
ಹುಡುಕಿದರೆ ಒಂದಷ್ಟುನಟರು ಸಿಕ್ಕಬಹುದು. ಆದರೆ ನಟಿಯರು ಸಿಗುವುದು ಕಡಿಮೆ. ಇದಕ್ಕೆ ಮುಖ್ಯ ಕಾರಣ ಬಹುತೇಕ ನಟಿಯರು ಮದುವೆಯ ನಂತರ ನಾಪತ್ತೆಯಾಗುವುದು. ಅಥವಾ ಅವರಿಗೆ ಅವಕಾಶಗಳು ಸಿಗದೇ ಹೋಗುವುದು, ಸಿಕ್ಕರೂ ಪೋಷಕ ಪಾತ್ರಗಳು. ಅದೇ ಕಾರಣಕ್ಕೆ ಬಾಲಿವುಡ್ ಸೇರಿದಂತೆ ಬಹುತೇಕ ಚಿತ್ರರಂಗಳಲು ಮದುವೆಯಾದ ನಟಿಯರಿಗೆ ಹೆಚ್ಚು ಅವಕಾಶ ಕೊಡುವುದಿಲ್ಲ ಎನ್ನುವ ಮಾತಿದೆ.
ಇದ್ದರೆ ಅಮ್ಮ- ಮಗಳು ಕರೀನಾ- ಸಾರಾ ರೀತಿ ಇರಬೇಕಪ್ಪ!
ಆದರೆ ಇದು ಶುದ್ಧ ಕಲ್ಪನೆ. ಪ್ರತಿಭೆ, ನಮ್ಮಲ್ಲಿ ಉತ್ಸಾಹ ಇದ್ದರೆ ಖಂಡಿತ ಅವಕಾಶಗಳು ಸಿಗುತ್ತವೆ ಎಂದು ಕರೀನಾ ಕಪೂರ್ ಖಾನ್ ಹೇಳುವ ಮೂಲಕ ಬಾಲಿವುಡ್‌ನ ಗುಟ್ಟೊಂದನ್ನು ಬಿಚ್ಚಿಟ್ಟಿದ್ದಾರೆ. ‘ನಾನು ಮದುವೆಯಾದ ನಂತರವೂ ದೊಡ್ಡ ಸ್ಟಾರ್ ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದೇನೆ.
ಫಿಟ್ ನಟಿ ಕರೀನಾಳ 8 ಮೀಲ್ ಡಯಟ್ ಪ್ಲ್ಯಾನ್ ಇದು!
ಲೀಡ್ ರೋಲ್ ಮಾಡಿದ್ದೇನೆ. ವಿದ್ಯಾಬಾಲನ್ ಈಗಲೂ ತಮ್ಮ ಸ್ಟಾರ್‌ಡಮ್ ಉಳಿಸಿಕೊಂಡಿದ್ದಾರೆ. ಇನ್ನು ಹಲವಾರು ನಟಿಯರು ಮದುವೆಯ ನಂತರವೂ ನಟಿಸುತ್ತಿದ್ದಾರೆ. ಹಾಗಾಗಿ ಬಾಲಿವುಡ್ ಅವಿವಾಹಿತ ನಟಿಯರಿಗಷ್ಟೇ ಅವಕಾಶ ನೀಡುತ್ತಿದೆ ಎನ್ನುವುದು ಕೇವಲ ಕಲ್ಪನೆ’ ಎಂದು ಹೇಳಿದ್ದಾರೆ. ಆ ಮೂಲಕ ಇಂದು ಬಾಲಿವುಡ್‌ನಲ್ಲಿ ಹಿಂದೆ ಇದ್ದ ಪರಿಸ್ಥಿತಿ ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.