ನೀತಾ ಅಂಬಾನಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರ್ಜರಿ ಭೋಜನ; ಊಟದ ಫೋಟೋ ಶೇರ್ ಮಾಡಿದ ನಟಿ

Published : Apr 02, 2023, 04:49 PM ISTUpdated : Apr 05, 2023, 03:14 PM IST
ನೀತಾ ಅಂಬಾನಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರ್ಜರಿ ಭೋಜನ; ಊಟದ ಫೋಟೋ ಶೇರ್ ಮಾಡಿದ ನಟಿ

ಸಾರಾಂಶ

ನೀತಾ ಅಂಬಾನಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭರ್ಜರಿ ಭೋಜನದ ವ್ಯವಸ್ಥೆ ಇತ್ತು. ನಟಿ ಮಹೀಪ್ ಕಪೂರ್ ಊಟದ ಫೋಟೋ ಶೇರ್ ಮಾಡಿದ್ದು ವೈರಲ್ ಆಗಿದೆ. 

ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC)ನಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.  ಇಂಡಿಯಾ ಇನ್ ಫ್ಯಾಶನ್ ಪ್ರದರ್ಶನಕ್ಕೆ ಬಾಲಿವುಡ್ ಮತ್ತು ಹಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಬಾಲಿವುಡ್‌ನ ಅನೇಕ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ರೇಖಾ, ಶಾರುಖ್ ಖಾನ್, ಪ್ರಿಯಾಂಕಾ ಚೋಪ್ರಾ, ಐಶ್ವರ್ಯ ರೈ, ಕರೀನಾ ಕಪೂರ್, ಆಲಿಯಾ ಭಟ್, ಮಹೀಪ್ ಕಪೂರ್, ರಣವೀರ್ ಸಿಂಗ್, ಝೆಂಡಯಾ, ಟಾಮ್ ಹಾಲೆಂಡ್ ಮತ್ತು ಪೆನೆಲೋಪ್ ಕ್ರೂಜ್ ಎರಡು ದಿನಗಳ ಈವೆಂಟ್‌ನಲ್ಲಿ ಹಾಜರಾಗಿದ್ದರು. 

ಕಲಾವಿದರ ಡಾನ್ಸ್, ಡ್ರೆಸ್, ಕ್ಯಾಮರಾಗೆ ಪೋಸ್ ನೀಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ನಡುವೆ ಊಟದ ಮೆನು ನೋಡುಗರ ಗಮನ ಸೆಳೆಯುತ್ತಿದೆ. ಹೌದು ಅಂಬಾನೆ ಮನೆ ಕಾರ್ಯಕ್ರಮ ಅಂದ್ಮೇಲೆ ಹೇಳಬೇಕಾ. ಎಲ್ಲಾ ಅದ್ದೂರಿಯಾಗಿಯೇ ಇರುತ್ತೆ. ಊಟ ಕೂಡ ಭರ್ಜರಿಯಾಗಿಯೇ ಇರುತ್ತದೆ. ನಟಿ ಮಹೀಪ್ ಕಪೂರ್ ಊಟದ ಫೋಟೋವನ್ನು ಶೇರ್ ಮಾಡಿದ್ದಾರೆ. ಬೆಳ್ಳಿ ತಟ್ಟೆಯ ತುಂಬಾ ಇರುವ ಬಗೆಬಗೆ ತಿನಿಸಿಗಳು ಬಾಯಲ್ಲಿ ನೀರು ಬರಿಸುವಂತಿದೆ. 



ಬಾಲಿವುಡ್ ವಿರುದ್ಧ ಗುಡುಗಿದ ಬೆನ್ನಲ್ಲೇ ಕರಣ್ ಜೋಹರ್ ತಬ್ಬಿ ಅಭಿನಂದಿಸಿದ ಪ್ರಿಯಾಂಕಾ; ವಿಡಿಯೋ ವೈರಲ್

ಈವೆಂಟ್‌ನಲ್ಲಿ ರಶ್ಮಿಕಾ-ಆಲಿಯಾ ಡಾನ್ಸ್ 

ರಶ್ಮಿಕಾ ಬಾಲಿವುಡ್ ನಟಿ ಅಲಿಯಾ ಭಟ್ ಜೊತೆ ಸೇರಿ ಭರ್ಜರಿ ಡಾನ್ಸ್ ಮಾಡಿದ್ದಾರೆ. ಅಲಿಯಾ ಭಟ್ ಮತ್ತು ರಶ್ಮಿಕಾ ಮಂದಣ್ಣ ಇಬ್ಬರ ಡಾನ್ಸ್ ಈಗ ವೈರಲ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದೆ. ಇಬ್ಬರೂ ಸ್ಟಾರ್ಸ್ ಸೂಪರ್ ಹಿಟ್ ಆಸ್ಕರ್ ಪ್ರಶಸ್ತಿ ವಿಜೇತ ಆರ್ ಆರ್ ಆರ್ ಸಿನಿಮಾದ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರಶ್ಮಿಕಾ ಮತ್ತು ಆಲಿಯಾ ಇಬ್ಬರನ್ನೂ ಒಟ್ಟಿಗೆ ಸ್ಟೇಜ್ ಮೇಲೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.  ಅಲಿಯಾ ಭಟ್ ಹೈಹೀಲ್ಸ್ ಧರಿಸಿದ್ದರು. ಹೈ ಹೀಲ್ಸ್ ಅನ್ನು ವೇದಿಕೆ ಮೇಲೆಯೆ ಬಿಚ್ಚಿಟ್ಟು ಡಾನ್ಸ್ ಮಾಡಿದ್ದಾರೆ.

NMACC ಗ್ರ್ಯಾಂಡ್ ಓಪನಿಂಗ್: ಶಾರುಖ್ ಕುಟುಂಬದೊಂದಿಗೆ ಪೋಸ್ ನೀಡಿದ ಸಲ್ಮಾನ್ ಖಾನ್

ಪ್ರಿಯಾಂಕಾ-ರಣ್ವೀರ್ ಡಾನ್ಸ್ 

ಪ್ರಿಯಾಂಕಾ ಚೋಪ್ರಾ ಮತ್ತು ರಣ್ವೀರ್ ಸಿಂಗ್ ಇಬ್ಬರೂ ಮಸ್ತ್ ಡಾನ್ಸ್ ಮಾಡಿದ್ದಾರೆ. ಇಬ್ಬರ ಡಾನ್ಸ್ ವಿಡಿಯೋ ಕೂಡ ವೈರಲ್ ಆಗಿದೆ. ನೀತಾ ಅಂಬಾನಿ ಕಾರ್ಯಕ್ರಮಕ್ಕಾಗಿ ಪ್ರಿಯಾಂಕಾ ಚೋಪ್ರಾ ಅಮೆರಿಕಾದಿಂದ ಭಾರತಕ್ಕೆ ಬಂದಿದ್ದಾರೆ. ಮೊದಲ ಬಾರಿಗೆ ಮಾಗಳು ಮಾಲ್ತಿ ಮೇರಿ ಜೊತೆ ತವರಿಗೆ ಬಂದಿಳಿದಿದ್ದಾರೆ. ನಿಕ್ ಜೊತೆ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ ಪ್ರಿಯಾಂಕಾ ಮಸ್ತ್ ಎಂಜಾಯ್ ಮಾಡುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!