
ಬಾಲಿವುಡ್‌ನಲ್ಲಿ ಸಿನಿಮಾ ನಿರ್ದೇಶಿಸಲಿರುವ ಲೂಸಿಯಾ ಪವನ್ ಕುಮಾರ್
ನಿರ್ದೇಶಕ ಲೂಸಿಯಾ ಪವನ್ ಕುಮಾರ್ (Lucia Pawan Kumar) ಬಾಲಿವುಡ್ ಅಂಗಳಕ್ಕೆ ಪ್ರವೇಶಿಸುತ್ತಿರುವ ಸುದ್ದಿ ಬಂದಿದೆ. ಈಗಾಗಲೇ ಹಿಂದಿಯ ವೆಬ್ ಸರಣಿಯಲ್ಲಿ ಕೆಲ ಎಪಿಸೋಡ್‌ಗಳನ್ನು ನಿರ್ದೇಶಿಸಿರುವ ಪವನ್ ಕುಮಾರ್, ಈಗ ಪೂರ್ಣ ಪ್ರಮಾಣದಲ್ಲಿ ಹಿಂದಿ ಸಿನಿಮಾ ನಿರ್ದೇಶನ ಮಾಡುವ ಉದ್ದೇಶದಿಂದ ಮುಂಬೈ ಬಾಗಿಲು ತಟ್ಟಿದ್ದಾರೆ. ಅವರ ಹಿಂದಿ ಚಿತ್ರಕ್ಕೆ ಮನೀಶ್ ತ್ರೆಹನ್ ಅವರು ನಿರ್ಮಾಪಕರಾಗುತ್ತಿದ್ದಾರೆ. ಇವರು ಈಗಾಗಲೇ ‘ಜಮ್ತಾರ’ ಎನ್ನುವ ಜನಪ್ರಿಯ ವೆಬ್ ಸರಣಿ ನಿರ್ಮಿಸಿದವರು. ಈಗ ಪವನ್ ಚಿತ್ರಕ್ಕೆ ಜೊತೆಯಾಗುತ್ತಿದ್ದಾರೆ.
ಪವನ್ ಕುಮಾರ್ ಹಾಗೂ ನಿರ್ಮಾಪಕ ಮನೀಶ್ ತ್ರೆಹನ್ ಅವರು ಪರಸ್ಪರ ಭೇಟಿ ಆಗಿರೋ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ. ಅಂದಹಾಗೆ ಇತ್ತೀಚೆಗೆ ನಿರ್ದೇಶಕರಾದ ಹರ್ಷ, ಹರಿ ಸಂತು, ಪವನ್ ಒಡೆಯರ್ ಅವರು ಬಾಲಿವುಡನಲ್ಲಿ ತಮ್ಮ ನಿರ್ದೇಶನದ ಪ್ರತಿಭೆ ತೋರಿದ್ದಾರೆ. ಈಗ ಲೂಸಿಯಾ ಪವನ್ ಕುಮಾರ್ ಪೂರ್ಣ ಪ್ರಮಾಣದಲ್ಲಿ ಹಿಂದಿ ಚಿತ್ರಕ್ಕೆ ನಿರ್ದೇಶಕರಾಗುತ್ತಿದ್ದಾರೆ.
ಪವನ್ ಕುಮಾರ್ ಅವರು ಕನ್ನಡದಲ್ಲಿ ನಿರ್ದೇಶಿಸಿದ್ದ ಲೂಸಿಯಾ ಚಿತ್ರವು ತನ್ನ ವಿಭಿನ್ನ ಕಂಟೆಂಟ್ ಮೂಲಕ ದೇಶದೆಲ್ಲೆಡೆ ಸದ್ದು ಮಾಡಿತ್ತು. ಕನ್ನಡ ಸಿನಿಮಾರಂಗದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದ ಲೂಸಿಯಾ ಚಿತ್ರವು ದೇಶದಲ್ಲಿ ಹಲವು ನಿರ್ದೇಶಕರು ಕುಳಿತು ಸಿನಿಮಾ ನೋಡುವಂತೆ ಮಾಡಿತ್ತು. ಆದರೆ, ನಿರೀಕ್ಷಿಸಿದಂತೆ ನಿರ್ದೇಶಕ ಪವನ್ ಕುಮಾರ್ ಅವರು ಅದ್ಯಾಕೋ ಕನ್ನಡದಲ್ಲಿ ಮತ್ತೆಮತ್ತೆ ಸಿನಿಮಾ ಮಾಡಲು ಸಾಧ್ಯವಾಗಲೇ ಇಲ್ಲ. ಆದರೆ, ಹಿಂದಿಯಲ್ಲಿ ಆಕ್ಟಿವ್ ಆಗಿದ್ದು, ವೆಬ್ ಸಿರೀಸ್ ಮಾಡಿದ್ದಾರೆ. ಹಾಗೂ, ಈಗ ಸಿನಿಮಾ ನಿರ್ದೇಶನಕ್ಕೂ ಸಜ್ಜಾಗಿದ್ದಾರೆ. ಈ ಮೂಲಕ ಹೊಸ ಹೆಜ್ಜೆಯಿಟ್ಟು ಯಶಸ್ಸಿನ ಪ್ರಯಣಕ್ಕೆ ಸಜ್ಜಾಗಿದ್ದಾರೆ ಪವನ್ ಕುಮಾರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.