
ಕಾಲಿವುಡ್ ಮಾಸ್ ಹೀರೋ, ಹುಡುಗಿಯರ ನಿದ್ದೆ ಕದ್ದ ಲವರ್ ಬಾಯ್ ನಟ ಕಾರ್ತಿ 2020 ಅಕ್ಟೋಬರ್ ತಿಂಗಳಲ್ಲಿ ಕುಟುಂಬಕ್ಕೆ ಎರಡನೇ ಮಗು ಬರ ಮಾಡಿಕೊಂಡಿರುವ ವಿಚಾರವನ್ನು ಹಂಚಿಕೊಂಡಿದ್ದರು. ಇದೀಗ ಅದ್ಧೂರಿಯಾಗಿ ನಾಮಕರಣ ಮಾಡುವ ಮೂಲಕ ಪುತ್ರನ ಹೆಸರನ್ನು ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿದ್ದಾರೆ.
ಗುಡ್ ನ್ಯೂಸ್; ಗಂಡು ಮಗುವಿಗೆ ತಂದೆಯಾದ ನಟ ಕಾರ್ತಿ
ಪುತ್ರನ ಪುಟ್ಟ ಕೈ ಫೋಟೋ ಶೇರ್ ಮಾಡಿಕೊಂಡು, 'ನಿನ್ನ ತಾಯಿ, ಅಕ್ಕ ಮತ್ತು ನಾನು ನಿನಗೆ ಕಂದನ್ ಎಂದು ಹೆಸರಿಟ್ಟಿದೀವೆ. ನಿನ್ನ ಆಗಮನದಿಂದ ನಮ್ಮ ಕುಟುಂಬದಲ್ಲಿ ಮತ್ತಷ್ಟು ಸಂತೋಷ ತುಂಬಿರಲಿ. ನಿನ್ನ ಪ್ರೀತಿಯ ಅಪ್ಪ,' ಎಂದು ಬರೆದಿದ್ದಾರೆ.
ಅಕ್ಟೋಬರ್ 21ರಂದು ಜನಿಸಿದ ಪುಟ್ಟ ಕಂದಮ್ಮನ ಹೆಸರಿನ ಅರ್ಥ ಏನು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿ, ಪ್ರಶ್ನಿಸುತ್ತಿದ್ದಾರೆ. ತಮಿಳಿನಲ್ಲಿ ಕಂದನ್ ಎಂದರೆ ಪ್ರಸಿದ್ಧ ಮುರುಗನ್ ದೇವರ ಹೆಸರು. ಕಾರ್ತಿ ಹೆಸರೂ ಕೂಡ ಕಾರ್ತಿಕೇಯನ್. ಮುರುಗನ್ ಆಶೀರ್ವಾದ ಇದಾ ಹೀಗೆ ಇರಲಿ ಎಂದು ಪುತ್ರಿಗೂ ದೇವರ ಹೆಸರಿನಿಟ್ಟಿದ್ದಾರೆ.
ಪಕ್ಕಾ ಹಳ್ಳಿ ಹುಡುಗಿಯಾಗಿ ರಶ್ಮಿಕಾ: ಕಿರಿಕ್ ಚೆಲುವೆಯ ಕ್ಯೂಟ್ ಲುಕ್
2011ರಲ್ಲಿ ಕಾರ್ತಿ ಹಾಗೂ ರಂಜನಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2013ರಲ್ಲಿ ಮುದ್ದಾದ ಹೆಣ್ಣು ಮಗಳನ್ನು ಬರ ಮಾಡಿಕೊಂಡರು. 2020ರಲ್ಲಿ ಪುತ್ರನ ಎಂಟ್ರಿ ಕೂಡ ಆಗಿದೆ. ಇದೀಗ ಕಾರ್ತಿ ಫ್ಯಾಮಿಲಿ ಕಂಪ್ಲೀಟ್ ಆದಂತಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.