ಮದುವೆಯಾಗಿ 7 ವರ್ಷಗಳ ನಂತರ ವಿಚ್ಛೇದನಕ್ಕೆ ಮುಂದಾದ ಹಾಟ್ ರಿಯಾಲಿಟಿ ಕಪಲ್ ಕಿಮ್ ಆ್ಯಂಡ್ ಕ್ಯಾನೆ. ಕಾರಣವೇನು?
ಅಮೆರಿಕದ ಪ್ರಖ್ಯಾತ ಕಿರುತೆರೆ ನಟಿ ಕಿಮ್ ಕಾರ್ದಾಶಿಯನ್ ಹಾಗೂ Rapper ಕ್ಯಾನೆ ಡಿವೋರ್ಸ್ ವಿಚಾರ ಅಭಿಮಾನಿಗಳಿಗೆ ಶಾಕ್ ನೀಡಿದೆ. ದಿ ಬೆಸ್ಟ್ ಕಪಲ್ ಗೋಲ್ಸ್ ಕೊಡುತ್ತಿದ್ದ ಜೋಡಿ, ಇದ್ದಕ್ಕಿದ್ದಂತೆ ಡೀವೋರ್ಸ್ ನೀಡಲು ನಿರ್ಧರಿಸಿದ್ದೇಕೆ?
ಫ್ಯಾಷನ್ ಶೋಗೆ ಬಂದಿದ್ದ ನಟಿಯ ಡ್ರೆಸ್ ಹರಿದು ಬಿತ್ತು!
2012ರಲ್ಲಿ ಕಿಮ್ ಹಾಗೂ ರ್ಯಾಪರ್ ಕ್ಯಾನೆ ಡೇಟ್ ಮಾಡುತ್ತಿದ್ದರು. ಮಾಜಿ ಪತಿಯಿಂದ ವಿಚ್ಛೇದನ ಪಡೆದ ನಂತರ ಅಂದೇ ನಿಶ್ಛಿತಾರ್ಥ ಮಾಡಿಕೊಂಡರು. ಮೇ 24, 2012ರಲ್ಲಿ ಅದ್ಧೂರಿಯಾಗಿ ಮದುವೆಯಾದರು. ವಿದೇಶದಲ್ಲಿರುವ ಅತಿ ದುಬಾರಿ ಡಿಸೈನರ್ ಬಟ್ಟೆಯನ್ನೇ ಮದುವೆಗೆ ಆಯ್ಕೆ ಮಾಡಿಕೊಂಡಿದ್ದು ಎಲ್ಲರಿಗೂ ಅಚ್ಚರಿಯ ವಿಚಾರ. ಇಬ್ಬರು ಸ್ಟಾರ್‌ಗಳಾಗಿದ್ದ ಕಾರಣ ಏನೇ ಮಾಡಿದ್ದರೂ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿತ್ತು.
ಇದೀಗ ಕೆಲವು ವರ್ಷಗಳಿಂದ ಕಿಮ್ ಹಾಗೂ ಕ್ಯಾನೆ ಒಟ್ಟಿಗಿಲ್ಲ, ಕಿಮ್ ಮದುವೆ ಉಂಗುರ ಹಾಗೂ ಮದುವೆ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳಿಂದ ಡಿಲೀಟ್ ಮಾಡಿದ್ದಾರೆ. ಇಬ್ಬರ ನಡುವೆ ಮನಸ್ತಾಪವಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದರು ಆದರೆ ಇದರ ಬಗ್ಗೆ ಯಾವುದೇ ಸ್ಪಷ್ಟನೆ ಇರಲಿಲ್ಲ. ಆದರಿಂದು ಇಬ್ಬರು ವಿಚ್ಛೇದನಕ್ಕೆ ಸಹಿ ಮಾಡಲು ಮುಂದಾಗಿರುವ ವಿಚಾರ ಬಗ್ಗೆ ಬಹಿರಂಗ ಮಾಡಿದ್ದಾರೆ.
ಗ್ಲಾಸ್ ಮಾರಲು ನಟಿ ಧರಿಸಿದ ಹಾಟ್ ಡ್ರೆಸ್ ವೈರಲ್!
ಕಿಮ್ ಸಂಬಂಧ:
ಕಿಮ್ ಕಾರ್ದಾಶಿಯನ್‌ಗೆ ಕ್ಯಾನೆ ನಾಲ್ಕನೆ ಗಂಡ. 19 ವರ್ಷದಿದ್ದಾಗಲೇ ಕಿಮ್ ಸಂಗೀತ ನಿರ್ದೇಶಕ ಡಮನ್ ಥಾಮಸ್ ಜೊತೆ ಮದುವೆಯಾದರು. ಇಬ್ಬರು ನಡುವೆ ದೈಹಿಕ ಮತ್ತು ಭಾವನಾತ್ಮಕ ನಿಂದನೆ ಇದ್ದ ಕಾರಣ ವಿಚ್ಛೇದನ ಪಡೆದುಕೊಂಡರು. ಈ ಮದುವೆಗೂ ಮುನ್ನ ಗಾಯಕ ರೇ ಜೆನ್ ಅವರೊಂದಿಗೆ ಕಿನ್ ಡೇಟ್ ಮಾಡುತ್ತಿದ್ದಳು ಎಂಬ ಮಾತುಗಳಿದೆ. ಡಮನ್ ಥಾಮಸ್ ನಂತರ ಮೇ 2011ರಲ್ಲಿ ಆಟಗಾರ ಕ್ರಿಸ್ ಹಂಫ್ರೈಸ್ ಜೊತೆ ನಿಶ್ಛಿತಾರ್ಥ ಮಾಡಿಕೊಂಡರು. ಮದುವೆಯಾದ 72 ದಿನಗಳ ನಂತರ ವಿಚ್ಛೇದನ ಪಡೆದುಕೊಂಡರು. ಸಂಬಂಧಗಳ ಬಗ್ಗೆ ನಂಬಿಕೆ ಕಳೆದುಕೊಂಡಿದ್ದ ಕಿಮ್ ಬಾಳಿಗೆ 2012ರಲ್ಲಿ ಬೆಳಕಾಗಿ ಬಂದದ್ದು ಕ್ಯಾನೆ. ಕಿಮ್ ಹಾಗೂ ಕ್ಯಾನೆಗೆ ನಾಲ್ವರು ಮಕ್ಕಳಿದ್ದಾರೆ. ಮಕ್ಕಳು ತಾಯಿ ಜೊತೆ ಇರುತ್ತಾರಾ ಅಥವಾ ತಂದೆ ಜೊತೆ ನಾ ಎಂದು ಶೀಘ್ರದಲ್ಲಿ ತಿಳಿದು ಬರಲಿದೆ.