
ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ನೆಪೊಟಿಸಂ ವಿಚಾರದಲ್ಲಿ ಹೈಲೈಟ್ ಆದ ನಟಿ ಕಂಗನಾ ರಣಾವತ್ ಸದ್ಯ ತಮ್ಮ ಮುಂಬೈ ಬಂಗಲೆ, ಶಿವಸೇನೆ ಜೊತೆಗಿನ ಗುದ್ದಾಟ, ಸೋಷಿಯಲ್ ಮೀಡಿಯಾ ಪೋಸ್ಟ್‌ನಿಂದ ಹೈಲೈಟ್ ಆಗುತ್ತಿದ್ದಾರೆ.
ನಟಿ ಜಯಾಬಚ್ಚನ್ ಹಾಗು ಊರ್ಮಿಳಾ ಮಾಂಟೋಡ್ಕರ್ ವಿರುದ್ಧವೂ ಕಂಗನಾ ಹೇಳಿಕೆ ನೀಡಿದ್ದಾರೆ. ಸುಶಾಂತ್ ಪ್ರಕರಣದಲ್ಲಿ ಸಿಬಿಐ ಬೇಕೆಂದು ಆಗ್ರಹಿಸಿದ್ದ ನಟಿ ಕೃತಿ ಸೆನೋನ್ ಈಗ ಪ್ರಸ್ತುತ ಸ್ಥಿತಿಯ ಬಗ್ಗೆ ಮಾರ್ಮಿಕವಾಗಿ ಪೋಸ್ಟ್ ಹಾಕಿದ್ದಾರೆ.
ಜಯಾ ಬಚ್ಚನ್‌ಗೆ ತಿರುಗೇಟು: ನೀವು ನಮಗೆ ಅನ್ನ ಕೊಟ್ಟಿಲ್ಲ, ಇಂಡಸ್ಟ್ರಿ ಯಾರಪ್ಪನ ಆಸ್ತಿಯೂ ಅಲ್ಲ ಎಂದ 'ಶಕ್ತಿಮಾನ್'
ಅವರು ನಿಮಗಾಗಿ ಹೋರಾಡುತ್ತಾರೆ. ನಂತರ ಅವರವರೊಳಗೇ ಕಚ್ಚಾಡುತ್ತಾರೆ, ಮತ್ತು ಇದಿನ್ನು ನಿಮ್ಮ ಬಗೆಗಿನ ಹೋರಾಟವಲ್ಲ. ಇದು ಅವರ ಬಗೆಗೆ, ಯಾವತ್ತೂ ಅವರಿಗಾಗಿಯೇ ಹೋರಾಡಿದರೇನೋ ಎಂದು ಬರೆದಿರುವ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿದ್ದಾರೆ.
ನಟ ವರುಣ್ ಧವನ್, ಆಲಿಯಾ ಭಟ್, ಅರ್ಜುನ್ ಕಪೂರ್, ಪ್ರೀತಿ ಝಿಂಟಾ ಕೃತಿ ಪೋಸ್ಟ್ ಲೈಕ್ ಮಾಡಿದ್ದಾರೆ. ಕಂಗನಾ ಸೆಲೆಬ್ರಿಟಿಗಳ ಜೊತೆ ಜಗಳ ಮಾಡೋದಲ್ಲದೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಜೊತೆಗೂ ವಾಕ್ಸಮರ ನಡೆಸುತ್ತಿದ್ದಾರೆ. ಶಿವಸೇನೆ ಮೇಲೆಯೂ ನಟಿ ವಾಗ್ದಾಳಿ ನಡೆಸುತ್ತಲೇ ಇರುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.