'ಈಗ್ಯಾಕೆ ನಿಮ್ಮ ಬಾಯಿ ಮುಚ್ಚಿದೆ..?' ಗರ್ಭಿಣಿ ಕರೀನಾಳನ್ನ ಜೈಲಿಗಟ್ಟಬೇಕು ಎಂದ ಕಂಗನಾ

By Suvarna News  |  First Published Oct 28, 2020, 8:31 PM IST

ಫೇಕ್‌ ಸೆಲೆಕ್ಟಿವಿಟಿಸಂ ಬಗ್ಗೆ ಕಂಗನಾ ಗರಂ | ಕರೀನಾ ಕಪೂರ್-ಸೋನಂ ಇರುದ್ಧ ವಾಗ್ದಾಳಿ


ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ತಮ್ಮ ಲೇಟೆಸ್ಟ್ ಟ್ವೀಟ್‌ನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಕಿಡಿಕಾರಿದ್ದಾರೆ. ಕರೀನಾ ಕಪೂರ್, ಸೋನಂ ಕಪೂರ್, ರಾಧಿಕಾ ಆಪ್ಟೆ, ಬಾದ್‌ಶಾ, ವಿಶಾಲ್ ದಡ್ಲಾನಿ, ಕಲ್ಕಿ ಕೊಚಿನ್, ಹುಮಾ ಖುರೇಷಿ, ಸ್ವರಾ ಭಾಸ್ಕರ್, ರಿಚಾ ಚಡ್ಡಾ ಅವರನ್ನು ಜೈಲಿಗಟ್ಟಬೇಕು ಎಂದಿದ್ದಾರೆ ಕಂಗನಾ.

ಇದ್ದಕ್ಕಿದ್ದಂತೆ ಈ ರೀತಿ ಗರಂ ಟ್ವೀಟ್ ಮಾಡಿರೋ ನಟಿ, ನಿಕಿತಾ ಘಟನೆಯಲ್ಲಿ ಸುಮ್ಮನಿರುವ ಸೆಲೆಬ್ರಿಟಗಳ ವಿರುದ್ಧ ಗುಡುಗಿದ್ದಾರೆ. ಫೇಕ್ ಮತ್ತು ಸೆಲೆಕ್ಟಿವ್ ಆಕ್ಟಿವಿಟಿಸಂ ಮಾಡುತ್ತಿದ್ದಾರೆ ಎಂದು ಕಂಗನಾ ಆರೋಪಿಸಿದ್ದಾರೆ.

Latest Videos

undefined

ವ್ಯಕ್ತಿಗೆ ಶೂಟ್ ಮಾಡಿ, ಸತ್ತು ಬಿದ್ದವನ ಫೋಟೋ ತೆಗೆದ ಕೊಲೆಗಾರ..!

ಈ ಫೇಕ್ ಆಕ್ಟಿವಿಟಿಸಂ ಮಾಡುವವರು ಮಹಿಳಾ ಸಬಲೀಕರಣಕ್ಕೆ ತೊಂದರೆಯಾಗಿದ್ದಾರೆ. ಇವರನ್ನು ಜೈಲಿಗಟ್ಟಬೇಕು. ಒಬ್ಬ ಜಿಹಾದಿಯಿಂದ ಕೊಲ್ಲಲ್ಪಟ್ಟ ನಿಕಿತಾ ವಿಚಾರದಲ್ಲಿ ಇವಾರ್ಯಕೆ ಬಾಯಿ ಮುಚ್ಚಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ನಿಕಿತಾಳ ಧೈರ್ಯ ರಾಣಿ ಲಕ್ಷ್ಮೀ ಬಾಯಿ ಅಥವಾ ಪದ್ಮಾವತಿಗೆ ಕಮ್ಮಿ ಇಲ್ಲ ಎಂದು ನಟಿ ಟ್ವೀಟ್ ಮಾಡಿದ್ದರು. ನಿಕಿತಾ ತೋಮರ್ ಎಂಬ ಯುವತಿಯನ್ನು ಫರಿದಾಬಾದ್ ಕಾಲೇಜಿನ ಹೊರಗೆ ಶೂಟ್ ಮಾಡಿ ಕೊಲ್ಲಲಾಗಿತ್ತು.

click me!