
ಮುಂಬೈ(ಫೆ.20) ಮಹಾಕುಂಭ ಮೇಳದ ಮೂಲಕ ದೇಶದಲ್ಲಿ ಭಾರಿ ಜನಪ್ರಿಯತೆ ಜೊತೆಗೆ ನ್ಯಾಶನಲ್ ಕ್ರಶ್ ಆಗಿ ಹೊರಹೊಮ್ಮಿದ ಸುಂದರಿ ಮೊನಾಲಿಸಾ ಇದೀಗ ಸಿನಿಮಾ, ಕಾರ್ಯಕ್ರಮದ ಮೂಲಕ ಬ್ಯೂಸಿಯಾಗಿದ್ದಾರೆ. ಸಹಜ ಸೌಂದರ್ಯ, ಆಕರ್ಷಕ ಕಣ್ಣುಗಳಿಂದ ದೇಶದ ಗಮನಸೆಳೆದ ಮೊನಾಲಿಸಾ ಕುರಿತು ಡೀಪ್‌ಫೇಕ್ ವಿಡಿಯೋ ಒಂದು ಹರಿದಾಡುತ್ತಿದೆ. ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಬಾಲಿವುಡ್ ನಟಿಯರನ್ನು ಕಾಡಿದ ಡೀಪ್‌ಫೇಕ್ ವಿಡಿಯೋ ಕಾಟ ಇದೀಗ ಮೊನಾಲಿಸಾಳಿಗೂ ತಟ್ಟಿದೆ.
ಈ ಡೀಪ್‌ಫೇಕ್ ವಿಡಿಯೋದಲ್ಲಿ ಮೊನಾಲಿಸಾ ಹಳದಿ ಬಾಡಿಕಾನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವಂತೆ ಸೃಷ್ಟಿಸಲಾಗಿದೆ. ಮಾಡೆಲ್ ರೀತಿಯಲ್ಲಿ ಬಿಂಬಿಸಿ ಆಕರ್ಷಕ ನೋಟ, ವೈಯಾರದ ವಿಡಿಯೋವನ್ನು ಸೃಷ್ಟಿಸಲಾಗಿದೆ. ಮಹಾಕುಂಭ ಮೇಳದಲ್ಲಿ ಕಾಣಿಸಿಕೊಂಡ ಮುಗ್ದ ಮೊನಾಲಿಸಿ ಈ ವಿಡಿಯೋದಲ್ಲಿ ಮಾಡೆಲ್, ನಟಿ ರೀತಿ ಕಾಣಿಸಿಕೊಂಡಿದ್ದಾರೆ. ಯಾವುದೇ ರೀತಿಯಲ್ಲೂ ಅನುಮಾನ ಬರದಂತೆ ಡೀಪ್‌ಫೇಕ್ ವಿಡಿಯೋ ಸೃಷ್ಟಿಸಲಾಗಿದೆ.
ಮೋನಾಲಿಸಾಗೆ ಅಕ್ಷರ ಕಲಿಸ್ತಿದ್ದಾರೆ ಸನೋಜ್ ಮಿಶ್ರಾ, ಹತ್ತು ವರ್ಷವಾದ್ರೂ ಸಿನಿಮಾ ಡೌಟ್ ಅಂತಿದ್ದಾರೆ ವೀಕ್ಷಕರು
ಮೊನಾಲಿಸಾಳ ಈ ಡೀಪ್‌ಫೇಕ್ ವಿಡಿಯೋ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ. ಗುರುತೇ ಸಿಗದಷ್ಟು ಮೊನಾಲಿಸಾ ಬದಲಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಒಂದಷ್ಟು ಮಂದಿ ಇದು ಡೀಪ್‌ಫೇಕ್ ವಿಡಿಯೋ ಎಂದು ಸೂಚಿಸಿದ್ದಾರೆ. ಮೊನಾಲಿಸಾಳ ಡೀಪ್‌ಫೇಕ್ ವಿಡಿಯೋ ಇಲ್ಲಿದೆ.
ಮೊನಾಲಿಸಾ ಕುರಿತು ಕೆಲ ಡೀಪ್‌ಫೇಕ್ ವಿಡಿಯೋ ಹಾಗೂ ಫೋಟೋ ಹರಿದಾಡುತ್ತಿದೆ. ಈ ಪೈಕಿ ಮಾಡೆಲ್ ರೀತಿಯಲ್ಲಿ ಕಾಣಿಸಿಕೊಂಡ ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ನಟಿ ವಾಮಿಕಾ ಗಬ್ಬಿಯ ವಿಡಿಯೋವನ್ನು ಬಳಸಿಕೊಂಡು ಮೊನಾಲಿಸಾಳ ಡೀಪ್‌ಫೇಕ್ ವಿಡಿಯೋ ಸೃಷ್ಟಿಸಲಾಗಿದೆ. ಸ್ವಾಪ್ ಟೆಕ್ನಾಲಜಿ ಬಳಸಿ ಈ ಡೀಪ್‌ಫೇಕ್ ವಿಡಿಯೋ ಬಳಸಲಾಗಿದೆ. ವಮಿಕಾ ಗಬ್ಬಿಯ ಅಸಲಿ ವಿಡಿಯೋ ಈ ಕೆಳಗಿದೆ ನೋಡಿ.
ಇತ್ತೀಚೆಗೆ ಮೊನಾಲಿಸಿ ಕೇರಳದ ಜ್ಯುವೆಲ್ಲರಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಭಾರಿ ಸದ್ದು ಮಾಡಿದ್ದರು. ಮೊನಾಲಿಸಾ ನೋಡಲು ದೊಡ್ಡ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ವಿಶೇಷ ಸಂದರ್ಭದಲ್ಲಿ ಅವರು ಕೆಂಪು ಬಣ್ಣದ ಲೆಹೆಂಗಾ ಧರಿಸಿದ್ದರು. ಈ ಕಾರ್ಯಕ್ರಮದಲ್ಲಿ ಅವರೊಂದಿಗೆ ಹೆಸರಾಂತ ಉದ್ಯಮಿ ಬಾಬಿ ಚೆಮ್ಮನೂರ್ ಕೂಡ ಕಾಣಿಸಿಕೊಂಡರು.
ಬಾಲಿವುಡ್ ಸಿನಿಮಾದಲ್ಲೂ ಬ್ಯೂಸಿಯಾಗಿರುವ ಮೊನಾಲಿಸಾ ಇತ್ತೀಚೆಗೆ ಶೂಟಿಂಗ್ ಸ್ಪಾಟ್‌ನಲ್ಲಿ ಕಾಣಿಸಿಕೊಂಡಿದ್ದರು. ಇದರ ಬೆನ್ನಲ್ಲೇ ವಿಡಿಯೋ ಒಂದು ವೈರಲ್ ಆಗಿತ್ತು. ಆದರೆ ಈ ವೈರಲ್ ವಿಡಿಯೋ ಎಐ ಜನರೇಟೆಡ್ ಅನ್ನೋ ಮಾತುಗಳು ಕೇಳಇಬಂದಿತ್ತು. ಈ ವಿಡಿಯೋದಲ್ಲಿ ಮೋನಾಲಿಸಾ ವೈಟ್ ಟಾಪ್ ಮತ್ತೆ ಬ್ಲಾಕ್ ಜೀನ್ಸ್ ಹಾಕೊಂಡಿದ್ದರು. ಕೆಲವೊಮ್ಮೆ ಅವರು ಕೂದಲು ಸರಿ ಮಾಡ್ಕೋತಾರೆ, ಕೆಲವೊಮ್ಮೆ ಕ್ಯಾಮೆರಾ ನೋಡಿ ಪೋಸ್ ಕೊಡ್ತಾರೆ. ಸೋಶಿಯಲ್ ಮೀಡಿಯಾ ಯೂಸರ್ಸ್ ಅವರ ಹೊಸ ಲುಕ್ ನೋಡಿ ಕಮೆಂಟ್ ಮಾಡ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.