
'ಬಾಲಾ' ಚಿತ್ರದ ಮೂಲಕ ಬಿ-ಟೌನ್‌ಗೆ ಕಮ್ ಬ್ಯಾಕ್ ಮಾಡುತ್ತಿರುವ ಯಾಮಿ ಗುಪ್ತಾ ಯಶಸ್ಸಿನ ಹಾದಿಯಲ್ಲಿದ್ದಾರೆ. ವಿಭಿನ್ನ ಚಿತ್ರಕಥೆ ಆಯ್ಕೆ ಮಾಡಿಕೊಂಡು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಚಿತ್ರ ರಿಲೀಸ್ ಅಗಿ ನಾಲ್ಕು ದಿನಗಳಲ್ಲಿ 8.24 ಕೋಟಿ ಕಲೆಕ್ಷನ್ ಮಾಡಿದ್ದು ಒಂದು ವಾರದಲ್ಲಿ 52.21 ಕೋಟಿ ಗಿಟ್ಟಿಸಿಕೊಂಡಿದೆ. ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಭಾಗಿಯಾಗಿದ್ದ ಯಾಮಿ ರಿಯಲ್ ಲೈಫ್ ಹುಡುಗ ಹೇಗಿರಬೇಕು ಎಂದು ಹೇಳಿದ್ದಾರೆ.
ಯಾಮಿ ಗೌತಮ್ ಕನ್ನಡಕ್ಕೆ ಬರೋದಾದ್ರೆ ಈ ಮೂವರು ಸ್ಟಾರ್ ಗಳೇ ಬೇಕಂತೆ!
ನಿಜ ಜೀವನದಲ್ಲೂ ಬಾಲ್ಡ್ ಇರುವ ಹುಡುಗ ಬಂದ್ರೆ ಒಪ್ಪಿಕೊಳ್ಳುತ್ತೀರಾ ಎಂದು ನಿರೂಪಕಿ ಪ್ರಶ್ನಿಸಿದಾಗ ಯಾಮಿ ಕೊಟ್ಟ ಉತ್ತರ ಶಾಕಿಂಗ್. 'ಒಪ್ಪಿಕೊಳ್ಳುತ್ತೇನೆ. ಬಾಲ್ಡ್ ಗಂಡಸರು ತುಂಬಾ ಕೂಲ್. ನೋಡಲು ತುಂಬಾ ಆಕರ್ಷಕವಾಗಿ ಕಾಣುತ್ತಾರೆ. ಚಿತ್ರದ ಉದ್ದೇಶವೇ ಬೇರೊಬ್ಬರು ನಿಮ್ಮನ್ನು ಪ್ರೀತಿಸುವ ಮುನ್ನ ಮೊದಲು ನಮ್ಮನ್ನು ನಾವು ಇಷ್ಟ ಪಡುವುದು' ಎಂದು ಹೇಳುತ್ತಾರೆ.
ಬಿಕಿನಿ ಓಕೆ, ಅದರ ಮೇಲೆ 'ಹರೇ ರಾಮ್'ಯಾಕೆ? ನಟಿಗೆ ನೆಟ್ಟಿಗರಿಂದ ಕ್ಲಾಸ್!
'ಬಾಲಾ' ಚಿತ್ರದಲ್ಲಿ ಪ್ರೀ ಮೆಚ್ಯೂರ್ ಬಾಲ್ಡ್‌ನೆಸ್‌ಯಿಂದ ನಟ ಆಯುಷ್ಮಾನ್ ನರಳುತ್ತಿದ್ದು ಸಾಮಾಜಿಕ ಒತ್ತಡದಿಂದ ಧೈರ್ಯ ಕಳೆದುಕೊಳ್ಳುತ್ತಾರೆ. ಅದನ್ನು ಎದುರಿಸಿ ಜೀವನ ಹೇಗಿರುತ್ತದೆ ಎಂದು ತೋರಿಸಲಾಗಿದೆ. ಕೌಶಿಕ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಅಭಿಮಾನಿಗಳು ಪ್ರೀತಿಯ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಈ ಚಿತ್ರದಲ್ಲಿ ಯಾಮಿ ಟಿಕ್‌ಟಾಕ್ ಮಾಡುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.