ಸುಶಾಂತ್ ಸಿಂಗ್ ಬಳಿಕ MS ಧೋನಿ ಚಿತ್ರದ ಮತ್ತೊರ್ವ ನಟ ಆತ್ಮಹತ್ಯೆ!

Published : Feb 15, 2021, 11:32 PM ISTUpdated : Feb 15, 2021, 11:37 PM IST
ಸುಶಾಂತ್ ಸಿಂಗ್ ಬಳಿಕ MS ಧೋನಿ ಚಿತ್ರದ ಮತ್ತೊರ್ವ ನಟ ಆತ್ಮಹತ್ಯೆ!

ಸಾರಾಂಶ

ದಿಗ್ಗಜ ಕ್ರಿಕೆಟಿಗ MS ಧೋನಿ ಜೀವನಾಧಾರಿತ, ಎಂಎಸ್.ಧೋನಿ, ದಿ ಅನ್ ಸ್ಟೋರಿ ಬಾಲಿವುಡ್ ಚಿತ್ರದಲ್ಲಿ ನಟಿಸಿದ ನಟ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಮುಂಬೈ(ಫೆ.15):  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ನೋವು ಅಭಿಮಾನಿಗಳಿಂದ ಮಾಸಿಲ್ಲ. ಇದರ ಬೆನ್ನಲ್ಲೇ ಕ್ರಿಕೆಟಿಗ ಎಂ.ಎಸ್.ಧೋನಿ ಬಯೋಪಿಕ್‌ನಲ್ಲಿ ನಟಿಸಿದ ಮತ್ತೊರ್ವ ನಟ ಸಂದೀಪ್ ನಹಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅನ್‌ಟೋಲ್ಡ್ ಸ್ಟೋರಿ ಚಿತ್ರದಲ್ಲಿ ಧೋನಿ ಪಾತ್ರದಲ್ಲಿ ಸುಶಾಂತ್ ಕಾಣಿಸಿಕೊಂಡಿದ್ದರೆ, ಸಂದೀಪ್ ನಹಾರ್, ಧೋನಿ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಸಂದೀಪ್ ನಹಾರ್ ವೈಯುಕ್ತಿ ಕಾರಣಗಳಿಂದ ಆತ್ಮಹತ್ಯೆ ನಿರ್ಧಾರ ಮಾಡಿಕೊಂಡಿದ್ದೇನೆ ಎಂದು ಡೆತ್‍‌ನೋಟ್‌ನಲ್ಲಿ ಬರೆದಿದ್ದಾರೆ.

ಸುಶಾಂತ್, ಇರ್ಫಾನ್..ರಿಷಿ..2020ರಲ್ಲಿ ಕಳೆದುಕೊಂಡ ಬಾಲಿವುಡ್ ನಕ್ಷತ್ರಗಳು

ಆತ್ಮಹತ್ಯೆಗೂ ಮುನ್ನ ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಪತ್ನಿ ಕಾಂಚನ ಶರ್ಮಾ ಜೊತೆ ಉತ್ತಮ ಸಂಬಂಧ ಹೊಂದಿಲ್ಲ. ಇತ್ತೀಚೆಗೆ ಪತ್ನಿ ಹಾಗೂ ಅತ್ತೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಜೀವನದಲ್ಲಿ ಸಾಕಷ್ಟು ನೊಂದಿದ್ದೇನೆ. ಹಲವು ಏರಿಳಿತಗಳನ್ನು ಕಂಡಿದ್ದೇನೆ. ಆತ್ಮಹತ್ಯೆ ಪರಿಹಾರವಲ್ಲ, ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಹಲವು ಭಾರಿ ನಿರ್ಧಾರ ತೆಗೆದುಕೊಂಡಿದ್ದೇನೆ. ಆದರೆ ನನಗೆ ಆತ್ಮಹತ್ಯೆ ಅಲ್ಲದೆ ಬೇರೆ ದಾರಿಗಳೇ ಕಾಣುತ್ತಿಲ್ಲ. ವೈವಾಹಿಕ ಸಂಬಂಧ ಸುಧಾರಿಸಬಹುದು ಎಂಬ ನಿರೀಕ್ಷೆಯಲ್ಲಿ ಇಷ್ಟು ದಿನ ಬದುಕಿದ್ದೆ ಎಂದು ಡೆತ್‌ನೋಟ್‌ನಲ್ಲಿ ಹೇಳಿದ್ದಾರೆ.

ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ಇನ್ನಿಲ್ಲ!.

ಎಂ.ಎಸ್.ಧೋನಿ ಚಿತ್ರ ಮಾತ್ರವಲ್ಲ, ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಸೇರಿದಂತೆ ಹಲವು ಚಿತ್ರಗಳಲ್ಲಿ ಸಂದೀಪ್ ನಹಾರ್ ನಟಿಸಿದ್ದಾರೆ. ನಹಾರ್ ಡೆತ್ ನೋಟ್ ಆಧರಿಸಿ ಮುಂಬೈ ಪೊಲೀಸರು ದೂರು ದಾಖಲಿಸಿದ್ದಾರೆ. ಇದೀಗ ತನಿಖೆ ಆರಂಭಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?