
ಕೋಲ್ಕತಾ(ಜ.23) ದಿನ್‌ಹಟಾ ಹಬ್ಬದಲ್ಲಿ ಸಿಂಗೀತ ರಸೆ ಸಂಜೆ ಕಾರ್ಯಕ್ರಮ ನೀಡುತ್ತಿದ್ದ ಗಾಯಕಿ ಮೊನಾಲಿ ಠಾಕೂರ್ ಉಸಿರಾಟ ಸಮಸ್ಯೆಯಿಂದ ತುರ್ತು ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮ್ಮ ಜನಪ್ರಿಯ ಹಾಡುಗಳಾದ ಸಾವರ್ ಲೂನ್, ಮೊಹ್ ಮೊಹ್‌ಗೆ ದಾಗೆ ಹಾಡುಗಳನ್ನು ಹಾಡುತ್ತಿದ್ದ ವೇಳೆ ಮೊನಾಲಿ ಠಾಕೂರ್ ತೀವ್ರ ಉಸಿರಾಟದ ಸಮಸ್ಯೆ ಎದುರಿಸಿದ್ದಾರೆ. ಮೊನಾಲಿ ಠಾಕೂರ್ ಅಸ್ವಸ್ಥರಾಗುತ್ತಿದ್ದಂತೆ ಕಾರ್ಯಕ್ರಮ ಆಯೋಜಕರು ನೆರವಿಗೆ ಧಾವಿಸಿದ್ದಾರೆ. ಮೊನಾಲಿ ಠಾಕೂರ್ ಅರ್ಧಕ್ಕೆ ಗಾಯನ ನಿಲ್ಲಿಸಿದ್ದಾರೆ. ಪರಿಸ್ಥಿತಿ ಸುಧಾರಿಸಿದ ಕಾರಣ ತಕ್ಷಣವೇ ಮೊನಾಲಿ ಠಾಕೂರ್‌ನ್ನು ಪಶ್ಛಿಮ ಬಂಗಾಳದ ದಿನಹಟಾ ಜಿಲ್ಲಾ ಆಸ್ಪತ್ರೆ ದಾಖಲಿಸಲಾಗಿತ್ತು. ಬಳಿಕ ಕೂಚ್ ಬೆಹಾರ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಿನ್‌ಹಟಾ ಫೆಸ್ಟಿವಲ್ ಪ್ರಯುಕ್ತ ಹಲವು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಪೈಕಿ ಖ್ಯಾತ ಗಾಯಕಿ ಮೊನಾಲಿ ಠಾಕೂರ್ ಮ್ಯೂಸಿಕ್ ಕಾನ್ಸರ್ಟ್ ಕೂಡ ಆಯೋಜಿಸಲಾಗಿತ್ತು. ಮೊನಾಲಿ ಠಾಕೂರ್ ಮ್ಯೂಸಿಕ್ ಕಾನ್ಸರ್ಟ್ ಆರಂಭವಾಗುತ್ತಿದ್ದಂತೆ ಅಭಿಮಾನಿಗಳು ಕ್ಕಿಕ್ಕಿರಿದು ಸೇರಿದ್ದರು.ಇತ್ತ ಜನಪ್ರಿಯ ಹಾಡುಗಳನ್ನು ಹಾಡುತ್ತಾ ಜನರನ್ನು ರಂಜಿಸಿದ್ದರು. ಆದರೆ ಏಕಾಏಕಿ ಮೊನಾಲಿ ಠಾಕೂರ್ ಅಸ್ವಸ್ಥರಾಗಿದ್ದಾರೆ.
1 ವರ್ಷ ಹಾಡಲು ಮಾತನಾಡಲು ಆಗುತ್ತಿರಲಿಲ್ಲ; ಗಾಯಕಿ ಅರ್ಚನಾ ಹಂಚಿಕೊಂಡ ಕಣ್ಣೀರಿನ ಕಥೆ
ಲೈವ್ ಫರ್ಫಾಮೆನ್ಸ್ ವೇಳೆ ಉಸಿರಾಟ ಸಮಸ್ಯೆ ಎದುರಿಸಿದ ಮೊನಾಲಿ ಠಾಕೂರ್, ಅರ್ಧಕ್ಕೆ ಹಾಡುಗಳನ್ನು ನಿಲ್ಲಿಸಿದ್ದಾರೆ. ಈ ವೇಳೆ ಕಾಯ್ರಕ್ರಮ ಆಯೋಜಕರು ನೆರವಿಗೆ ಧಾವಿಸಿದ್ದಾರೆ. ಉಸಿರಾಟ ಸಮಸ್ಯೆ ತೀವ್ರಗೊಳ್ಳುತ್ತಿದ್ದಂತೆ ಸ್ಥಳದಲ್ಲೇ ನಿಯೋಜಿಸಲಾಗಿದ್ದ ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ದಿನ್‌ಹಟಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭಿಕ ಚಿಕಿತ್ಸೆ ಬಳಿಕ ಕೂಚ್ ಬೆಹಾರ್‌ನ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ. ಸದ್ಯ ಮೊನಾಲಿ ಠಾಕೂರ್ ಆರೋಗ್ಯ ಸ್ಥಿರವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಕೆಲ ವಾರಗಳ ಹಿಂದೆ ಮೊನಾಲಿ ಠಾಕೂರ್ ವಾರಣಾಸಿಯಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು. ಸರಿಯಾಗಿ ಕಾರ್ಯಕ್ರಮ ಆಯೋಜಿಲ್ಲ, ನಿರ್ವಹಣೆ ಸರಿಯಾಗಿಲ್ಲ ಅನ್ನೋ ಕಾರಣ ಕಾರ್ಯಕ್ರಮ ಅರ್ಧಕ್ಕೆ ಸ್ಥಗಿತಗೊಳಿಸಿದ್ದರು. ಕಾರ್ಯಕ್ರಮ ಆಯೋಜಕರ ವಿರುದ್ದ ಗಂಭೀರ ಆರೋಪ ಮಾಡಿದ್ದರು. ಬಳಿಕ ಘಟನೆ ಕುರಿತು ಮಾತನಾಡಿದ್ದರು. ವಾರಣಾಸಿ ಸಂಗೀತ ಕಾರ್ಯಕ್ರಮದಲ್ಲಿ ಯಾವುದು ಸರಿ ಇರಲಿಲ್ಲ. ವೇದಿಕೆ ಸರಿಯಾಗಿರಲಿಲ್ಲ, ಇದರಿದಂ ತಂಡದ ಡ್ಯಾನ್ಸರ್ ಪ್ರಯಾಸಪಟ್ಟರು. ಈ ವೇದಿಕೆಯಲ್ಲಿ ಪ್ರದರ್ಶನ ನೀಡಿದರೆ ನನ್ನ ಕಾಲಿಗೆ ಗಾಯವಾಗುವ ಸಾಧ್ಯತೆ ಇತ್ತು ಎಂದಿದ್ದರು.
ಮೊನಾಲಿ ಠಾಕೂರ್ ವಾರಣಾಸಿ ಶೋ ಅರ್ಧಕ್ಕೆ ಸ್ಥಗಿತಗೊಂಡ ಪ್ರಕರಣ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು. ಈ ಕುರಿತು ಪರ ವಿರೋಧಗಳು ವ್ಯಕ್ತವಾಗಿತ್ತು. ಮೊನಾಲಿ ಠಾಕೂರ್ ಹಾಗೂ ಅವರ ತಂಡದ ಸಿಬ್ಬಂದಿಗಳು ಕಾರ್ಯಕ್ರಮ ಆಯೋಜನೆ ಕುರಿತು ಪ್ರಶ್ನಿಸಿದ್ದರೆ, ಮತ್ತೆ ಕೆಲವರು ಮೊನಾಲಿ ಠಾಕೂರ್ ಅಹಂಕಾರದಿಂದ ಶೋ ಸ್ಥಗಿತಗೊಳಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು.
ಚಂದನ್ ಶೆಟ್ಟಿ ಮೇಲೆ ಟ್ಯೂನ್ ಕದ್ದ ಆರೋಪ, 'ಕಾಟನ್ ಕ್ಯಾಂಡಿ' ಪಾರ್ಟಿ ಸಾಂಗ್ ಇನ್ ಟ್ರಬಲ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.