
ಕಾಲಿವುಡ್ ನಟ ತಲಾ ಅಜಿತ್ ಕುಮಾರ್‌ಗಿರುವ ಬೈಕ್ ಕ್ರೇಜ್ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ? ದುಬಾರಿ ಕಾರು ಹಾಗೂ ಬೈಕ್‌ಗಳನ್ನು ಹೊಂದಿರುವ ಅಜಿತ್ ಇದೀಗ ಸೈಕಲ್ ಸವಾರಿ ಶುರು ಮಾಡಿದ್ದಾರೆ. ಹೈದರಾಬಾದ್‌ನಲ್ಲಿ ಸೈಕಲ್ ಸವಾರಿ ಮಾಡುತ್ತಿರುವ ಫೋಟೋ ಹಂಚಿಕೊಂಡ ಸ್ನೇಹಿತ ಸುರೇಶ್ ಬರೆದಿರುವ ಸಾಲುಗಳಿವು...
'ಸಿನಿಮಾ ಸ್ಟಾರ್ ಆಗಿರಿ, ಸ್ಪೋರ್ಟ್ಸ್ ಸ್ಟಾರ್ ಆಗಿರಿ, ರಾಜಕಾರಣಿಯಾಗಿರಿ ಅಥವಾ IAS,IPS ಅಧಿಕಾರಿ...ಯಾjs ಆಗಿರಲಿ ಫೇಮ್, ಪವರ್, ಸಂಪತ್ತು ಅಥವಾ ಘನತೆ ಅಷ್ಟೇ ಅಲ್ಲ ಜೀವನ. ನಮ್ಮಂಥ ವ್ಯಕ್ತಿಗಳು ಕೂಡ ಪಬ್ಲಿಕ್ ಲೈಫ್‌ನಲ್ಲಿ ಇರುತ್ತೇವೆ. ಕೆಲವರು ಗಮನ ಸೆಳೆಯಬೇಕೆಂದು ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವರು ಪ್ರೈವೇಟ್ ಲೈಫ್ ಬೆಸ್ಟ್ ಎಂದು ಪ್ರಚಾರದಿಂದ ದೂರ ಸರಿಯುತ್ತಾರೆ. ಕೆಲವೊಮ್ಮೆ ಬೇಡವೆಂದರೂ ಕೆಲವರು ಪ್ರೈವೇಸಿ ಕಿತ್ತುಕೊಳ್ಳುತ್ತಾರೆ. ನನ್ನ 15 ವರ್ಷಗಳ ಸೈಕಲಿಂಗ್ ಅನುಭವದಲ್ಲಿ ಅಜಿತ್ ಒಂದು ಗಂಟೆ ಬಿಡುವು ಮಾಡಿಕೊಳ್ಳಲು ಎಷ್ಟು ಕಷ್ಟ ಪಡುತ್ತಾನೆಂದು ನಾನು ನೋಡಿರುವೆ. ಇದು ಅಜಿತ್ ಫೇವರೆಟ್ ಹವ್ಯಾಸ ಕೂಡ ಹೌದು. ಎಷ್ಟೇ ಬ್ಯುಸಿ ಇದ್ದರೂ ಸ್ಪೋಟ್ಸ್ ಬಗ್ಗೆ ಇರುವ ಕ್ರೇಜ್‌ಗೆ ಸಮಯ ಮಾಡಿಕೊಳ್ಳುತ್ತಾನೆ. ಇದೇನೂ ಮೊದಲಲ್ಲ, ಸೈಕಲ್ ಏರಿ ಹೈದರಾಬಾದ್, ವಿಶಾಖಪಟ್ಟಣಂ, ಕೊಯಮತ್ತೂರು, ಕೂರ್ಗ್, ತಿರುಪತಿ ಸೇರಿದಂತೆ ಹಲವು ಕಡೆ ಸವಾರಿ ಮಾಡಿದ್ದಾನೆ,' ಎಂದು ಅಜಿತ್ ಸ್ನೇಹಿತ ಸುರೇಶ್ ಬರೆದುಕೊಂಡಿದ್ದಾರೆ.
ರಸ್ತೆ ಬದಿ ಇಡ್ಲಿ ಮಾರುತ್ತಿದ್ದ ವ್ಯಕ್ತಿಗೆ 1 ಲಕ್ಷ ರೂ ನೀಡಿದ ಅಜಿತ್, ಕಾರಣ ಸಖತ್ ಟ್ರೆಂಡಿಂಗ್!
'ಅಜಿತ್ ಒಂದು ಕೆಲಸ ಹಿಡಿದುಕೊಂಡರೆ ಅದಕ್ಕೆಂದೇ ಪೂರ್ತಿ ಬದ್ಧರಾಗುವ ಅಜಿತ್ ಶ್ರಮದ ಬಗ್ಗೆ ನನಗೆ ಗೌರವವಿದೆ. ಇಬ್ಬರು ಒಟ್ಟಿಗೆ ಸುಮಾರು 30 ಸಾವಿರಕ್ಕೂ ಹೆಚ್ಚು ಕಿಮೀ. ಸವಾರಿ ಮಾಡಿದ್ದೀವಿ. ಜೀವನದಲ್ಲಿ ಒಂದಾದರೂ ಹವ್ಯಾಸ ಇರಬೇಕೆಂದು ಈತನಿಂದ ನಾನು ಕಲಿತಿದ್ದೇನೆ. ಜೀವನ ಡಿಸಿಪ್ಲಿನ್ ಆಗುತ್ತದೆ ಹಾಗೂ ಸುಲಭವಾಗುತ್ತದೆ,' ಎಂದು ಸುರೇಶ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.