'ಮಾಸ್ಟರ್‌' ಸಂಭ್ರಮ; ವಿಜಯ್‌ ದಳಪತಿ ಮುತ್ತಿಟ್ಟ ವಿಡಿಯೋ ವೈರಲ್!

Suvarna News   | Asianet News
Published : Mar 03, 2020, 04:04 PM IST
'ಮಾಸ್ಟರ್‌' ಸಂಭ್ರಮ; ವಿಜಯ್‌ ದಳಪತಿ ಮುತ್ತಿಟ್ಟ ವಿಡಿಯೋ ವೈರಲ್!

ಸಾರಾಂಶ

ಟಾಲಿವುಡ್‌ ಸೂಪರ್‌ ಸ್ಟಾರ್‌ ವಿಜಯ್‌ ಸೇತುಪತಿ ಹಾಗೂ ದಳಪತಿ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ 'ಮಾಸ್ಟರ್‌' ಚಿತ್ರೀಕರಣದ ಹಂತದಲ್ಲಿ ಸೆರೆ ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

2020ರ ಬಹು ನಿರೀಕ್ಷಿತ ಕಾಲಿವುಡ್‌ ಸಿನಿಮಾ 'ಮಾಸ್ಟರ್‌' ಫೆ.29 ರಂದು ಕೊನೆ ಹಂತದ ಚಿತ್ರೀಕರಣವನ್ನು ಮುಗಿಸಿದೆ. ಈ ವೇಳೆ ಚಿತ್ರತಂಡ  ಅಪರೂಪದ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದೆ. ಅದರಲ್ಲಿ ವಿಜಯ್‌ ಮುತ್ತಿಟ್ಟ ತುಣುಕು ಸಿಕ್ಕಾಪಟ್ಟೆ ವೈರಲ್‌ ಆಗಿದೆ. 

ಅಭಿಮಾನಿಗಳೇ ಆಗಲಿ, ಕುಟುಂಬಸ್ಥರೇ ಆಗಲಿ ಎಲ್ಲರಿಗೂ ಸಮನಾಗಿ ಪ್ರೀತಿ ತೋರಿಸಿ ಹಾರೈಸುವುದು ವಿಜಯ್ ಸೇತುಪತಿ ಗುಣ. ಅದರಂತೆ ವಿಜಯ್, ದಳಪತಿಯನ್ನು ಅಪ್ಪಿಕೊಂಡು ಮುತ್ತಿಟ್ಟಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ರೋಮಾಂಚನಗೊಂಡಿದ್ದಾರೆ. 

ಹೆಲ್ಮೆಟ್‌ ಇಲ್ಲದೆ ದೇವರಕೊಂಡ ಸ್ಟಂಟ್‌; ಅನನ್ಯ ಪಾಂಡೆ ಜೊತೆ ರೋಡಲ್ಲೇ ರೊಮ್ಯಾನ್ಸ್‌!

Xavier Britto ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಲೋಕೇಶ್‌ ಆ್ಯಕ್ಷನ್‌ ಕಟ್ ಹೇಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಬ್ಬರು ಕಾಲಿವುಡ್‌ ಸೂಪರ್‌ ಸ್ಟಾರ್‌ಗಳು ಒಂದೇ ಚಿತ್ರದಲ್ಲಿ ಮಿಂಚುತ್ತಿರುವುದು. ಫೆ. 14 ರಂದು ವಿಜಯ್ ಧ್ವನಿಯಲ್ಲಿ 'ಕುಟ್ಟಿ ಸ್ಟೋರಿ' ಬಿಡುಗಡೆ ಮಾಡಿದ್ದಾರೆ. ಶೀಘ್ರದಲ್ಲೇ ಸಿನಿಮಾ ರಿಲೀಸ್‌ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿಕೊಳ್ಳುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?