
ಬಾಲಿವುಡ್ ನಟಿ ಮಂದಿರ ಬೇಡಿ ಹೆಣ್ಣು ಮಗುವನ್ನು ದತ್ತು ಸ್ವೀಕರಿಸಿದ್ದಾರೆ. ಪರ್ಫೆಕ್ಟ್ ಫ್ಯಾಮಿಲಿ ಫೊಟೋ ಶೇರ್ ಮಾಡಿದ ನಟಿ ತಮ್ಮ ಕುಟುಂಬಕ್ಕೆ ಹೆಣ್ಣು ಮಗುವನ್ನು ಸ್ವಾಗತಿಸಿದ್ದಾರೆ.
ನಟಿ ಹಾಗೂ ಆಕೆಯ ಪತಿ ರಾಜ್ ಕೌಶಲ್ 4 ವರ್ಷದ ಹೆಣ್ಣು ಮಗುವನ್ನು ದತ್ತು ಸ್ವೀಕರಿಸಿದ್ದು, ತಾರಾ ಬೇಡಿ ಕೌಶಲ್ ಎಂದು ಹೆಸರಿಟ್ಟಿದ್ದಾರೆ. ಮಂದಿರ ಈ ವಿಚಾರವನ್ನು ಇನ್‌ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ.
KGF2ನಲ್ಲಿ ಬಾಲಿವುಡ್ ನಟಿ: ರಮಿಕಾ ಕ್ಯಾರೆಕ್ಟರ್ ಫಸ್ಟ್ ಲುಕ್ ರಿವೀಲ್
ತಾರಾ ಮಂದಿರ ಮತ್ತು ರಾಜ್ ಮಧ್ಯೆ ಕುಳಿತಿದ್ದರೆ, ವೀರ್ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾನೆ. ದಂಪತಿ ಜುಲೈ 28ರಂದು ಮಗುವನ್ನು ದತ್ತು ಸ್ವೀಕರಿಸಿದ್ದಾರೆ. ತಮ್ಮ ಮಗನಿಗೆ ತಂಗಿಯನ್ನು ನೀಡಲು ಮತ್ತು ದಂಪತಿಯೂ 4 ವರ್ಷದೊಳಗಿನ ಹೆಣ್ಣು ಮಗುವನ್ನು ದತ್ತು ಪಡೆಯಲು ಮೊದಲೇ ನಿರ್ಧರಿಸಿದ್ದರು ಎನ್ನಲಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.