
ಬಾಲಿವುಡ್ ಸ್ಟಾರ್ ನಟರು ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ 'ಸೂರ್ಯವಂಶಿ' ಚಿತ್ರ ಪ್ರಚಾರದಲ್ಲೂ ದಿನೇ ದಿನೇ ಬಿ-ಟೌನ್‌ನಲ್ಲಿ ಹೊಸ ಗಾಸಿಪ್ ಸೃಷ್ಟಿಯಾಗುತ್ತವೆ.
ಕಿರುತೆರೆಯ ಖ್ಯಾತ ಮನೋರಂಜನಾ ಶೋ ಅಂದ್ರೆ 'ದಿ ಕಪಿಲ್ ಶರ್ಮಾ' ಶೋ. ಇತ್ತೀಚಿಗೆ ನಿರ್ದೇಶಕ ರೋಹಿತ್ ಹಾಗೂ ಪ್ರಮುಖ ಪಾತ್ರಧಾರಿ ಅಕ್ಷಯ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಿರ್ದೇಶಕ ರೋಹಿತ್ ಅವರನ್ನು ಕಪಿಲ್ ಪ್ರಶ್ನಿಸುತ್ತಾರೆ..
33 ವರ್ಷಗಳ ಬಳಿಕ ಹೀಗಿದ್ದಾರೆ ಟೀವಿಯ ರಾಮ, ಸೀತೆ, ಲಕ್ಷ್ಮಣ!
'ಅಜಯ್ ದೇವಗನ್ ಜೊತೆ 'ಸಿಂಗಮ್' ಚಿತ್ರ ಮಾಡಿದ್ದಾರೆ ನಿರ್ದೇಶಕ ರೋಹಿತ್, ರಣವೀರ್ ಸಿಂಗ್ ಜೊತೆ 'ಸಿಂಬಾ' ಮಾಡಿದ್ದಾರೆ. ಈ ಎರಡು ಹಿಟ್ ಚಿತ್ರದಲ್ಲಿ ಇಲ್ಲದೇ ಇರುವ ಯಾವ ವಿಚಾರ ನೀವು 'ಸೂರ್ಯವಂಶಿ'ಯಲ್ಲಿ ತೋರಿಸಿದ್ದೀರಾ? ಸಿನಿ ಪ್ರೇಕ್ಷಕರು ಅಕ್ಷಯ್ ಆ ಎರಡು ಹಿಟ್ ಸಿನಿಮಾಗಳನ್ನು ಹಿಂದಿಕ್ಕುತ್ತಾರೆಂದು ಹೇಳುತ್ತಿದ್ದಾರಲ್ಲಾ?' ಎಂದು ಪ್ರಶ್ನಿಸಿದಾಗ, ರೋಹಿತ್ 'ಅಕ್ಷಯ್ ತುಂಬಾ ಶ್ರಮ ಜೀವಿ. ಹಾರ್ಡ್ ವರ್ಕ್ ಮಾಡುತ್ತಾರೆ ' ಎಂದು ಹೇಳಿ ಹಾರಿಕೆ ಉತ್ತರ ನೀಡಿದ್ದಾರೆ.
ಮಾತನ್ನು ಅಲ್ಲಿಗೇ ನಿಲ್ಲಿಸದ ಟಾಕಿಂಗ್ ಟಾಮ್ ಕಪಿಲ್, 'ಅಕ್ಷಯ್ ಕುಮಾರ್ ಕೈಯಲ್ಲಿ ಆಗಲೇ 8 ಸಿನಿಮಾಗಳಿವೆ. ನಮ್ಮಂತ ಕಲಾವಿದರ ಸಣ್ಣ ಪುಟ್ಟ ಅವಕಾಶಗಳನ್ನೂ ಕಸಿದುಕೊಳ್ಳುತ್ತಾರೆ. ಏನೋ ಈ ವರ್ಷವೊಂದು ಜಾಹೀರಾತಿನಲ್ಲಿ ಮಾಡಿದ್ದೀನಿ, ನೋಡೋಣಾ ಮುಂದಿನ ವರ್ಷ ನನ್ನ ಕರಿತಾರೋ ಅಥವಾ ಅಕ್ಷಯ್ ಅವರನ್ನು ಕರೀತಾರೋ?' ಎಂದು ಅಕ್ಷಯ್ ಕಾಲೆಳೆದಿದ್ದಾರೆ. ಇದೇ ಇದೀಗ ಬಾಲಿವುಡ್‌ನಲ್ಲಿ ಸುದ್ದಿಯಾಗುತ್ತಿದೆ.
ಕಪಿಲ್ ಶರ್ಮಾ ಶೋನಲ್ಲಿ 5 ನಿಮಿಷಕ್ಕೆ 5 ಲಕ್ಷ ಪಡೆಯೋ 'ಟೀ ಸ್ಟಾಲ್ ಮಾಲೀಕ' ಚಂದನ್!
ಕಪಿಲ್ ಶರ್ಮಾ ಶೋನಲ್ಲಿ ಏನೇ ಸಂವಾದ ನಡೆದರೂ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ. ನಿಜಕ್ಕೂ ಅಕ್ಷಯ್ ಕುಮಾರ್ ಕೈಯಲ್ಲಿ 8 ಸಿನಿಮಾಗಳು ಇವ್ಯಾ? ಸಣ್ಣ ಪುಟ್ಟ ಕಲಾವಿದರೂ ಜೀವನ ಮಾಡಲು ಜಾಹೀರಾತಿನಮೊರೆ ಹೋಗುತ್ತಾರೆ. ಅಂಥ ಜಾಹೀರಾತುಗಳನ್ನೂ ಅಕ್ಷಯ್ ನಟಿಸುತ್ತಾರಾ? ಇದೇನಪ್ಪಾ ಸ್ಟಾರ್ ನಟ ಬೇರೆ ಕಲಾವಿದರಿಗೆ ಅವಕಾಶವೇ ಕೊಡೋಲ್ವಾ? ಹಿಂಗೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ.
ಅಜಯ್ ದೇವಗನ್, ಅಕ್ಷಯ್ ಕುಮಾರ್, ಕತ್ರೀನಾ ಕೈಫ್, ರಣವೀರ್ ಸಿಂಗ್, ಕರಣ್ ಜೋಹಾರ್ ಅಭಿನಯನದ 'ಸೂರ್ಯವಂಶಿ' ಶೀಘ್ರವೇ ತೆರೆ ಮೇಲೆ ಬರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.