ಗರ್ಭಪಾತವಾಗಿ ಮೂರನೇ ಮಗು ಉಳಿಸಿಕೊಳ್ಳಲಾಗಲಿಲ್ಲ: ನಟಿ ಭಾವುಕ ಪೋಸ್ಟ್

Suvarna News   | Asianet News
Published : Oct 01, 2020, 04:16 PM IST
ಗರ್ಭಪಾತವಾಗಿ ಮೂರನೇ ಮಗು ಉಳಿಸಿಕೊಳ್ಳಲಾಗಲಿಲ್ಲ: ನಟಿ ಭಾವುಕ ಪೋಸ್ಟ್

ಸಾರಾಂಶ

ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದ ಮಾಡೆಲ್ ಕ್ರಿಸ್ಸಿ ಟೀಜೆನ್ ಇನ್‌ಸ್ಟಾಗ್ರಾಂನಲ್ಲಿ ಭಾವುಕ ಸಾಲುಗಳನ್ನು ಬರೆದುಕೊಂಡಿದ್ದಾರೆ.  

ಮಾಡೆಲ್ ಹಾಗೂ ಗಾಯಕಿಯಾಗಿರುವ ಕ್ರಿಸ್ಸಿ ಟೀಜೆನ್ ಕೆಲವು ದಿನಗಳ ಹಿಂದೆ ಎದುರಿಸಿದ ಗರ್ಭಪಾತದ ಬಗ್ಗೆ ಭಾವುಕರಾಗಿ ಕೆಲವು ಸಾಲುಗಳನ್ನು ಬರೆದುಕೊಂಡಿದ್ದಾರೆ.  ಪತಿ ಜಾನ್‌ ಲೆಜೆಂಟ್‌ ಹಾಗೂ ಇಬ್ಬರು ಮಕ್ಕಳು ತನ್ನೊಟ್ಟಿಗೆ  ಈ ಸಂದರ್ಭ ಎದುರಿಸಿದ ರೀತಿಯನ್ನು ವಿವರಿಸಿದ್ದಾರೆ.

ಕ್ರಿಸ್ಸಿ ಪೋಸ್ಟ್:
'ಎಂದೂ ಊಹಿಸದ ಆಘಾತಕ್ಕೊಳಗಾಗಿದ್ದೇವೆ. ಹೇಳಿಕೊಳ್ಳಲಾಗದ ಈ ನೋವನ್ನು ನಾವು ಎಂದೂ ಅನುಭವಿಸಿರಲಿಲ್ಲ. ರಾಶಿ ರಕ್ತ ಸ್ರಾವವಾಗುತ್ತಿತ್ತು. ಅದನ್ನು ನಿಲ್ಲಿಸಿ, ನಮ್ಮ ಮಗುವಿನಗೆ ಬೇಕಾದ ಲಿಕ್ವಿಡ್ ನೀಡಲು ಆಗುತ್ತಿರಲಿಲ್ಲ. ನನ್ನ ಇಬ್ಬರು ಮಕ್ಕಳು ಹುಟ್ಟುವವರೆಗೂ ನಾನು ಹೆಸರು ಹುಡುಕಿರಲಿಲ್ಲ. ಆದರೆ ಅದ್ಯಾವ ಕಾರಣಕ್ಕೋ ಈ ಕಂದಮ್ಮ ಹೊಟ್ಟೆಯಲ್ಲಿದ್ದಾಗಲೇ ನಾವು ಜಾಕ್‌ ಎಂದು ಕರೆಯಲು ಆರಂಭಿಸಿದ್ದೆವು. ನಮ್ಮ ಜೊತೆಗಿರಬೇಕೆಂದು ಜಾಕ್‌ ತುಂಬಾನೇ ಕಷ್ಟ ಪಟ್ಟಿದ್ದಾನೆ. ಆದರೆ ನಾವು ಉಳಿಸಿಕೊಳ್ಳಲು ಆಗಲಿಲ್ಲ,' ಎಂದು ಕಳೆದುಕೊಂಡು ಮಗುವಿನ ಬಗ್ಗೆ ನೋವಿನಿಂದ ಬರೆದುಕೊಂಡಿದ್ದಾರೆ.

ಕಾಜೋಲ್‌ - ಶಿಲ್ಪಾ ಗರ್ಭಪಾತದ ನೋವು ಅನುಭವಿಸಿದ ನಟಿಯರು 

ಪುತ್ರನಿಗೆ ಭಾವುಕ ಸಂದೇಶ:
ನೋವಿನಲ್ಲಿರುವ ಕ್ರಿಸ್ಸಿ ಟೀಜೆನ್ ಪುತ್ರನಿಗೆ ಪತ್ರ ಬರೆದಿದ್ದಾರೆ. 'ಸಾರಿ ಮಗನೇ ನಿನ್ನನ್ನು ಈ ಪ್ರಪಂಚಕ್ಕೆ ಪರಿಚಯ ಮಾಡಲು ನಾವು ವಿಫಲರಾದೆವು. ಎಷ್ಟೆಲ್ಲ ಕಷ್ಟಗಳನ್ನು ಎದುರಿಸಬೇಕಾಯ್ತು. ನೀನು ಇಲ್ಲವಾದರೂ ನಿನ್ನನ್ನು ನಾವು ಸದಾ ಸ್ಮರಿಸುತ್ತೇವೆ. ನಾವು ಪ್ರೀತಿಸುತ್ತೇವೆ,' ಎಂದು ಹೇಳಿ ಕೊಂಡಿದ್ದಾರೆ.

'ಈ ಸಮಯದಲ್ಲಿ ನಮ್ಮ ಜೊತೆಗಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನಿಮ್ಮ ಪಾಸಿಟಿವ್ ಮೆಸೇಜ್‌ಗಳಿಂದ ನಾನು ಧೈರ್ಯವಾಗಿದ್ದೀವಿ. ಲೂನಾ ಹಾಗೂ ಮೈಲ್ಸ್‌ ನನ್ನ ಪ್ರೆಗ್ನೆನ್ಸಿ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ. ಈಗ ಅವರಿಗೆ ಉತ್ತರಿಸಲು ಕಷ್ಟವಾಗುತ್ತಿದೆ,' ಎಂದು ಬರೆದು ಫೋಸ್ಟ್ ಮಾಡಿದ್ದಾರೆ.

 

ಹೃದಯದ ಬಡಿತ ಕೇಳಲಿಲ್ಲ:
ಕೆಲವು ದಿನಗಳ ಹಿಂದೆ ಕ್ರಿಸ್ಸಿ ಟೀಜೆನ್ ಮಗುವಿನ ಹೃದಯ ಬಡಿತ ಕೇಳಿಸದ ಕಾರಣ ಗಾಬರಿಗೊಂಡಿದ್ದರು. 'ಬೆಳಗ್ಗೆ ಎದ್ದು ಮಗುವಿನ ಹೃದಯ ಬಡಿತ ಕೇಳದೇ ಇದ್ದ ಕಾರಣ ನಾವೆಲ್ಲರೂ ಗಾಬರಿಗೊಂಡೆವು.  ದೇವರ ದಯೆ ಕೆಲವು ನಿಮಿಷಗಳ ನಂತರ ನನಗೆ ಬಡಿತ ಕೇಳಿಸಲು ಆರಂಭಿಸಿತ್ತು. ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಲೂನಾ ಹಾಗೂ ಮೈಲ್ಸ್‌ಗಿಂತ ಬೇಗ ಬೆಳವಣಿಗೆ ಕಾಣಿಸುತ್ತಿದೆ.  ಹೊಟ್ಟೆಯಲ್ಲಿ ತುಂಬಾ ಒದ್ದಾಡುತ್ತಿದ್ದಾನೆ,' ಎಂದು ಕೆಲವು ದಿನಗಳ ಹಿಂದೆ ಪೋಸ್ಟ್‌ವೊಂದನ್ನು ಶೇರ್ ಮಾಡಿಕೊಂಡಿದ್ದರು ಈ ನಟಿ. 

ಅನೇಕ ಸಿನಿಮಾ ಗಣ್ಯರು ಕಾಮೆಂಟ್ ಮಾಡುವ ಮೂಲಕ ಕ್ರಿಸ್ಸಿ ಟೀಜೆನ್‌ಗೆ ಧೈರ್ಯ ತುಂಬಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?