
ಟಾಲಿವುಡ್ ನಟ ಮಹೇಶ್ ಬಾಬು ಪಕ್ಕಾ ಸಿನಿ ಪ್ರೇಮಿ. ಯಾವುದೇ ಚಿತ್ರವಾಗಿರಲಿ ಅದನ್ನು ವೀಕ್ಷಿಸಿ ನಿರ್ದೇಶಕರಿಗೆ ಹಾಗೂ ನಟರಿಗೆ ಕರೆ ಮಾಡಿ, ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ. ಕೆಲವೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ವೀಕ್ಷಿಸಲು ಸಲಹೆ ನೀಡುತ್ತಾರೆ. ಹೀಗೆ 2017ರಲ್ಲಿ ಮಹೇಶ್ ಬಾಬು ಅವರು ಮಾಡಿರುದ ವಾಟ್ಸ್ ಆ್ಯಪ್ ಚಾಟ್‌ವೊಂದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ತಿಂಗಳ ಮಗುವಿನ ಪ್ರಾಣ ಉಳಿಸಿದ ನಟ ಮಹೇಶ್ ಬಾಬು
ವಂಶಿ ನಿರ್ದೇಶನದ 'ಊಪಿರಿ' ಸಿನಿಮಾ 2017ರಲ್ಲಿ ಫಿಲಂಫೇರ್ ಪ್ರಶಸ್ತಿ ಪಡೆದುಕೊಂಡಿತ್ತು. ಮಹೇಶ್ ಬಾಬು ವಂಶಿಗೆ ಚಿತ್ರದ ಬಗ್ಗೆ ಸಂದೇಶವೊಂದನ್ನು ಕಳುಹಿಸಿದ್ದರು. 'ಶುಭಾಶಯಗಳು ವಂಶಿ ಅವರೇ. ನಿಮ್ಮ ಸಿನಿಮಾ ಫಿಲ್ಮ್ ಫೇರ್ ಪಡೆದುಕೊಂಡಿದೆ ಎಂದು ಕೇಳಲ್ಪಟ್ಟೆ. ನಿಮ್ಮ ಮುಂದಿನ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಗಲಿ ಎಂದು ಆಶೀಸುತ್ತೇನೆ,' ಎಂದು ಮಹೇಶ್ ಮೆಸೇಜ್ ಕಳುಹಿಸಿದ್ದರು.
ಮಹೇಶ್ ಬಾಬು ಅವರು ನುಡಿದಂತೆ ವಂಶಿ ಅವರ ನಂತರದ ಚಿತ್ರ 'ಮಹರ್ಷಿ' ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಮಹೇಶ್ ಬಾಬು ನಟನೆಯ 'ಮಹರ್ಷಿ' ಸಿನಿಮಾ ಅತ್ಯುತ್ತಮ ಮನೋರಂಜನಾತ್ಮಕ ಸಿನಿಮಾ ವಿಭಾಗದಲ್ಲಿ ಈ ಬಾರಿಯ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿದೆ. 'ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೌರವದಿಂದ ಸ್ವೀಕರಿಸುತ್ತೇನೆ. ಸಾಮಾಜಿಕ ವಿಷಯವನ್ನು ಬೆಳಕಿಗೆ ತಂದ ನಿರ್ದೇಶಕ ವಂಶಿ ಅವರ ಬಗ್ಗೆ ಹೆಮ್ಮೆಯಿದೆ. ಮಹರ್ಷಿ ಚಿತ್ರಕ್ಕಾಗಿ ಕೆಲಸ ಮಾಡಿದ ಎಲ್ಲರಿಗೂ ಧನ್ಯವಾದಗಳು,' ಎಂದು ಮಹೇಶ್ ಬಾಬು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.