ತೆಲುಗು ಸ್ಟಾರ್ ಬಾಲಯ್ಯ ಸಿನಿಮಾಗೆ ಕನ್ನಡತಿ ಶ್ರೀಲೀಲಾ ನಾಯಕಿ

Published : May 22, 2022, 04:04 PM IST
ತೆಲುಗು ಸ್ಟಾರ್ ಬಾಲಯ್ಯ ಸಿನಿಮಾಗೆ ಕನ್ನಡತಿ ಶ್ರೀಲೀಲಾ ನಾಯಕಿ

ಸಾರಾಂಶ

ಕನ್ನಡದ ಯಂಗ್ ಆಂಡ್ ಬ್ಯೂಟಿಫುಲ್ ನಟಿ ಶ್ರೀಲೀಲಾ(Sreeleela) ಟಾಲಿವುಡ್ ಸ್ಟಾರ್ ಬಾಲಯ್ಯ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಶ್ರೀಲೀಲಾ, ಬಾಲಯ್ಯ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ತೆಲುಗು ಸ್ಟಾರ್ ನಟ ಬಾಲಯ್ಯ(Balayya) ಸದ್ಯ ಹೊಸ ಸಿನಿಮಾದಲ್ಲಿ ಬ್ಯಸಿಯಾಗಿದ್ದಾರೆ, ಕಳೆದ ವರ್ಷ ಅಖಂಡ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಬಾಲಯ್ಯ ಇದೀಗ ಇನ್ನು ಹೆಸರಿಡದ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಬಾಲಯ್ಯ ಸಿನಿಮಾಗೆ ನಾಯಕಿ ಯಾರು ಎನ್ನುವ ಪ್ರಶ್ನೆ ಎದುರಾಗಿತ್ತು. ಆದರೀಗ ಹೊಸ ಸಿನಿಮಾಗೆ ಕನ್ನಡತಿ ಹೆಸರು ಕೇಳಿಬರುತ್ತಿದೆ. ಹೌದು, ಕನ್ನಡದ ಯಂಗ್ ಆಂಡ್ ಬ್ಯೂಟಿಫುಲ್ ನಟಿ ಶ್ರೀಲೀಲಾ(Sreeleela) ಟಾಲಿವುಡ್ ಸ್ಟಾರ್ ಬಾಲಯ್ಯ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

ಅಂದಹಾಗೆ ಶ್ರೀಲೀಲಾ ಈಗಾಗಲೇ ತೆಲುಗು ಸಿನಿಮಾರಂಗದಲ್ಲಿ ಮಿಂಚುತ್ತಿದ್ದಾರೆ. ಪೆಲ್ಲಿ ಸಂದಡ್ ಸಿನಿಮಾದಲ್ಲಿ ಶ್ರೀಲೀಲಾ ಮಿಂಚಿದ್ದರು. ಈ ಸಿನಿಮಾ ಮೂಲಕ ತೆಲುಗು ಸಿನಿಮಾರಂಗಕ್ಕೆ ಕಾಲಿಟ್ಟ ನಟಿ ಶ್ರೀಲೀಲಾ ಸದ್ಯ ಮಾಸ್ ಮಹರಾಜ ರವಿತೇಜ ನಟನೆಯ ಧಮಾಕಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ನಡುವೆ ನಂದಮುರಿ ಬಾಲಕೃಷ್ಣ ಸಿನಿಮಾಗೂ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಸಿನಿಮಾತಂಡದ ಕಡೆಯಿಂದ ಇನ್ನು ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

Rashmika Mandannaಗೆ ಕನ್ನಡದಲ್ಲಿ ಕವನ ಹೇಳಿದ ನಟ Balayya!

ಅಂದಹಾಗೆ ಬಾಲಯ್ಯಗೆ ಶ್ರೀಲೀಲಾ ನಾಯಕಿನಾ ಎಂದು ಅಭಿಮಾನಿಗಳು ಅಚ್ಚರಿ ಪಡುತ್ತಿದ್ದಾರೆ. ಆದರೆ ಮೂಲಗಳ ಪ್ರಕಾರ ಶ್ರೀಲೀಲಾ ಬಾಲಯ್ಯಗೆ ನಾಯಕಿಯಾಗಿ ಪಾತ್ರ ಮಾಡುತ್ತಿಲ್ಲ. ಬದಲಿಗೆ ಬಾಲಯ್ಯ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ಬಾಲಯ್ಯ 50 ವರ್ಷದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇನ್ನು ಈ ಸಿನಿಮಾಗೆ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಫ್-3 ಬಳಿಕ ಅನಿಲ್ ರವಿಪುಡಿ ಬಾಲಯ್ಯ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಶ್ರೀಲೀಲಾ ಜೊತೆ ಮಾತುಕತೆ ನಡೆದಿದ್ದು ಶ್ರೀಲೀಲಾ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಈ ಸಿನಿಮಾಗೆ ನಟಿ ಶ್ರೀಲೀಲಾ ಅವರೇ ಸೂಕ್ತ್ ಎನ್ನುವ ಕಾರಣಕ್ಕೆ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ನಿರ್ದೇಶಕ ಅನಿಲ್ ಸ್ಟಾರ್ ನಟ ಬಾಲಯ್ಯ ಜೊತೆ ದೊಡ್ಡ ಪ್ರಯೋಗಕ್ಕೆ ಮುಂದಾಗಿದ್ದಾರೆ., ಈ ಸಿನಿಮಾದ ಮೂಲಕ ತೆಲುಗು ಸಿನಿಮಾರಂಗದಲ್ಲಿ ತಂದೆ-ಮಗಳ ಸಂಬಂಧದ ಹೊಸ ಆಯಾಮವನ್ನು ಅನ್ವೇಷಿಸಲಿದ್ದಾರೆ. ಮತ್ತೊಂದೆಡೆ ಈ ಸಿನಿಮಾದಲ್ಲಿ ಬಾಲಯ್ಯ ಪತ್ನಿ ಪಾತ್ರದಲ್ಲಿ ಸ್ಟಾರ್ ನಟಿ ನಟಿಸಲಿದ್ದಾರೆ ಎನ್ನಲಾಗಿದೆ. ಆದರೆ ಅದು ಯಾರು ಎನ್ನುವುದು ಇನ್ನು ರಿವೀಲ್ ಆಗಿಲ್ಲ. ಸದ್ಯ ಶ್ರೀಲೀಲಾ ಆಯ್ಕೆ ಫೈನಲ್ ಆಗಿದೆ.

Duniya Vijay: ನಂದಮೂರಿ ಬಾಲಕೃಷ್ಣ ಚಿತ್ರದಲ್ಲಿ ದುನಿಯಾ ವಿಜಯ್ ಗೆಟಪ್​ ರಿವೀಲ್!

ಇನ್ನು ಶ್ರೀಲೀಲಾ ಸಿನಿಮಾಗಳ ಬಗ್ಗೆ ಹೇಳುವುದಾದರೇ ಕಿಸ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್‌ಗೆ ಕಾಲಿಟ್ಟ ನಟಿ ಬಳಿಕ ಭರಾಟೆ ಸಿನಿಮಾ ಮೂಲಕ ಶ್ರೀಮುರಳಿ ಜೊತೆ ಮಿಂಚಿದರು. ಈ ಎರಡು ಸಿನಿಮಾಗಳು ಶ್ರೀಲೀಲಾಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ನಂತರ ಬೈ ಟು ಲವ್ ಸಿನಿಮಾ ಮೂಲಕ ಮತ್ತೆ ಕನ್ನಡಿಗರ ಮುಂದೆ ಬಂದರು. ಇದೇ ಶ್ರೀಲೀಲಾ ನಟನೆಯ ಕೊನೆಯ ಕನ್ನಡದ ಸಿನಿಮಾ. ಸದ್ಯದಲ್ಲಿ ಶ್ರೀಲೀಲಾ ಕನ್ನಡದಲ್ಲಿ ಯಾವ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಇನ್ನು ತೆಲುಗಿನಲ್ಲಿ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರೀಲೀಲಾ ಇದೀಗ ಬಾಲಯ್ಯ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?