khan: ಪತ್ನಿ ಮುಂದೆ ಹೋಗೋದಾ? ನಟಿಯ ಹಿಂದೆ ತಳ್ಳಿದ ಪತಿ: ವಿಡಿಯೋ ನೋಡಿ ಕಣ್ಣೀರಿಡ್ತಿರೋ ಫ್ಯಾನ್ಸ್​​!

Published : Jul 14, 2025, 07:38 PM IST
Sana Khan

ಸಾರಾಂಶ

ಮಿನಿ ಸ್ಕರ್ಟ್​, ಬಿಕಿನಿ ಎಲ್ಲವನ್ನೂ ಬಿಟ್ಟು ಇದೀಗ ಮದುವೆಯಾಗಿ ಹಿಜಾಬ್​ನಲ್ಲಿಯೇ ಕಾಣಿಸಿಕೊಳ್ತಿರೋ ನಟಿ ಸನಾ ಅವರ ವಿಡಿಯೋ ಒಂದು ಪತಿಯ ಜೊತೆ ವೈರಲ್​ ಆಗಿದ್ದು, ಅಭಿಮಾನಿಗಳು ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನು? 

ಮಿನಿ ಸ್ಕರ್ಟ್​, ಬಿಕಿನಿ ಎಲ್ಲವನ್ನೂ ಬಿಟ್ಟು ಹಿಜಾಬ್​ ಧರಿಸಿ ಈಗ ಗಂಡ- ಮುದ್ದು ಕಂದನ ಜೊತೆ ಸುಂದರ ಸಂಸಾರ ನಡೆಸುತ್ತಿದ್ದಾರೆ ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಹಾಗೂ ಕನ್ನಡದ ಕೂಲ್​ ಸಿನಿಮಾ ನಟಿ ಸನಾ ಖಾನ್. ಇವರು ಬಣ್ಣದ ಲೋಕ ತ್ಯಜಿಸಿ ಐದು ವರ್ಷಗಳಾಗಿವೆ. ಹಲವು ವರ್ಷಗಳ ಸಿನಿಮಾ ನಂಟು ಹೊಂದಿದ್ದ ನಟಿ, ಗುಜರಾತ್‌ನ ಅಂಕಲೇಶ್ವರದ ಮುಫ್ತಿ ಅನಾಸ್ ಸೈಯದ್ (Mufti Anas Sayed)ಅವರನ್ನು ವಿವಾಹವಾದರು. ವಿವಾಹದ ನಿರ್ಧಾರದ ಮಾಡುತ್ತಲೇ ಸಿನಿಮಾರಂಗ ತೊರೆಯುವ ಸಂದರ್ಭ ಬಂದಿತ್ತು. ಆಗ ನಟಿ ತುಂಬಾ ದುಃಖಿತರಾಗಿದ್ದರು. ಅಕ್ಷರಶಃ ಕಣ್ಣೀರಿಟ್ಟಿದ್ದರು. ಸಮಾಜ ಸೇವೆ ಮಾಡಲು ಮತ್ತು ಸೃಷ್ಟಿಕರ್ತನ ಆದೇಶವನ್ನು ಅನುಸರಿಸುವ ಕಾರಣಕ್ಕೆ ಬಣ್ಣದ ಲೋಕ ತೆರೆಯಬೇಕಾಯಿತು ಎನ್ನುತ್ತಲೇ ಹೆಸರು, ಖ್ಯಾತಿ, ಹಣ ಬಿಟ್ಟು ಹಿಜಾಬ್ ಧರಿಸಲು ಪ್ರಾರಂಭಿಸಿದ್ದೇಕೆ ಎಂದು ಬಹಿರಂಗ ಪಡಿಸಿದ್ದರು. 'ನನ್ನ ಹಳೆಯ ಜೀವನದಲ್ಲಿ ಸಹಜವಾಗಿ ಎಲ್ಲವೂ ಇತ್ತು. ಹಣ, ಹೆಸರು, ಖ್ಯಾತಿ ಎಲ್ಲಾ ಇತ್ತು. ನಾನು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಹುದಿತ್ತು. ಆದರೆ ಒಂದು ವಿಷಯ ಮಾತ್ರ ಕಳೆದು ಹೋಗಿತ್ತು ನನ್ನ ಹೃದಯದ ಶಾಂತಿ. ನಾನು ಎಲ್ಲವನ್ನೂ ಹೊಂದಿದ್ದೆ ಆದರೆ ಸಂತೋಷ ಇರಲಿಲ್ಲ, ಅದು ತುಂಬಾ ಕಠಿಣವಾಗಿತ್ತು ಮತ್ತು ಖಿನ್ನತೆಯ ದಿನಗಳು ಇತ್ತು. ನಾನು ದೇವರ ಸಂದೇಶವನ್ನು ದಿನಗಳು ಇದ್ದವು' ಎಂದು ನಟನೆ ಬಿಟ್ಟು ಹಿಜಾಬ್​ ಧರಿಸುವ ಕುರಿತು ಹೇಳಿಕೊಂಡಿದ್ದರು.

ಇದೀಗ ಮಾಜಿ ನಟಿಯ ವಿಡಿಯೋ ಒಂದನ್ನು ನೋಡಿ ಅವರ ಅಭಿಮಾನಿಗಳು ತುಂಬಾ ನೋವು ಪಡುತ್ತಿದ್ದಾರೆ. ಆಕೆಯ ಮುಖದಲ್ಲಿ ದುಃಖ ಎದ್ದು ಕಾಣುತ್ತಿದೆ, ಯಾಕೆ ಹೀಗೆ ಮಾಡಿಕೊಂಡೆ ಎಂದು ಹಲವು ಫ್ಯಾನ್ಸ್ ಕಣ್ಣೀರಿಡುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದು ಅಂಥದ್ದೇನೂ ಇಲ್ಲ. ನಟಿ ತಮ್ಮ ಪತಿಯ ಜೊತೆ ಕಾರ್ಯಕ್ರಮವೊಂದಕ್ಕೆ ಬಂದಿದ್ದಾರೆ. ಎಷ್ಟೆಂದರೂ ಆಕೆ ಸ್ಟಾರ್​ ನಟಿಯಾದವಳು. ಸ್ವಲ್ಪ ಮುಂದೆ ಹೋಗಿದ್ದಾರೆ ಅಷ್ಟೇ, ಅರ್ಥಾತ್​ ಗಂಡನಿಗಿಂತಲೂ ಅರ್ಧ ಹೆಜ್ಜೆ ಮುಂದೆ ಹೋಗಿದ್ದಾರೆ. ಆದರೆ ಅದನ್ನು ಪತಿ ಮುಫ್ತಿ ಅನಾಸ್ ಸೈಯದ್ ಸಹಿಸಲಿಲ್ಲ. ಕೂಡಲೇ ಸಿಟ್ಟಿನಿಂದ ಅವರು ಪತ್ನಿಯನ್ನು ಹಿಂದಕ್ಕೆ ತಳ್ಳಿ ಮುಂದೆ ಹೋಗಿದ್ದಾರೆ. ಆ ಸಮಯದಲ್ಲಿ ಸನಾ ಅವರಿಗೆ ತುಂಬಾ ನೋವಾಗಿರುವುದು ಮುಖದಿಂದಲೇ ತಿಳಿಯುತ್ತದೆ. ಸಾರಿ ಎನ್ನುತ್ತಲೇ ಹಿಂದೆ ಹೋಗಿದ್ದಾರೆ. ಬಳಿಕ ಎಲ್ಲಿ ಪತ್ನಿ ಮುಂದೆ ಹೋಗುತ್ತಾಳೋ ಎಂದು ಜೋಪಾನ ಮಾಡಿರುವ ಪತಿ, ಆಕೆಯ ಕೈಯನ್ನು ಹಿಡಿದುಕೊಂಡು ಮುಂದೆ ಹೋಗದಂತೆ ತಡೆದಿದ್ದಾರೆ. ಅಷ್ಟೇ ಇರುವುದು ಈ ವಿಡಿಯೋದಲ್ಲಿ.

ಆದರೆ, ಇದರ ವಿಡಿಯೋ ಶೇರ್​ ಆಗುತ್ತಲೇ ನಟಿಯ ಬಗ್ಗೆ ಕಂಬನಿ ಮಿಡಿಯುತ್ತಿದ್ದಾರೆ. ಏನು ತಪ್ಪು ಮಾಡಿರುವಿ ಎಂದು ಈಗ ಅನ್ನಿಸ್ತಿದ್ಯಾ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಅಷ್ಟಕ್ಕೂ ನಟಿಯೇನು ಅಪರಾಧ ಮಾಡಿದ್ದಾರೆ ಎನ್ನುವ ಬಗ್ಗೆ ಯಾರೂ ಹೇಳುತ್ತಿಲ್ಲ. ಸನಾ ಕೂಡ ಮುಸ್ಲಿಂ ಆಗಿದ್ದು, ಅವರು ಮುಸ್ಲಿಂ ಅವರನ್ನೇ ಮದುವೆಯಾಗಿದ್ದಾರೆ. ಆದರೆ ಈ ವಿಡಿಯೋ ವೈರಲ್​ ಆಗುತ್ತಲೇ ನೀನು ದೊಡ್ಡ ತಪ್ಪು ಮಾಡಿರುವೆ ಎಂದೇ ಹಲವರು ಹೇಳುತ್ತಿದ್ದಾರೆ. ಆಕೆಯ ನೋವು ಸ್ಪಷ್ಟವಾಗಿ ಕಾಣಿಸುತ್ತದೆ ಎಂದಿರುವ ಹಲವರು, ನೋವನ್ನು ಮರೆಮಾಚುವ ಗುಣವನ್ನು ಇನ್ನೂ ಕಲಿಯಬೇಕಿದೆ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಆತ ಪತಿ, ಹೀಗೆ ಮಾಡಿದ್ದರಲ್ಲಿ ತಪ್ಪೇನಿದೆ ಎಂದು ಕೆಲವರು ಕಮೆಂಟ್​ ಹಾಕಿದ್ದಾರೆ.

ಅಂದಹಾಗೆ ಸನಾ, ನವೆಂಬರ್ 20, 2020 ರಂದು ಮುಫ್ತಿ ಅನಾಸ್ ಸೈಯದ್ ಅವರನ್ನು ವಿವಾಹವಾದರು. ಇವರಿಬ್ಬರ ಮೊದಲ ಭೇಟಿ 2017ರಲ್ಲಿ ಮೆಕ್ಕಾದಲ್ಲಿ ನಡೆದಿತ್ತು. ಕಳೆದ ಜೂನ್​ನಲ್ಲಿ ಮಗುವಿನ ತಾಯಿ ಆಗಿದ್ದಾರೆ. ಈಚೆಗಷ್ಟೇ ಮಗುವಿನ ದರ್ಶನ ಮಾಡಿಸಿ ಅದನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದರು. ಅಂದಹಾಗೆ, ಅನಾಸ್ ಸೈಯದ್ ಸೌಂದರ್ಯವರ್ಧಕ, ಪರ್ಸನಲ್ ಕೇರ್ ಲೈನ್ ನ ಸಂಸ್ಥಾಪರಾಗಿದ್ದಾರೆ. ತಾವು ಸಿನಿಮಾ ಬಿಡುವ ಬಗ್ಗೆ ಈ ಹಿಂದೆ ಮಾತನಾಡಿದ್ದ ಅವರು, ಒಂದು ಪುಸ್ತಕದಲ್ಲಿ ಮೆಸೇಜ್ ಇತ್ತು... you don’t want your last day to be your first day of wearing hijab ಎಂದು. ಈ ಸಲುಗಳು ನನ್ನ ಮನಸ್ಸಿ ಮುಟ್ಟಿತ್ತು. ಮರು ದಿನ ನಾನು ಎದ್ದು ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡೆ. ನಾನು ಮನೆಯಲ್ಲಿ ಬಹಳಷ್ಟು ಸ್ಕಾರ್ಫ್‌ಗಳನ್ನು ಹೊಂದಿದ್ದೆ. ಮೊದಲೇ ತಂದು ಇಟ್ಟಿದ್ದೆ. ಕ್ಯಾಪ್ ಒಳಗೆ ಧರಿಸಿ ಸ್ಕಾರ್ಫ್‌ ಧರಿಸಿ ಇನ್ನು ಮುಂದೆ ಇದನ್ನು ನಾನು ತೆಗೆಯುವುದಿಲ್ಲ ಎಂದು ತೀರ್ಮಾನ ಮಾಡಿದೆ' ಎಂದಿದ್ದರು.

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?