
ಮೌನಿ ರಾಯ್ ರಾಯ್ (Mouni Roy) ಖ್ಯಾತ ಕಿರುತೆರೆ ನಟಿ ಹಾಗೂ ಬಾಲಿವುಡ್ ತಾರೆ ಕೂಡ. ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮೌನಿ ಹೆಚ್ಚಾಗಿ ಫೇಮಸ್ ಆಗಿರುವುದು ಹಿಂದಿ ಧಾರಾವಾಹಿಗಳ ಮೂಲಕ. ಪಶ್ಚಿಮ ಬಂಗಾಳದ ಮೂಲದ ಮೌನಿ 2007 ರ ಹಿಂದಿ ಸೀರಿಯಲ್ `ಕ್ಯೂಂಕಿ ಸಾಸ್ ಭಿ ಕಬಿ ಬಹು ಥಿ' ಮೂಲಕ ನಟನೆ ಆರಂಭಿಸಿದವರು. ಆದರೆ ಇವರಿಗೆ ಮೊದಲ ಖ್ಯಾತಿ ಕೊಟ್ಟಿದ್ದು ದೇವೋಂಕೆ ದೇವ ಮಹಾದೇವ ಸೀರಿಯಲ್ನ ಪೌರಾಣಿಕ ಪಾತ್ರದಲ್ಲಿ. ಇದರಲ್ಲಿ ಈಕೆ ಸತಿ ಪಾತ್ರ ವಹಿಸಿದ್ದರು. ನಂತರ ನಾಗಿಣಿ ಧಾರಾವಾಹಿ ಮೂಲಕ ಮತ್ತಷ್ಟು ಖ್ಯಾತಿ ಪಡೆದರು. 2018 ರಲ್ಲಿ ತೆರೆಕಂಡ ಅಕ್ಷಯ ಕುಮಾರ್ ಅಭಿನಯದ `ಗೋಲ್ಡ್' ಚಿತ್ರದ ಮೂಲಕ ಬಾಲಿವುಡ್ಗೆ ಪದಾರ್ಪಣೆ ಮಾಡಿದರು ಮೌನಿ. ನಂತರ ಕನ್ನಡದ ಕೆಜಿಎಫ್ ಚಿತ್ರದಲ್ಲಿ ಯಶ್ ಜೊತೆ ಒಂದು ಗೀತೆಯಲ್ಲಿ ಕಾಣಿಸಿಕೊಂಡರು. 2019 ರಲ್ಲಿ ತೆರೆಕಂಡ ಜಾನ್ ಅಬ್ರಾಹಂ ನಟನೆಯ `ರಾ' ಚಿತ್ರದಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ‘ಕೆಜಿಎಫ್: ಚಾಪ್ಟರ್ 1’ ಸಿನಿಮಾದ ‘ಗಲಿ ಗಲಿ ಮೇ..’ ಹಾಡಿನಲ್ಲಿ ಯಶ್ ಜೊತೆ ಸಕತ್ ಸ್ಟೆಪ್ ಹಾಕಿದ್ದಾರೆ. ನಂತರ ಕಳೆದ ಸೆಪ್ಟೆಂಬರ್ನಲ್ಲಿ ಬಿಡುಗಡೆಗೊಂಡ 'ಬ್ರಹ್ಮಾಸ್ತ್ರ' ಚಿತ್ರದ ಜುನೂನ್ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಮೌನಿ ಚಿತ್ರದ ಮುಖ್ಯ ಕಲಾವಿದರಾದ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಗಿಂತ ಉತ್ತಮ ಪಾತ್ರ ನಿರ್ವಹಿಸಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದವು.
ಇದೀಗ ನಟಿ ಮೌನಿ, ಸಿನಿಮಾ ವಿಷಯಕ್ಕೆ ಹೊರತಾಗಿ ಸಕತ್ ಸುದ್ದಿಯಾಗುತ್ತಿದ್ದಾರೆ. ಅದೇನಪ್ಪಾ ಸುದ್ದಿ ಎಂದರೆ, ಈಕೆ ವಿಮಾನದಲ್ಲಿ ಪ್ರಯಾಣಿಸಲು ಏರ್ಪೋರ್ಟ್ಗೆ ಹೋಗಿದ್ದಾಗ ಪಾಸ್ಪೋರ್ಟ್ ಅನ್ನೇ ಮರೆತು ಹೋಗಿದ್ದಾರೆ! ಹೌದು. ಆಗಾಗ್ಗೆ ವಿದೇಶಗಳಿಗೆ ಹೋಗುತ್ತಿರುವ ನಟಿ ಮೌನಿ ರಾಯ್ ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಆದರೆ ಈ ಸಮಯದಲ್ಲಿಯೇ ಅವರು ಪಾಸ್ಪೋರ್ಟ್ ತರಲು ಮರೆತಿರುವ ವಿಷಯ ತಿಳಿದಿದೆ! ರೂಲ್ಸ್ ಎಲ್ಲರಿಗೂ ಒಂದೇ. ಅವರು ನಟಿಯಾದರೇನು, ಯಾರಾದರೇನು? ಮೌನಿ ರಾಯ್ ಅವರಿಗೆ ಅಲ್ಲಿದ್ದ ಏರ್ಪೋರ್ಟ್ ಸಿಬ್ಬಂದಿ ಒಳಗೆ ಹೋಗಲು ಅವಕಾಶ ನೀಡಲಿಲ್ಲ. ಇದರ ವಿಡಿಯೋ ಸಕತ್ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಒಳಗೆ ಹೋಗುವ ಸಮಯದಲ್ಲಿ ಮೌನಿ ರಾಯ್ ಹಾಗೂ ಅವರ ಸಹೋದ್ಯೋಗಿ ಪಾಸ್ಪೋರ್ಟ್ ಅನ್ನು ಬ್ಯಾಗ್ನಲ್ಲಿ ತಡಕಾಡುವುದನ್ನು ನೋಡಬಹುದು. ನಂತರ ಎಷ್ಟು ಹುಡುಕಾಡಿದರೂ ಪಾಸ್ಪೋರ್ಟ್ ಸಿಗಲಿಲ್ಲ. ಅಷ್ಟೊತ್ತಿಗಾಗಲೇ ಕ್ಯಾಮೆರಾ ಕಣ್ಣು ಅವರ ಮೇಲೆ ಇತ್ತು. ಹಿಂದೆ ತಿರುಗಿದ ನಟಿ ಮೌನಿ, ಆಯ್ತು ಬಿಡಿ ಎಂದರು. ಕೊನೆಗೆ ಪಾಸ್ಪೋರ್ಟ್ ಮರೆತು ಬಂದೆ ಎಂದರು.
60 ವರ್ಷದ ಆಶಿಷ್ ವಿದ್ಯಾರ್ಥಿ ಹನಿಮೂನ್ ಫೋಟೋ ವೈರಲ್: ಫ್ಯಾನ್ಸ್ ಏನ್ ಹೇಳಿದ್ರು?
ಪಾಪರಾಜಿಗಳ ಕಡೆಗೆ ಕೈ ಬೀಸಿ, ನಂತರ ಅವರು ವಿಮಾನ ನಿಲ್ದಾಣ ಪ್ರವೇಶಿಸಲು ಮುಂದಾದ ಸಮಯದಲ್ಲಿಯೇ ಈ ದುರಂತ ನಡೆದಿದೆ. ಗೇಟ್ನಲ್ಲಿ ಅಲ್ಲಿದ್ದ ವಿಮಾನ ನಿಲ್ದಾಣ ಸಿಬ್ಬಂದಿ ಪಾಸ್ಪೋರ್ಟ್ ತೋರಿಸುವಂತೆ ಹೇಳಿದ್ದಾರೆ. ಪಾಸ್ಪೋರ್ಟ್ (Passport) ತಂದಿರುವ ಸಂಪೂರ್ಣ ಕಾನ್ಫಿಡೆನ್ಸ್ನಿಂದ ನಟಿ ಮತ್ತು ಆಕೆಯ ಸಹೊದ್ಯೋಗಿ ಬ್ಯಾಗ್ ಪೂರ್ತಿ ಹುಡುಕಾಡಿದ್ದಾರೆ. ಆದರೆ ಅವರಿಗೆ ಅದು ಸಿಗಲಿಲ್ಲ. ವಿಡಿಯೋದಲ್ಲಿ ಇಷ್ಟು ತೋರಿಸಲಾಗಿದೆ. ಆದರೆ ಕೊನೆಗೆ ಅವರಿಗೆ ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರ್ಬಂಧಿಸಲಾಗಿದ್ದು, ಮೌನಿ ರಾಯ್ ವಾಪಸ್ ಮನೆಗೆ ಹೋಗಿರುವುದಾಗಿ ವರದಿಯಾಗಿದೆ. ಸೆಲೆಬ್ರಿಟಿಗಳು ಎಲ್ಲಿಯೇ ಹೋದರೂ ಅವರ ಹಿಂದೆ ಪಾಪರಾಜಿಗಳು ಕ್ಯಾಮೆರಾ ಹಿಡಿದು ಸಿದ್ಧರಾಗಿದ್ದರೂ, ಪಾಪ ಇಲ್ಲಿ ಮೌನಿ ರಾಯ್ ಅವರೇ ಕ್ಯಾಮೆರಾಗಳನ್ನು ಕರೆದುಕೊಂಡು ಹೋಗಿ ಸಿಕ್ಕಿಹಾಕಿಕೊಂಡರು ಎಂದು ಟ್ರೋಲ್ ಮಾಡುತ್ತಿದ್ದಾರೆ.
ಇನ್ನು ಕೆಲವರು ವಿಮಾನ ನಿಲ್ದಾಣಕ್ಕೆ ಹೋಗುವಾಗ ಪಾಸ್ಪೋರ್ಟ್ ಮರೆತರೆ ವ್ಹಾರೆವ್ಹಾ ಎಂದಿದ್ದರೆ, ಮೇಕಪ್ ಮಾತ್ರ ಮರೆಯಲ್ಲ ಅಲ್ವಾ? ಎಂದು ಕೆಲವರು ಕಾಲೆಳೆದಿದ್ದಾರೆ. ಮೌನಿ ರಾಯ್ ಗೌನ್ ಧರಿಸಿ ಬಂದಿದ್ದಕ್ಕೆ ಟ್ರೋಲ್ಮಾಡಿರುವ ನೆಟ್ಟಿಗನೊಬ್ಬ ಪಾಪ ಗಡಿಬಿಡಿಯಲ್ಲಿ ನೈಟ್ಸೂಟ್ (Night suit) ಹಾಕಿ ಬಂದಿದ್ದಾರೆ, ಪಾಸ್ಪೋರ್ಟ್ ತರಲು ಮರೆತಿರಬೇಕು ಎಂದಿದ್ದಾರೆ. ಈಕೆಯ ಕೆಲ ಫ್ಯಾನ್ಸ್ ಮಾತ್ರ ಡಿಜಿಟಲ್ ಯುಗವಿದು. ಪಾಸ್ಪೋರ್ಟ್ ಮೊಬೈಲ್ನಲ್ಲಿ ಇದ್ದರೆ ತೋರಿಸಬಹುದಿತ್ತಲ್ಲ ಎಂದು ಪ್ರಶ್ನಿಸಿದ್ದಾರೆ.
ಈ ವಯಸ್ಸಲ್ಲಿ ಒಂಟಿಯಾಗಿ ಬಿಟ್ಟರಾ ಹೇಮಾ ಮಾಲಿನಿ? ಧರ್ಮೇಂದ್ರ ಜೊತೆ ಮುನಿಸಿಗೆ ಕಾರಣವೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.