
ಮಲಯಾಳಂ ಬೆಳ್ಳಿ ತೆರೆ ಹಾಗೂ ಕಿರುತೆರೆಯ ಹೆಸರಾಂತ ನಾಯಕಿ ಅಂಬಿಕಾ ರಾವ್ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಈ ನಟಿಯ ಕರೆಗೆ ಗಣ್ಯರು ಸ್ಪಂದಿಸಬೇಕಾಗಿದೆ..
'ವೈರಸ್', 'ಕುಂಬಲಂಗಿ', 'ನೈಟ್ಸ್' ಸಾಲ್ಟ್ ಆ್ಯಂಡ್ ಪೆಪ್ಪರ್' ಹಾಗೂ ಇನ್ನೂ ಹಲವು ಸಿನಿಮಾಗಳಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದುಕೊಂಡ ನಟಿ ಅಂಬಿಕಾ ರಾವ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ಮಾಡಿಸಬೇಕಿದ್ದು, ಹೆಚ್ಚಿನ ಹಣ ಖರ್ಚಾಗುವ ಕಾರಣಕ್ಕೆ ಆರ್ಥಿಕ ಸಹಾಯ ಮಾಡಬೇಕೆಂದು ಮಾಧ್ಯಮದ ಮೂಲಕ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.
ಎರಡು ವರ್ಷಗಳಿಂದ ಅನಾರೋಗ್ಯಕ್ಕೀಡಾಗಿರುವ ಅಂಬಿಕಾರನ್ನು ಸಹೋದರ ನೋಡಿ ಕೊಳ್ಳುತ್ತಿದ್ದರು. ಅದರೆ ಸಹೋದರನಿಗೂ ಕೆಲವು ದಿನಗಳ ಹಿಂದೆ ಪಾರ್ಶ್ಚವಾಯು ಆಗಿ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಂಬಿಕಾ ಅವರ ಸದ್ಯದ ನೆರವಿಗೆ ಕೇರಳ ಸಿನಿಮಾ ಸಂಘವೊಂದು ಮುಂದೆ ಬಂದಿದೆ. ಆದರೆ ಅದು ಬಹಳ ಕಡಿಮೆಯಾದ ಕಾರಣ ಇನ್ನಿತರೆ ಕಲಾ ಬಂಧುಗಳಲ್ಲಿ ಸಹಾಯ ಬೇಡುತ್ತಿದ್ದಾರೆ.
iPhone ಶೋಕಿಗಾಗಿ ಕಿಡ್ನಿಯನ್ನೇ ಮಾರಿದ ಬಾಲಕ: ಜೀವಕ್ಕೆ ಕುತ್ತು!
ಸಾಮಾಜಿಕ ಜಾಲತಾಣಗಳ ಮೂಲಕ ಅಂಬಿಕಾರನ್ನು ಸಂಪರ್ಕಿಸಿದ ಅಭಿಮಾನಿಗಳಿಗೆ ಹಾಗೂ ಕೆಲವು ಆಪ್ತರಿಗೆ ಬ್ಯಾಂಕ್ ಖಾತೆಯ ಮಾಹಿತಿಯನ್ನು ಈಗಾಗಲೇ ನೀಡಲಾಗಿದೆ. ಬಹಿರಂಗವಾಗಿಯೂ ಅವರು ಬ್ಯಾಂಕ್ ಖಾತೆಯ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಸಹಾಯ ಮಾಡಲು ಇಚ್ಛಿಸುವವರಿಗೆ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.