
ಕಾಂಟ್ರವರ್ಸಿಯಾಗಿರೋ ಅಕ್ಷಯ್ ಕುಮಾರ್ ಅಭಿನಯದ ಲಕ್ಷ್ಮೀ ಬಾಂಬ್ ಸಿನಿಮಾ ತಂಡಕ್ಕೆ ಮತ್ತೊಂದು ಸಮಸ್ಯೆ ಎದುರಾಗಿದೆ. ಒಟಿಟಿ ರಿಲೀಸ್‌ಗೆ ದಿನಾಂಕ ನಿಗದಿಯಾಗಿದ್ದು, ಇದೀಗ ಚಿತ್ರತಂಡಕ್ಕೆ ಲೀಗಲ್ ನೊಟಿಸ್ ಕಳುಹಿಸಲಾಗಿದೆ.
ಶ್ರೀ ರಜಪೂತ್ ಕರ್ಣಿ ಸೇನೆ ಲಕ್ಷ್ಮೀ ಬಾಂಬ್ ತಂಡಕ್ಕೆ ನೋಟಿಸ್ ಕಳುಹಿಸಿದ್ದು, ಸಿನಿಮಾದ ಹೆಸರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ಕೈರಾ ಅಡ್ವಾಣಿ ಅಭಿನಯದ ಲಕ್ಷ್ಮೀ ಬಾಂಬ್ ಸಿನಿಮಾ ನವೆಂಬರ್9ರಂದು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ರಿಲೀಸ್‌ಗೆ ನಿಗದಿಯಾಗಿದೆ.
'ಈಗ್ಯಾಕೆ ನಿಮ್ಮ ಬಾಯಿ ಮುಚ್ಚಿದೆ..?' ಗರ್ಭಿಣಿ ಕರೀನಾಳನ್ನ ಜೈಲಿಗಟ್ಟಬೇಕು ಎಂದ ಕಂಗನಾ
ತೃತೀಯ ಲಿಂಗಿಯ ಆತ್ಮ ಅಕ್ಷಯ್ ಕುಮಾರ್ ಪಾತ್ರದೊಳಗೆ ಸೇರುವುದೇ ಕಥಾ ಹಂದರ. ಶ್ರೀ ರಜಪೂತ್ ಕರ್ಣಿ ಸೇನೆಯ ಪರವಾಗಿ ವಕೀಲ ರಾಘವೇಂದ್ರ ಮೆಹ್ರೋತ್ರಾ ನೋಟಿಸ್ ಕಳುಹಿಸಿದ್ದಾರೆ.
ಸಿನಿಮಾ ಹಿಂದೂ ದೇವರು ಲಕ್ಷ್ಮೀಯನ್ನು ಕೆಟ್ಟದಾಗಿ ಬಿಂಬಿಸಿದೆ. ಲಕ್ಷ್ಮೀ ದೇವರ ಘನತೆ ಕುಗ್ಗಿದಲೆಂದೇ ಚಿತ್ರತಂಡ ಈ ಹೆಸರನ್ನು ಇಟ್ಟಿದೆ. ಈ ಹೆಸರು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ನೋಟಿಸ್‌ನಲ್ಲಿ ಆರೋಪಿಸಲಾಗಿದೆ.
ಸೊಸೆ ಮೀರಾ ಬಗ್ಗೆ ಶಾಹಿದ್ ತಾಯಿ ನೀಲಿಮಾ ಹೇಳೋದೇನು?
ಮುನಿ 2: ಕಾಂಚನಾ ಸಿನಿಮಾದ ಹಿಂದಿ ರಿಮೇಕ್ ಸಿನಿಮಾವಾಗಿದೆ ಲಕ್ಷ್ಮೀ ಬಾಂಬ್. ತಮಿಳಿನಲ್ಲಿ ನಟ, ನಿರ್ದೇಶಕ ರಾಘವ್ ಲಾರೆನ್ಸ್ ಅಭಿನಿಯಿಸಿದ್ದರು. ಈ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಮೊದಲ ಬಾರಿ ಸೀರೆ ಉಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.