ಈ ಹಾಟೆಸ್ಟ್‌ನಿಂದ ತುಂಬಿರೋ ಈ ಫೋಟೋ ಕ್ಲಿಕ್ಕಿಸಿದ್ಯಾರು ಅಂತೆತೆಲ್ಲಾ ಬರೆದು ಫೈರ್ ಮತ್ತು ಹಾರ್ಟ್ ಸಿಂಬಲ್ ಹಾಕಿದ್ದಾರೆ. ಕೆಲ ಅಭಿಮಾನಿಗಳು ಪ್ಯಾಂಕ್ ಹುಕ್ ಹಾಕೋದು ಮರೆತಂತೆ ಕಾಣಿಸುತ್ತಿದೆ ಎಂದು ಸಹ ಹೇಳಿದ್ದಾರೆ.
ಮುಂಬೈ: ಸಿನಿಮಾ ಕಲಾವಿದರು (Cinema Actors) ಅಪಾರ ಅಭಿಮಾನಿಗಳನ್ನು ಹೊಂದಿರುತ್ತಾರೆ. ನಟಿಯರಿಗೆ ಮೇಲ್ಸ್ ಮತ್ತು ನಟರಿಗೆ ಹೆಚ್ಚರು ಫಿಮೇಲ್ಸ್ ಫ್ಯಾನ್ಸ್ ಇರುತ್ತಾರೆ. ನಟಿಯರ ಹಾಟ್ ಫೋಟೋಗಳಿಗೆ ಎಷ್ಟೋ ಕಮೆಂಟ್ ಬರುತ್ತೋ, ಅದರಷ್ಟೇ ನಟ ಶರ್ಟ್‌ಲೆಟ್ ಫೋಟೋಗಳಿಗೆ ಕಮೆಂಟ್ ಬರುತ್ತಿರುತ್ತವೆ. ನಟರ ಶರ್ಟ್‌ಲೆಸ್ ಫೋಟೋ, ವಿಡಿಯೋಗಳು ಮಹಿಳೆಯರ ನಿದ್ದೆ ಕೆಡಿಸುತ್ತವೆ. ಇದೀಗ ನಟ ಕಾರ್ತಿಕ್ ಆರ್ಯನ್ (Bollywood Actor Kartik Aaryan) ಹೊಸ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಫೈರ್ ಮತ್ತು ಹಾರ್ಟ್ ಎಮೋಜಿಗಳ ಸುರಿಮಳೆಯಾಗುತ್ತಿದೆ.
ಜೂನ್ 29ರಂದು ಶರ್ಟ್ ಧರಿಸದೇ ಬಾಲ್ಕನಿಯಲ್ಲಿ ನಿಂತಿರುವ ಕಾರ್ತಿಕ್ ಆರ್ಯನ್ Don’t call me sugar, don’t touch the fire ಎಂಬ ಸಾಲು ಬರೆದುಕೊಂಡಿದ್ದಾರೆ. ಆದ್ರೆ ಫೋಟೋದಲ್ಲಿ ಪ್ಯಾಂಟ್‌ಗೆ ಹುಕ್ ಆಗದೇ ಪೋಸ್ ನೀಡಿದ್ದಾರೆ. ಇದೇ ವಿಷಯ ಬಿಟೌನ್ ಅಂಗಳದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಫೋಟೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷ ಲಕ್ಷ ಕಮೆಂಟ್‌ಗಳ ಮೂಲಕ ಅಭಿಮಾನಿಗಳು ಅಕ್ಷರ ಹಾಗೂ ಎಮೋಜಿ ರೂಪದಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ರಾಮೇಶ್ವರಂ ಕೆಫೆಯ ಮಸಾಲೆ ದೋಸೆ ಸವಿದು ಫುಡ್ ಬ್ಲಾಗರ್ ಆಗ್ಲಾ ಕೇಳಿದ ಬಾಲಿವುಡ್ ನಟ ಕಾರ್ತಿಕ್ ಆರ್ಯನ್
ಅಭಿಮಾನಿಗಳಿಂದ ಭರಪೂರ ಕಮೆಂಟ್‌ಗಳು
ಪರ್ಫೆಕ್ಟ್ ದೇಹ ಹೊಂದಿರುವ ನಟರ ಸಾಲಿನಲ್ಲಿ ನೀವು ಇರುತ್ತಿರಿ. ಕಠಿಣ ಪರಿಶ್ರಮದಿಂದ ಮಾತ್ರ ಈ ರೀತಿ ದೇಹ ಹುರಿಗೊಳಿಸಲು ಸಾಧ್ಯ ಎಂಬ ಕಮೆಂಟ್ ಮಾಡಲಾಗಿದೆ. ಇದು ತುಂಬಾ ಹಾಟ್ ಆಗಿರೋ ಫೋಟೋ ಅಂದ್ರೆ ಕೆಲವರು ದೆಹಲಿಯಲ್ಲಿ ತಾಪಮಾನ ಹೆಚ್ಚಾಗಿದ್ದ ಸಂದರ್ಭದಲ್ಲಿ ಕ್ಲಿಕ್ ಮಾಡಿರುವ ಫೋಟೋ ಇದಾಗಿದೆ ಎಂದಿದ್ದಾರೆ. ಇನ್ನು ಮಹಿಳಾ ಅಭಿಮಾನಿಗಳು, ನೀವು ನಮ್ಮ ಮೆಚ್ಚಿನ ನಟ, ಡ್ರೀಮ್ ಬಾಯ್. ಈ ಹಾಟೆಸ್ಟ್‌ನಿಂದ ತುಂಬಿರೋ ಈ ಫೋಟೋ ಕ್ಲಿಕ್ಕಿಸಿದ್ಯಾರು ಅಂತೆತೆಲ್ಲಾ ಬರೆದು ಫೈರ್ ಮತ್ತು ಹಾರ್ಟ್ ಸಿಂಬಲ್ ಹಾಕಿದ್ದಾರೆ. ಕೆಲ ಅಭಿಮಾನಿಗಳು ಪ್ಯಾಂಕ್ ಹುಕ್ ಹಾಕೋದು ಮರೆತಂತೆ ಕಾಣಿಸುತ್ತಿದೆ ಎಂದು ಸಹ ಹೇಳಿದ್ದಾರೆ.
ಬಾಲಿವುಡ್ ಅಂಗಳದ ಭರವಸೆಯ ನಟ
ಯುವ ನಟರಾಗಿರುವ ಕಾರ್ತಿಕ್ ಆರ್ಯನ್ ತಮ್ಮ ಮೋನೋ ಡೈಲಾಗ್‌ನಿಂದಲೇ ಫೇಮಸ್ ಆಗಿದ್ದರು. ಪ್ಯಾರ್ ಕಾ ಪಂಚ್‌ನಾಮಾ 2, ಸೋನು ಕೆ ಟಿಟು ಕಿ ಸ್ವೀಟಿ, ಲುಕಾ ಚುಪ್ಪಿ, ಪತಿ ಪತ್ನಿ ಔಟ್ ವೋ ಸಿನಿಮಾಗಳ ಮೂಲಕ ಭರವಸೆ ನಟನಾಗಿ ಕಾರ್ತಿಕ್ ಆರ್ಯನ್ ಗುರುತಿಸಿಕೊಂಡರು. ಹಾಸ್ಯ ಪ್ರಧಾನ ಚಿತ್ರಗಳ ಮೂಲಕವೇ ಅಭಿಮಾನಿಗಳನ್ನು ರಂಜಿಸುತ್ತಾ ಬಂದ ಕಾರ್ತಿಕ್ ಆರ್ಯನ್‌ಗೆ ಭೂಲ್ ಬುಲೈಯ್ಯಾ ದೊಡ್ಡ ಹಿಟ್ ನೀಡಿದ ಚಿತ್ರ. ಇದಾದ ಬಳಿಕ ಧಮಾಕಾ, ಫ್ರೆಡ್ಡಿ, ಸತ್ಯ ಪ್ರೇಮ್ ಕಿ ಕಥಾ ಸಹ ಬಾಕ್ಸ್ ಆಫಿಸ್‌ನಲ್ಲಿ ಸದ್ದು ಮಾಡಿವೆ. ಇತ್ತೀಚೆಗೆ ಮುರಳಿಕಾಂತ್ ಪೇಟ್ಕರ್ ಜೀವನಾಧರಿತ ಚಂದು ಚಾಂಪಿಯನ್ ಬಿಡುಗಡೆಯಾಗಿದ್ದು, ಕಾರ್ತಿಕ್ ಆರ್ಯನ್ ನಟನೆಗೆ ವಿಮರ್ಶಕರ್ ಭೇಷ್ ಎಂದಿದ್ದಾರೆ.
ಇಲಿಯಿಂದ ಕಾರ್ತಿಕ್ ಆರ್ಯನ್‌ಗೆ ಲಕ್ಷ ರೂ ನಷ್ಟ, ಗ್ಯಾರೇಜ್ ಸೇರಿದ 4.7 ಕೋಟಿ ರೂ ಮೆಕ್ಲರೆನ್ ಕಾರು!