ಬಾಲಿವುಡ್ ಬೋಲ್ಡ್ ಗರ್ಲ್ ಶೂಟಿಂಗ್ ಫೋಟೋ ಶೇರ್ ಮಾಡಿದ ನಿರ್ದೇಶಕ. ಸುಳ್ಳು ಸುದ್ದಿ ಹರಡಿಸುತ್ತಿರುವುದಕ್ಕೆ ನಿರ್ದೇಶಕನ ವಿರುದ್ಧ ಪೊಲೀಸ್ ಮೊರೆ ಹೋದ ನಟಿ....ಏನಿದು ?
ಬಾಲಿವುಡ್‌ನ ದಬಾಂಗ್ ಹುಡುಗಿ ಸೋನಾಕ್ಷಿ ಸಿನ್ಹಾ ತಿಂಗಳಿಗೊಂದು ಸಾರಿ ವಿವಾದಲ್ಲಿ ಸಿಲುಕಿ ಕೊಂಡಿರುತ್ತಾರೆ. ಕಾಂಟ್ರೋವರ್ಸಿ ಇವರ ಬೆಸ್ಟ್ ಫ್ರೆಂಡ್ ಎಂದೆನಿಸುತ್ತದೆ, ಎಂದು ಅಭಿಮಾನಿಗಳು ಹೇಳುತ್ತಲೇ ಇರುತ್ತಾರೆ.
ಮಹಾಮಾರಿ ಕೋರೋನಾ ವೈರಸ್ ಇರುವ ಕಾರಣ ಎಲ್ಲೆಡೆ ಬಿಗಿ ಭದ್ರತೆ ತೆಗೆದು ಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಭಾರತೀಯರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಲಾಕ್‌ಡೌನ್ ಅನ್ನು ಪ್ರಧಾನಿ ಮೋದಿ ಮತ್ತೆ ಮೇ 3ರವರೆಗೆ ವಿಸ್ತರಿಸಿದ್ದಾರೆ. ಸಿನಿಮಾ ತಾರೆಯರು, ಕುಟುಂಬಸ್ಥರ ಜೊತೆ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಆದರೆ ಇಲ್ಲೊಬ್ಬ ನಿರ್ದೇಶಕ ನಟಿ ಶೂಟಿಂಗ್ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡು, ಆಕೆಯನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.
ಹೌದು! ಬಾಲಿವುಡ್ ಬೋಲ್ಡ್ ಗರ್ಲ್ ಸೋನಾಕ್ಷಿ ಸಿನ್ಹಾ ಶೂಟಿಂಗ್ ಸೆಟ್‌ನಿಂದ ತೆರಳುತ್ತಿರುವ ಫೋಟೋವನ್ನು ನಿರ್ದೇಶಕ ವಿವೇಕ್ ಅಗ್ನಿ ಹೋತ್ರಿ ಶೇರ್ ಮಾಡಿಕೊಂಡು, 'ಇಂತಹ ಪರಿಸ್ಥತಿಯಲ್ಲಿ ಯಾರು ಶೂಟಿಂಗ್ ಮಾಡುತ್ತಾರೆ?' ಎಂದು ಟ್ಟೀಟ್ ಮಾಡಿದ್ದಾರೆ. ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸೋನಾಕ್ಷಿ ಪ್ರತಿಕ್ರಿಯೆ ನೀಡಿದ್ದಾರೆ. 'ನಿರ್ದೇಶಕನಾಗಿ, ಯೂನಿಯನ್ ಹಾಗೂ ಫಿಲ್ಮ್ ಚೇಂಬರ್ ಸದಸ್ಯನಾಗಿ ನಿಮಗೆ ತಿಳಿದಿರಬೇಕು ಇಂತಹ ಸಮಯದಲ್ಲಿ ಯಾರೂ ಶೂಟಿಂಗ್ ಮಾಡುವುದಿಲ್ಲ. ಸ್ಟುಡಿಯೋ ಮಾತ್ರವಲ್ಲ, ದೇಶವೇ ಲಾಕ್‌ಡೌನ್, ಎಂದು ಸೋನಾಕ್ಷಿ ಬರೆದು ಕೊಂಡಿದ್ದಾರೆ.
ಅಷ್ಟೇ ಅಲ್ಲದೇ 'ಮುಂಬೈ ಪೊಲೀಸರು ನನಗೆ ಇಂತಹ ಫೇಕ್ ನ್ಯೂಸ್ ಹರಡಿಸುವ ವ್ಯಕ್ತಿಗಳ ವಿರುದ್ಧ ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿ. ರೆಸ್ಪಾನ್ಸಿಬಲ್ ಸಿಟಿಜನ್ ಆಗಿ ಮನೆಯಲ್ಲೇ ಇದ್ದು, ಸೋಷಿಯಲ್ ಡಿಸ್ಟೆನ್ಸ್ ಪಾಲಿಸುತ್ತಿರುವ ನಾನು ಕೇಳುತ್ತಿರುವ ಪ್ರಶ್ನೆ ಇದು..' ಎಂದು ಪೊಲೀಸರ ಸಹಾಯಯಾಚಿಸಿದ್ದಾರೆ.
ತಕ್ಷಣವೇ ನಿರ್ದೇಶಕ ವಿವೇಕ್ ' ನಾನು ಉಲ್ಲೇಖಿಸಿರುವುದು ಅಷ್ಟೇ ಹೊರತು ನಿಮ್ಮ ಮೇಲೆ ಆರೋಪವಲ್ಲ. ನಿಮಗೆ ಏನಾದರೂ ಹೇಳುವುದಿದ್ದರೆ ನಿಮಗೆ ಟ್ಯಾಗ್ ಮಾಡುವೆ..' ಎಂದು ವಿವೇಕ್ ಪ್ರತಿಕ್ರಿಯೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.