
ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಗಾಯಕನಾಗಿ ಮಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ಪೃಥ್ವಿರಾಜ್ ಸುಕುಮಾರನ್ ತಮ್ಮ ಮುಂದಿನ ಸಿನಿಮಾ 'ಆಡುಜೀವಿತಂ' ಚಿತ್ರೀಕರಣಕ್ಕೆಂದು ಜೋರ್ಡಾನ್‌ಗೆ 57 ಜನರೊಂದಿಗೆ ತೆರಳಿದ್ದಾರೆ. ಇದೀಗ ಬರಲಾಗದೇ ಸಹಾಯ ಕೋರಿ ಸರಕಾರವನ್ನು ಆಗ್ರಹಿಸಿದ್ದಾರೆ.
ಆಸ್ಪತ್ರೆ ಸೇರಲು ಪ್ರಭಾಸ್ ರೆಡಿ; ಕಾರಣ ತಿಳಿಯದೇ ಚಿತ್ರರಂಗ ಕಂಗಾಲು?
ಕೊರೋನಾ ವೈರಸ್ ಎಲ್ಲೆಡೆ ಹಬ್ಬಿರುವ ಕಾರಣ ಚಿತ್ರೀಕರಣಕ್ಕೆ ಜೋರ್ಡಾನ್ ಸರ್ಕಾರ ಅನುಮತಿ ನೀಡಿಲ್ಲ. ಅತ್ತ ಚಿತ್ರೀಕರಣವೂ ನಡೆಯದೇ ಭಾರತಕ್ಕೂ ಹಿಂದಿರುಗದೇ ಸಿಲುಕಿಕೊಂಡಿರುವ ಚಿತ್ರ ತಂಡವನ್ನು ರಕ್ಷಿಸಬೇಕೆಂದು ಪೃಥ್ವಿರಾಜ್ ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪೃಥ್ವಿ ಜೊತೆ ಅನೇಕ ಹಿರಿಯ ಕಲಾವಿದರೂ, ಜೋರ್ಡಾನ್‌ನ ವಾದಿ ರಮ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಪೃಥ್ವಿ ತಂಡದಲ್ಲಿದ್ದ ಒಮನ್ ಮೂಲದ ನಾಯಕ ಹಾಗೂ ಸಹಾಯಕರನ್ನೂ ಇದೀಗ ಕ್ವಾರಂಟೈನ್‌ಗೆ ಒಳಪಡಿಸಿಕೊಳ್ಳಲಾಗಿದೆ.
ಕೊರೋನಾ ವೈರಸ್ ನುಂಗೇ ಬಿಡ್ತು 'Star Wars'ನಟನ ಜೀವವನ್ನ!
ಪೃಥ್ವಿ ಹಾಗೂ ತಂಡದವರಿಗೆ ವಸತಿ ಹಾಗೂ ಆಹಾರ ವ್ಯವಸ್ಥೆಯನ್ನು ಜೋರ್ಡಿಯಾ ಅಧಿಕಾರಿಗಳು ಒದಗಿಸಿದ್ದಾರೆ. ಪ್ರತಿ 72 ಗಂಟೆಗೆ ತಂಡದ ಪ್ರತಿಯೊಬ್ಬರ ಆರೋಗ್ಯ ತಪಾಸಣೆಗೆ ವೈದ್ಯರನ್ನು ನಿಯೋಜಿಸಿದ್ದಾರಂತೆ. ಅದರಾಚೆಗೂ ಏನಾಗಬಹುದು ಎಂದು ಹೇಳಲಾಗದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.