1000 ಕೋಟಿಯತ್ತ 'RRR'; ಇದುವರೆಗೂ ರಾಜಮೌಳಿ ಸಿನಿಮಾ ಗಳಿಸಿದೆಷ್ಟು?

Published : Apr 03, 2022, 04:16 PM ISTUpdated : Apr 03, 2022, 04:50 PM IST
1000 ಕೋಟಿಯತ್ತ 'RRR'; ಇದುವರೆಗೂ ರಾಜಮೌಳಿ ಸಿನಿಮಾ ಗಳಿಸಿದೆಷ್ಟು?

ಸಾರಾಂಶ

ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾ ಬಿಡುಗಡೆಯಾಗಿ 9 ದಿನಗಳಲ್ಲಿ ಸಿನಿಮಾ 800 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು, 1000 ಕೋಟಿಯತ್ತಾ ಮುನ್ನುಗ್ಗುತ್ತಿದೆ. 

ಎಸ್ ಎಸ್ ರಾಜಮೌಳಿ(Rajamouli) ಸಾರಥ್ಯದಲ್ಲಿ ಬಂದ ಆರ್ ಆರ್ ಆರ್(RRR) ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಬಿಡುಗಡೆಯಾಗಿ 9 ದಿನಗಳು ಕಳೆದಿದ್ದು ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಧೂಳ್ ಎಬ್ಬಿಸುತ್ತಿದೆ. ವಾರದ ಬಳಿಕವೂ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ಆರ್ ಆರ್ ಆರ್ ಮಾರ್ಚ್ 25ರಂದು ಅದ್ದೂರಿಯಾಗಿ ಬಿಡುಗಡೆಯಾಗಿದ್ದು, ಪ್ರೇಕ್ಷಕರು ಚಿತ್ರ ನೋಡಿ ಆನಂದಿಸುತ್ತಿದ್ದಾರೆ. ರಾಮ್ ಚರಣ್ ಮತ್ತು ಜೂ. ಎನ್ ಟಿ ಆರ್(Jr NTR and Ram Charans) ಅಭಿನಯಕ್ಕೆ ಪ್ರೇಕ್ಷಕರು ಮನ ಸೋತಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ.

ಆರ್ ಆರ್ ಆರ್ ಸಿನಿಮಾ ಹಿಂದಿಯಲ್ಲಿ ಈಗಾಗಲೇ 100 ಕೋಟಿ ರೂಪಾಯಿ(100 crore) ಕಲೆಕ್ಷನ್ ಮಾಡಿ 200 ಕೋಟಿಯತ್ತಾ ದಾಪುಗಾಲಿಟ್ಟಿದೆ. ಸಿನಿಮಾ ಬಿಡುಗಡೆಯಾಗಿ 9ನೇ ದಿನವೂ ಕಲೆಕ್ಷನ್ ಅಬ್ಬರ ಮುಂದುರೆದಿದೆ. ಈ ವರ್ಷದ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದಾಗಿದೆ. ಅಂದಹಾಗೆ ಇದುವರೆಗೂ ಆರ್ ಆರ್ ಆರ್ ಸಿನಿಮಾ ವಿಶ್ವದಾದ್ಯಂತ 800 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ 1000 ಕೋಟಿಯತ್ತಾ ಮುನ್ನುಗ್ಗುತ್ತಿದೆ.

ಈ ಬಗ್ಗೆ ತೆಲುಗು ಸಿನಿಮಾ ವಿಶ್ಲೇಷಕ ರಮೇಶ್ ಬಾಲ ಮಾಹಿತಿ ಹಂಚಿಕೊಂಡಿದ್ದಾರೆ. 8ನೇ ದಿನವು ಸಿನಿಮಾ ಉತ್ತಮ ಕಲೆಕ್ಷನ್ ಮಾಡಿತ್ತು. 7ನೇ ದಿನಕ್ಕೆ ರಾಜಮೌಳಿ ಸಿನಿಮಾ ಒಟ್ಟು 709 ಕೋಟಿ ರೂ. ಬಾಚಿಕೊಂಡಿತ್ತು. 6ನೇ ದಿನಕ್ಕೆ ಆರ್ ಆರ್ ಆರೆ ಕಲೆಕ್ಷನ್ 672.16 ಕೋಟಿ ರೂಪಾಯಿ ಆಗಿತ್ತು. ಇದೀಗ 800 ಕೋಟಿಗೂ ಅಧಿಕ ಗಳಿಕೆ ಮಾಡುವ ಮೂಲಕ 1000 ಕೋಟಿಯತ್ತಾ ಮುನ್ನುಗ್ಗುತ್ತಿದೆ.


RRR Collection; 8ನೇ ದಿನ ರಾಮ್ ಚರಣ್ - ಜೂ.ಎನ್ ಟಿ ಆರ್ ಸಿನಿಮಾ ಗಳಿಸಿದೆಷ್ಟು?

 

ಇನ್ನು ಹಿಂದಿ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ರೂ. ದಾಟಿದ ರಾಜಮೌಳಿ ಅವರ 3ನೇ ಸಿನಿಮಾ ಇದಾಗಿದೆ. ವಿಶೇಷ ಎಂದರೆ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಅವರಿಗೆ ಬಾಲಿವುಡ್ ನಲ್ಲಿ ಇದು ಮೊದಲ ಶತಕವಾಗಿದೆ.

ಆರ್ ಆರ್ ಆರ್ ಮೊದಲ ದಿನವೇ ದಾಖಲೆ ಗಳಿಕೆ ಮಾಡಿತ್ತು. ಆಂಧ್ರ ಪ್ರದೇಶದಲ್ಲಿ 75 ಕೋಟಿ ರೂ. ಗಳಿಕೆ ಮಾಡಿದೆ. ಕರ್ನಾಟಕದಲ್ಲಿ 14.5 ಕೋಟಿ ರೂ. ಗಳಿಕೆ ಮಾಡಿದ್ರೆ ತಮಿಳುನಾಡಿನಲ್ಲಿ 10 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಕೇರಳದಲ್ಲಿ 4 ಕೋಟಿ ರೂ. ಆರ್ ಆರ್ ಆರ್ ಸಿನಿಮಾ ಬಾಚಿಕೊಂಡಿತ್ತು. ಉತ್ತರ ಭಾರತದಲ್ಲಿ 25 ಕೋಟಿ ರೂ. ಭಾರತದಲ್ಲಿ ರಾಜಮೌಳಿ ಸಿನಿಮಾ 156 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, ವಿದೇಶದಲ್ಲಿಯೂ ಆರ್ ಆರ್ ಆರ್ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಯು ಎಸ್ ನಲ್ಲಿ 42 ಕೋಟಿ ಕಲೆಕ್ಷನ್ ಮಾಡಿದೆ, ಬೇರೆ ಬೇರೆ ದೇಶಗಳಲ್ಲಿ 25 ಕೋಟಿ ರೂ. ಮೊದಲ ದಿನ ಒಟ್ಟು ಆರ್ ಆರ್ ಆರ್ ಕಲೆಕ್ಷನ್ 223 ಕೋಟಿ ರೂಪಾಯಿ ಆಗಿತ್ತು.

ಬಾಕ್ಸ ಆಫೀಸ್ ನಲ್ಲಿ ಮುಂದುವರೆದ RRR ಅಬ್ಬರ; ಒಂದು ವಾರದಲ್ಲಿ ರಾಜಮೌಳಿ ಸಿನಿಮಾ ಗಳಿಸಿದೆಷ್ಟು?

ಇನ್ನು ಸಿನಿಮಾದ ಬಗ್ಗೆ ಹೇಳುವುದಾದರೆ ಆರ್ ಆರ್ ಆರ್ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತರಾಮ ರಾಜು ಮತ್ತು ಕೋಮರಾಮ್ ಭೀಮ್ ಅವರ ಜೀವನದ ಆಧರಿಸಿದ ಕಾಲ್ಪನಿಕ ಕಥೆಯಾಗಿದೆ. ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕೋಮರಾಮ್ ಭೀಮ್ ಪಾತ್ರದಲ್ಲಿ ಜೂ.ಎನ್ ಟಿ ಆರ್ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸುಮಾರು 450 ಕೋಟಿ ರೂ. ಬಜೆಟ್ ನಲ್ಲಿ ತಯಾರಾಗಿದೆ. ಡಿವಿವಿ ದಾನಯ್ಯ ನಿರ್ಮಾಣದಲ್ಲಿ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ಅಲಿಯಾ ಭಟ್, ಸಮುದ್ರ ಕಣಿ, ಅಜಯ್ ದೇವಗನ್, ಒಲಿವಿಯಾ ಮೋರಿಸ್ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?