ರಸ್ತೆ ಅಪಘಾತದಲ್ಲಿ ಖ್ಯಾತ ಗಾಯಕಿ ದುರ್ಮರಣ

By Web Desk  |  First Published Nov 15, 2019, 3:18 PM IST

ರಸ್ತೆ ಅಪಘಾತದಲ್ಲಿ ಖ್ಯಾತ ಮರಾಠಿ ಗಾಯಕಿ ಗೀತಾ ಮಲಿ ದುರ್ಮರಣ | ಮುಂಬೈನ ಥಾಣೆ ಜಿಲ್ಲೆಯ ಮುಂಬೈ ಆಗ್ರಾ ಹೈವೇಯಲ್ಲಿ ಅಪಘಾತ | ಪತಿಗೆ ಗಂಭೀರ ಗಾಯ 


ಮುಂಬೈ (ನ. 15): ಮರಾಠಿ ಖ್ಯಾತ ಹಿನ್ನಲೆ ಗಾಯಕಿ ಗೀತಾ ಮಲಿ ರಸ್ತೆ ಅಪಘಾತದಲ್ಲಿ ಇಂದು ಮೃತಪಟ್ಟಿದ್ದಾರೆ. ಮುಂಬೈನ ಥಾಣೆ ಜಿಲ್ಲೆಯ ಮುಂಬೈ ಆಗ್ರಾ ಹೈವೆಯಲ್ಲಿ ಅಪಘಾತ ಸಂಭವಿಸಿದೆ. 

ಅಮೆರಿಕಾದಿಂದ ವಾಪಸ್ಸಾದ ನಂತರ ನಾಸಿಕ್‌ನಲ್ಲಿರುವ ಮನೆಗೆ ಪತಿಯ ಜೊತೆ ಕಾರಿನಲ್ಲಿ ಹಿಂತಿರುಗುತ್ತಿದ್ದರು. ರಸ್ತೆ ಬದಿಯಲ್ಲಿ ನಿಲ್ಲಿಸಿರುವ ಕಂಟೇನರ್‌ಗೆ ಕಾರು ಡಿಕ್ಕಿ ಹೊಡೆದಿದ್ದು ಗೀತಾ ಬಾಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

Tap to resize

Latest Videos

undefined

Good Newwz! ತಾಯಿಯಾಗುತ್ತಿದ್ದಾರೆ ಕರೀನಾ, ಕಿಯಾರಾ!

ಪತಿ ವಿಜಯ್‌ಗೆ ಗಂಭೀರ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಗೀತಾ ಬಾಲಿ ಸಾಕಷ್ಟು ಮರಾಠಿ ಹಾಡುಗಳನ್ನು ಹಾಡಿದ್ದಾರೆ. ಅವರದ್ದೇ ಆದ ಆಲ್ಬಂಗಳನ್ನು ಹೊರ ತಂದಿದ್ದಾರೆ. 

 


ನವೆಂಬರ್ 15ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!