
ತಮಿಳುನಾಡಿನ ಮಾಜಿ ಸಿಎಂ ಹಾಗೂ ಪ್ರಸಿದ್ಧ ನಟಿ ಜಯಲಲಿತಾ ಬಯೋಪಿಕ್ ಅನ್ನು ತೆರೆ ಮೇಲೆ ತರುವ ಪ್ರಯತ್ನಕ್ಕೆ ಕೈ ಹಾಕಿರುವ ನಿರ್ದೇಶಕರಿಗೊಂದು ಸಲಾಂ ಹೇಳಲೇಬೇಕು, ಜನಪ್ರಿಯತೆ ಪಡೆದುಕೊಂಡಿರುವ ವ್ಯಕ್ತಿಗಳ ಬಯೋಪಿನ್ ನಿರ್ದೇಶಿಸುವುದೂ ಒಂದು ಟಾಸ್ಕ್. ಆದ್ರೆ ಪಾತ್ರ ಆಯ್ಕೆ ಮಾಡುವುದು ಮತ್ತೂ ದೊಡ್ಡ ಟಾಸ್ಕ್.
'ಎದೆಯ ಮೇಲೆ ಇರಬೇಕಾದ್ದು ಭುಜದ ಮೇಲೆ, ಟ್ರೋಲ್ ಆದ ಕಂಗನಾ!
ಬಾಲಿವುಡ್ ಕ್ವೀನ್ ಕಂಗನಾ ಈ ಚಿತ್ರದಲ್ಲಿ ನಟಿಸುತ್ತಾರೆ ಎಂಬ ವಿಚಾರ ಹರಿದಾಡುತ್ತಿದ್ದಂತೆ ಜನರಿಗೆ ಚಿತ್ರದ ಬಗ್ಗೆ ಭರವಸೆಯೇ ಹೊರಟು ಹೋಗಿತ್ತು. ಆದರೆ ಎರಡು ಶೇಡ್‌ನಲ್ಲಿ ರಿಲೀಸ್ ಆದ ಫಸ್ಟ್ ಲುಕ್ ನೋಡಿ ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ತಮಿಳುನಾಡಿನ ಅಮ್ಮಾ ಅಭಿಮಾನಿಗಳು ಇನ್ನಿತರೆ ಪಾತ್ರಗಳನ್ನು ಯಾರಪ್ಪಾ ನಟಿಸುತ್ತಾರೆ ಎಂಬ ಕುತೂಹಲದಲ್ಲಿ ಇದ್ದರು.
ಕಂಗನಾ 'ತಲೈವಿ' ಲುಕ್ ಚೆನ್ನಾಗಿಲ್ಲ ಎಂದವರಿಗೆ ರಂಗೋಲಿ ಕೊಟ್ರು ಖಡಕ್ ಉತ್ತರ
ಚಿತ್ರ ತಂಡದ ವರದಿ ಪ್ರಕಾರ ಜಯಲಲಿತಾ ಎನ್ನುವ ವ್ಯಕ್ತಿತ್ವವನ್ನು ಕಡೆವರೆಗೂ ಕಂಗನಾ ಅವರೇ ನಿಭಾಯಿಸುತ್ತಾರೆ. ಶೋಭನ್ ಬಾಬು ಪಾತ್ರದಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಳ್ಳಲಿದ್ದಾರೆ ಮತ್ತು ಗೆಳತಿ ಶಶಿಕಲಾ ಪಾತ್ರದಲ್ಲಿ 'ರಾಮ್' ಚಿತ್ರದ ನಟಿ ಪ್ರಿಯಾಮಣಿ ನಟಿಸಲಿದ್ದಾರೆ. ಈ ಹಿಂದೆ ಅಮಲಾ ಪೌಲ್ ಈ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಎಲ್ಲಾ ಊಹಪೋಹಗಳಿಗೆ ಬ್ರೇಕ್ ಬಿದ್ದಿದ್ದು, ಶಶಿಕಲಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟಿ ಯಾರೆಂಬುದು ಬಹಿರಂಗವಾಗಿದೆ.
'ತಲೈವಿ'ಯಲ್ಲಿ ಕಾಂಟ್ರೋವರ್ಸಿ ಹುಟ್ಟು ಹಾಕಲಿದ್ದಾರಾ ವಿಜಯ ದೇವರಕೊಂಡ?
ಪ್ರಿಯಾಮಣಿ ತುಂಬಾ ಸ್ವಾಭಿಮಾನ ಹೊಂದಿರುವ ವ್ಯಕ್ತಿ. ಆಕೆಗೆ ಶಶಿಕಲಾ ಪಾತ್ರ ಸೂಕ್ತ ಅಲ್ಲ ಎಂದು ಕೆಲವು ಅಭಿಮಾನಿಗಳು ಮಾತನಾಡುತ್ತಿದ್ದಾರೆ. ಜಯಲಲಿತಾ ಸಾವಿನ ಹಿಂದಿನ ರಹಸ್ಯ ಹಲವು ತಿರುವುಗಳನ್ನು ಪಡೆದುಕೊಂಡಿತ್ತು. ಇದರಲ್ಲಿ ಗೆಳತಿ ಶಶಿಕಲಾ ಕೈವಾಡವೂ ಇದೆ ಎನ್ನಲಾಗುತ್ತಿತ್ತು. ಅಷ್ಟೇ ಅಲ್ಲ ಅಕ್ರಮ ಆಸ್ತಿ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿಯೇ ಕಂಬಿ ಎಣಿಸುತ್ತಿದ್ದಾರೆ. ಇಂಥ ಪಾತ್ರಕ್ಕೆ ಪ್ರಿಯಾಮಣಿ ತಕ್ಕವಳಲ್ಲ ಎಂಬುವುದು ನಟಿಯ ಅಭಿಮಾನಿಗಳ ಅಭಿಮತ. ಇಂಥ ಪಾತ್ರಕ್ಕೆ ನಮ್ಮ ಕನ್ನಡದ ನಟಿ ಬೇಡ ಎಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಪರ, ವಿರೋಧ ಚರ್ಚೆ ನಡೆಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.