
ಭೋಜಪುರಿ ನಟಿ ತ್ರಿಷಾಕರ್ ಮಧು ಕಳೆದ ವರ್ಷ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. 2021 ಆಗಸ್ಟ್ ನಲ್ಲಿ ಅವರ ಎಂಎಂಎಸ್ ವಿಡಿಯೋ ವೈರಲ್ ಆಗಿತ್ತು. ಈ ವಿವಾದದ ಬಳಿಕ ನಟಿ ತ್ರಿಷಾಕರ್ ಸಿಕ್ಕಾಪಟ್ಟೆ ಫೇಮಸ್ ಆದರು. ತ್ರಿಷಾ ಯಾರೆಂದು ಎಲ್ಲರಿಗೂ ಪರಿಚಿತರಾದರು. ಖಾಸಗಿ ಎಂಎಂಎಸ್ ವಿಡಿಯೋ ವೈರಲ್ ಆದ ಬಳಿಕವೂ ತ್ರಿಷಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರೀಯರಾಗಿದ್ದಾರೆ. ಅದರಲ್ಲೂ ಇನ್ಸ್ಟಾಗ್ರಾಮ್ ನಲ್ಲಿ ತ್ರಿಷಾ ಸಖತ್ ಆಕ್ಟೀವ್ ಆಗಿದ್ದಾರೆ. ರೀಲ್ಸ್ ಗಳನ್ನು ಮಾಡಿ ಶೇರ್ ಮಾಡುವ ತ್ರಿಷಾ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಇದೀಗ ಗಂಗೂಬಾಯಿ ಕಠಿಯಾವಾಡಿ ಸಿನಿಮಾದ ಹಾಡಿಗೆ ರೀಲ್ಸ್ ಮಾಡಿ ಸುದ್ದಿಯಾಗಿದ್ದಾರೆ.
ಅಲಿಯಾ ಭಟ್ ನಾಯಕಿಯಾಗಿ ಕಾಣಿಸಿಕೊಂಡಿರುವ ಗಂಗೂಬಾಯಿ ಕಠೀಯವಾಡಿ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದೆ. ಈ ಸಿನಿಮಾದ ಮೇರಿ ಜಾನ್ ಹಾಡಿಗೆ ತ್ರಿಷಾಕರ್ ರೀಲ್ಸ್ ಮಾಡಿದ್ದಾರೆ. ಅಲಿಯಾ ಭಟ್ ಹಾಗೆ ಕೈಯಲ್ಲಿ ಮದ್ಯದ ಬಾಟಲಿ ಹಿಡಿದುಕೊಂಡು ಅಲಿಯಾ ಭಟ್ ಹಾಗೆ ನಟಿಸಿದ್ದಾರೆ. ಈಗಾಗಲೇ ಸಿಕ್ಕಾಪಟ್ಟೆ ಜನಪ್ರಿಯವಾಗಿರುವ ಈ ಹಾಡಿಗೆ ತ್ರಿಷಾಕರ್ ಮಾಡಿರುವ ರೀಲ್ಸ್ ವೈರಲ್ ಆಗಿದೆ. ಅಂದಹಾಗೆ ತ್ರಿಷಾ ರೀಲ್ಸ್ ಮಾಡಿ ಸದ್ದು ಮಾಡುತ್ತಿರುವುದು ಇದೇ ಮೊದಲಲ್ಲ. ಅನೇಕ ಹಾಡುಗಳಿಗೆರೀಲ್ಸ್ ಮಾಡಿದ್ದಾರೆ. ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳುವ ತ್ರಿಷಾ ಪಡ್ಡೆಗಳ ನಿದ್ದೆಗೆಡಿಸುತ್ತಿರುತ್ತಾರೆ.
ತ್ರಿಷಾಕರ್ ಮಧು ಇನ್ಸ್ಟಾಗ್ರಾಮ್ ನಲ್ಲಿ 356k ಫಾಲೋವರ್ಸ್ ಹೊಂದಿದ್ದಾರೆ. ಕಲ್ಕತ್ತಾದಲ್ಲಿ ಜನಿಸಿರುವ ನಟಿ ತ್ರಿಷಾಕರ್ ಅನೇಕ ಭೋಜಪುರಿ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಅವರು ನಮಕ್ ಹರಾಮ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೆ ಸಮಂತಾ ಅವರ ಸೂಪರ್ ಹಿಟ್ ಪುಷ್ಪಾ ಸಿನಿಮಾದ ಹಾಡಿಗೆ ರೀಲ್ಸ್ ಮಾಡಿ ಸದ್ದು ಮಾಡಿದ್ದರು. ಕೆಂಪು ಬಣ್ಣದ ಸೀರೆಯಲ್ಲಿ ನೃತ್ಯ ಮಾಡಿದ್ದ ತ್ರಿಷಾಕರ್ ವಿಡಿಯೋ ವೈರಲ್ ಆಗಿತ್ತು. ಆಗಾಗ ರೀಲ್ಸ್ ಗಳ ಮೂಲಕ ನಟಿ ತ್ರಿಷಾಕರ್ ಗಮನ ಸೆಳೆಯುತ್ತಿರುತ್ತಾರೆ.
ಖಾಸಗಿ ವಿಡಿಯೋ ಲೀಕ್.. ಟ್ರೋಲ್ ಆದ ಭೋಜ್‌ಪುರಿ ನಟಿ!
ಎಂಎಂಎಸ್ ಕುರಿತು ಸ್ಪಷ್ಟನೆ
ತ್ರಿಷಾಕರ್ ಎಂಎಂಎಸ್ ವಿಡಿಯೋ ವೈರಲ್ ಆದ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದರು. ಪ್ರೇಕ್ಷಕರಲ್ಲಿ ಕ್ಷಮೆ ಕೇಳಿದ್ದ ತ್ರಿಷಾ ಕೆಲವರು ತನ್ನ ಹೆಸರು ಮತ್ತು ಫೋಟೋಗಳನ್ನು ಬಳಸಿ ನಕಲಿ ಖಾತೆಗಳನ್ನು ಸೃಷ್ಟಿಸಿದ್ದಾರೆ ಎಂದಿದ್ದರು. ಅದರಿಂದಲೇ ನನ್ನ ಬಗ್ಗೆ ಕೆಟ್ಟ ಕೆಟ್ಟ ಕಾಮೆಂಟ್ ಮಾಡುತ್ತಿರುತ್ತಾರೆ. ಅಲ್ಲದೆ ವೈರಲ್ ಆಗಿರುವ ವಿಡಿಯೋ ಈಗಿನದಲ್ಲ. ನಾಲ್ಕು ವರ್ಷಗಳ ಹಳೆಯ ವಿಡಿಯೋ ಎಂದು ಹೇಳಿದ್ದರು.
ತ್ರಿಷಾ ತನ್ನ ವೃತ್ತಿ ಜೀವನವನ್ನು 1999ರಲ್ಲಿ ಆರಂಭ ಮಾಡಿದರು. ತಮಿಳಿನ ಜೋಡಿ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ ತ್ರಿಷಾ ಭೋಜಪುರಿಯಲ್ಲಿ ಖ್ಯಾತಿಗಳಿಸಿದರು. ಅನೇಕ ಭೋಜಪುರಿ ಸಿನಿಮಾಗಳಲ್ಲಿ ತ್ರಿಷಾಕರ್ ಕೆಲಸ ಮಾಡಿದ್ದಾರೆ. ಅರವಿಂದ್ ಅಕೇಲಾ ಮತ್ತು ರಾಕೇಶ್ ಮಿಶ್ರ ಅವರಂತಹ ನಟರೊಂದಿಗೆ ತ್ರಿಷಾ ತೆರೆಹಂಚಿಕೊಂಡಿದ್ದಾರೆ. ಇದೀಗ ರೀಲ್ಸ್ ಗಳ ಮೂಲಕವೇ ಹೆಚ್ಚು ಮನಸೆಳೆಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.