ನನ್ನ ಮನೆಯಲ್ಲೇ ನನಗೆ ಕಿರುಕುಳ, ಕಣ್ಣೀರಿಟ್ಟು ಸಹಾಯ ಅಂಗಲಾಚಿದ ಮೀಟು ಚಳುವಳಿ ನಟಿ

Published : Jul 22, 2025, 11:52 PM ISTUpdated : Jul 23, 2025, 12:02 AM IST
Tanushree dutta breaks down

ಸಾರಾಂಶ

ಮೀಟು ಚಳುವಳಿ ಮೂಲಕ ಭಾರಿ ಸದ್ದು ಮಾಡಿದ ನಟಿ ತನುಶ್ರೀ ದತ್ತಾ ಇದೀಗ ಕಣ್ಣೀರಿಟ್ಟು ಸಹಾಯಕ್ಕೆ ಅಂಗಲಾಚಿದ್ದಾರೆ. ಕಳೆದ ಕೆಲ ವರ್ಷಗಳಿಂದ ತಾಳಲಾರದ ಕಿರುಕುಳ ಅನುಭವಿಸುತ್ತಿದ್ದೇನೆ. ನನಗೆ ಕೆಲಸ ಮಾಡಲು ಆಗುತ್ತಿಲ್ಲ, ದಯವಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಕಣ್ಣೀರಿಟ್ಟಿದ್ದಾರೆ. 

ಮುಂಬೈ (ಜು.22) ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ದ ಮೀಟು ಆರೋಪ ಮಾಡಿ ಅತೀ ದೊಡ್ಡ ಚಳುವಳಿ ಆರಂಭಿಸಿದ ನಟಿ ತನುಶ್ರಿ ದತ್ತಾ ಇದೀಗ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ವಿಡಿಯೋ ಮೂಲಕ ಯಾರಾದರೂ ಸಹಾಯ ಮಾಡಿ ಎಂದು ಕಣ್ಣೀರಿಟ್ಟಿದ್ದಾರೆ. ನನ್ನ ಮನೆಯಲ್ಲಿ ನನಗೆ ಕಿರುಕುಳ ನೀಡಲಾಗುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ನಿರಂತರ ಕಿರುಕುಳ ನೀಡಲಾಗುತ್ತಿದೆ. ಇತ್ತ ನನಗೆ ಕೆಲಸವೂ ಇಲ್ಲ, ಕೆಲಸ ಮಾಡಲು ಆಗತ್ತಿಲ್ಲ. ನನ್ನ ಆರೋಗ್ಯವೂ ಕೆಟ್ಟಿದೆ. ನನಗ ಎಲ್ಲವೂ ಸಾಕಾಗಿದೆ ಎಂದು ತನುಶ್ರಿ ದತ್ತಾ ಕಣ್ಣೀರಿಟ್ಟಿದ್ದಾರೆ.

ಕಣ್ಣೀರಿಟ್ಟು ನೋವು ಹಂಚಿಕೊಂಡು ತನುಶ್ರಿ ದತ್ತಾ

ತನುಶ್ರಿ ದತ್ತಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ನೋವು ಹಂಚಿಕೊಳ್ಳುತ್ತಾ ತನುಶ್ರಿ ದತ್ತಾ ಕಣ್ಣೀರಿಟ್ಟಿದ್ದಾರೆ. 2018ರಿಂದ ನನಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ. ಮೀಟು ಬಳಿಕ ನಾನು ಪ್ರತಿ ದಿನ ಚಿತ್ರಹಿಂಸೆ ಅನುಭವಿಸುತ್ತಿದ್ದೇನೆ. ಇನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಯವಿಟ್ಟು ನನಗೆ ಸಹಾಯ ಮಾಡಿ ಎಂದು ತನುಶ್ರಿ ದತ್ತಾ ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ ತಾವು ಪೊಲೀಸರಿಗೆ ಕರೆ ಮಾಡಿರುವುದಾಗಿ ಹೇಳಿದ್ದಾರೆ.

ನನಗೆ ಸಾಕಾಗಿದೆ, ಹಿಂಸೆ, ಕಿರುಕಳದಿಂದ ಹೈರಾಣಾಗಿದ್ದೇನೆ

ನನ್ನ ಮನೆಯಲ್ಲೇ ನನಗೆ ನೆಮ್ಮದಿ ಇಲ್ಲ. ಮನೆಯಲ್ಲೇ ನನಗೆ ಕಿರುಕುಳ ನೀಡಲಾಗುತ್ತಿದೆ. ಹೆಜ್ಜೆ ಹೆಜ್ಜೆಗೂ ನೋವು ಅನುಭವಿಸುತ್ತಿದ್ದೇನೆ.ನೋವು ತಾಳಲಾರದೆ ನಾನು ಪೊಲೀಸರಿಗೆ ಕರೆ ಮಾಡಿದ್ದೆ. ಪೊಲೀಸರು ಆಗಮಿಸಿ ವಿಚಾರಿಸಿದ್ದಾನೆ. ನಾಳೆ ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾನೆ. ನನ್ನ ಆರೋಗ್ಯ ಸರಿಯಿಲ್ಲ. ಆರೋಗ್ಯ ಹದಗೆಟ್ಟಿರುವ ಕಾರಣ ನಾಳೆ ಅಥವಾ ನಾಡಿದ್ದು ಪೊಲೀಸ್ ಠಾಣೆಗೆ ತೆರಳಿ ದೂರು ನೀಡುತ್ತೇನೆ. ಕಳೆದ ನಾಲ್ಕೈದು ವರ್ಷಗಳಿಂದ ನನಗೆ ಕೊಟ್ಟಿರು ಹಿಂಸೆ ಅಷ್ಟಿಟ್ಟಲ್ಲ ಎಂದು ತನುಶ್ರಿ ದತ್ತಾ ಕಣ್ಣೀರಿಡುತ್ತಾ ಹೇಳಿದ್ದಾರೆ.

 

 

ನನಗೆ ಕೆಲಸ ಮಾಡಲು ಆಗುತ್ತಿಲ್ಲ

ನನ್ನ ಆರೋಗ್ಯ ಸರಿಯಿಲ್ಲ. ಇತ್ತ ಯಾವುದೇ ಕೆಲಸ ಮಾಡಲು ಆಗುತ್ತಿಲ್ಲ. ಮನೆ ನೆಟ್ಟಗೆ ಇಡಲು ಸಾಧ್ಯವಾಗುತ್ತಿಲ್ಲ. ಮನೆಗೆಲೆಸದವರನ್ನು ಕರೆಸಲು ಸಾಧ್ಯವಾಗುತ್ತಿಲ್ಲ. ಕಾರಣ ಅವರು ಮನೆಗೆಲಸದವರನ್ನು ಬುಟ್ಟಿಗೆ ಹಾಕಿಕೊಂಡು ನನ್ನ ವಿರುದ್ಧ ಬಳಸುತ್ತಿದ್ದಾರೆ. ಈ ರೀತಿಯ ಕೆಟ್ಟ ಅನುಭವ ನನಗೆ ಆಗಿದೆ. ಇಷ್ಟೇ ಅಲ್ಲ ಮನೆಗೆಲೆಸದವರು ಮನೆಯಿಂದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ನನ್ನ ಮನೆಯಲ್ಲೇ ನಾನು ಕಿರುಕುಳ, ಸಂಕಷ್ಟ ಅನುಭವಿಸುತ್ತಿದ್ದೇನೆ. ನನಗೆ ಯಾರಾದರೂ ಸಹಾಯ ಮಾಡಿ ಎಂದು ತನುಶ್ರಿ ದತ್ತಾ ಗೋಗೆರೆದಿದ್ದಾರೆ.

ಧೈರ್ಯ ತುಂಬಿದ ನೆಟ್ಟಿಗರು

ತನುಶ್ರಿ ದತ್ತಾ ಸೋಶಿಯಲ್ ಮೀಡಿಯಾ ಮೂಲಕ ಕಣ್ಣೀರಿಟ್ಟು ತಮ್ಮ ನೋವು ತೋಡಿಕೊಂಡಿದ್ದಾರೆ. ತನುಶ್ರಿ ದತ್ತಾ ಸದ್ಯದ ಪರಿಸ್ಥಿತಿ ನೋಡಿ ಹಲವರು ಭಾವುಕರಾಗಿದ್ದಾರೆ. ಇದೇ ವೇಳೆ ತನುಶ್ರಿ ದತ್ತಾಗೆ ಧೈರ್ಯ ತುಂಬಿದ್ದಾರೆ. ಎಲ್ಲವೂ ಒಳ್ಳೆಯದಾಗಲಿದೆ. ತಾಳ್ಮೆಯಿಂದ ಇರಿ. ಧೈರ್ಯವಾಗಿ ಎದುರಿಸಿ ಎಂದು ಧೈರ್ಯ ಹೇಳಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?